Goan-Style Breakfast: ರುಚಿಕರವಾದ ಉಪಹಾರಕ್ಕಾಗಿ ತಯಾರಿಸಿ ಗೋವಾನ್ ಶೈಲಿಯ ಪುರಿ-ಆಲೂ ಭಾಜಿ

ಆಲೂ ಕಿ ಸಬ್ಜಿಯ ಈ ಗೋವಾನ್ ಆವೃತ್ತಿಯ ಉಪಹಾರವು ತುಂಬಾ ಮೃದುವಾದ ಹಾಗೂ ಉತ್ತರ ಭಾರತದ ಶೈಲಿಗೆ ಹೋಲಿಸಿದರೆ ಇದು ಒಳ್ಳೆ ರುಚಿಯನ್ನು ನೀಡುತ್ತದೆ. ಈ ಸಂಪೂರ್ಣ ಪಾಕ ವಿಧಾನವನ್ನು ತಿಳಿಯಲು ಮುಂದೆ ಓದಿ.

Goan-Style Breakfast: ರುಚಿಕರವಾದ ಉಪಹಾರಕ್ಕಾಗಿ ತಯಾರಿಸಿ ಗೋವಾನ್ ಶೈಲಿಯ ಪುರಿ-ಆಲೂ ಭಾಜಿ
ಗೋವಾನ್ ಶೈಲಿಯ ಪುರಿ-ಆಲೂ ಭಾಜಿImage Credit source: iStock
Follow us
| Updated By: ಅಕ್ಷತಾ ವರ್ಕಾಡಿ

Updated on: Dec 28, 2022 | 5:56 PM

ಬಿಸಿಬಿಸಿ ಹಾಗೂ ಗರಿಗರಿಯಾದ ಪುರಿ, ಬೆಚ್ಚಗಿನ ಭಾಜಿಯ ರುಚಿಯು ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಭಾರತದ ಪ್ರತಿಯೊಂದು ಭಾಗದಲ್ಲಿಯೂ ಜನರು ಈ ಒಂದು ಉಪಹಾರವನ್ನು ಅಪಾರವಾಗಿ ಪ್ರೀತಿಸುತ್ತಾರೆ. ಬೆಂಗಾಲಿಗಳು ಲುಚಿ ಮತ್ತು ಸಾದಾ ಆಲೂ ತೋರ್ಕರಿಯನ್ನು ಇಷ್ಟಪಟ್ಟರೆ, ಉತ್ತರ ಭಾರತೀಯರು ಬೆಡ್ಮಿ ಪುರಿ ಮತ್ತು ಆಲೂ ರಸೆದಾರ್‌ನ್ನು ಇಷ್ಟಪಡುತ್ತಾರೆ. ಗೋವಾ ಜನರು ಪೂರಿ ಮತ್ತು ಆಲೂ ಕಿ ಸಬ್ಜಿಯನ್ನು ಬಹಳ ಇಷ್ಟಪಡುತ್ತಾರೆ. ಕಟ್ಲೆಟಗ ಪಾವೋ, ಫಿಶ್ ಕರಿ-ರೈಸ್ ಮತ್ತು ಇನ್ನಿತರ ಭಕ್ಷ್ಯಗಳ ಜೊತೆಗೆ ಪೂರಿ-ಸಬ್ಜಿ ಕೂಡಾ ಗೋವಾದ ಸ್ಥಳೀಯ ತಿಸಿಸುಗಳಲ್ಲಿ ಜನಪ್ರಿಯವಾಗಿದೆ. ಅಲ್ಲಿನ ಹೋಟೆಲ್‌ಗಳಲ್ಲಿ ಕೇವಲ ಉಪಹಾರದ ಸಮಯದಲ್ಲಿ ಮಾತ್ರವಲ್ಲ, ಎಲ್ಲಾ ಸಮಯದಲ್ಲೂ ಈ ಪೂರಿ ಭಾಜಿ ಅಲ್ಲಿ ಲಭ್ಯವಿರುತ್ತದೆ. ಈಗ ಮನೆಯಲ್ಲಿಯೇ ಗೋವಾ ಶೈಲಿಯ ಪೂರಿ ಭಾಜಿ ಮಾಡುವ ವಿಧಾನವನ್ನು ಕಲಿಯೋಣ.

ಆಲೂ ಕಿ ಸಬ್ಜಿಯ ಈ ಗೋವಾನ್ ಆವೃತ್ತಿಯ ಉಪಹಾರವು ತುಂಬಾ ಮೃದುವಾದ ಹಾಗೂ ಉತ್ತರ ಭಾರತದ ಶೈಲಿಗೆ ಹೋಲಿಸಿದರೆ ಇದು ಸೂಕ್ಷ ರುಚಿಯನ್ನು ನೀಡುತ್ತದೆ. ಈ ಸಂಪೂರ್ಣ ಪಾಕ ವಿಧಾನವನ್ನು ತಿಳಿಯಲು ಮುಂದೆ ಓದಿ. ಪುರಿ ಸಬ್ಜಿಯ ಗೋವನ್ ಶೈಲಿಯ ಪದ್ದತಿ ಉಳಿದ ಕಡೆಗಳ ಪುರಿ ಸಬ್ಜಿಗಳಿಗಿಂತ ಭಿನ್ನವಾಗಿರಲು ಕಾರಣವೇ ಅವುಗಳಲ್ಲಿ ಬಳಸುವ ಮಸಾಲೆ ಪದಾರ್ಥಗಳು. ಇದು ಸೋಂಪು, ಶುಂಠಿ ಮತ್ತು ಗರಂ ಮಸಾಲಗಳ ಬಲವಾದ ಸುವಾಸನೆ ಮತ್ತು ಪರಿಮಳದಿಂದ ಸಮೃದ್ಧವಾಗಿದೆ.

ಗೋವಾನ್ ಶೈಲಿಯ ಆಲೂಗಡ್ಡೆಯ ಭಾಜಿ ಪಾಕ ವಿಧಾನ:

ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಕುದಿಸುವ ಮೂಲಕ ಪ್ರಾರಂಭಿಸಿ. ಆಲೂಗಡ್ಡೆ ಮೃದುವಾದ ಬಳಿಕ ಅವುಗಳನ್ನು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ ಮತ್ತು ಕೆಲವು ಆಲೂಗಡ್ಡೆ ತುಂಡುಗಳನ್ನು ಅವುಗಳನ್ನು ಮ್ಯಾಶ್ ಮಾಡಿ ಇಟ್ಟುಕೊಳ್ಳಿ. ಈ ಮ್ಯಾಶ್ ಗ್ರೇವಿಯನ್ನು ನಯವಾಗಿಸಲು ಸಹಾಯ ಮಾಡುತ್ತದೆ.

ಈಗ ಒಂದು ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ ಅದು ಬಿಸಿಯಾದ ಬಳಿಕ ಪ್ಯಾನ್‌ಗೆ ಕರಿಬೇವು, ಜೀರಿಗೆ, ಸಾಸಿವೆ, ಹಿಂಗ್ ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೆöÊ ಮಾಡಿಕೊಳ್ಳಿ, ನಂತರ ಕತ್ತರಿಸಿದ ಆಲೂಗಡ್ಡೆ ತುಂಡು, ಬೆಳ್ಳುಳ್ಳಿ ಮತ್ತು ಮಸಾಲೆ (ಉಪ್ಪು, ಸಕ್ಕರೆ, ಅರಶಿನ) ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. 3 ರಿಂದ 4 ನಿಮಿಷ ಬೇಯಿಸಿ. ನಂತರ ಇದಕ್ಕೆ ಮ್ಯಾಶ್ ಮಾಡಿ ಇಟ್ಟುಕೊಂಡ ಆಲುಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ (ಕತ್ತರಿಸಿ ಹಾಕಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಬೇಡಿ) ಈಗ ಆಲೂ ಸಬ್ಜಿ ಸಿದ್ಧ.

ಇದನ್ನೂ ಓದಿ: ಓವನ್ ಇಲ್ಲದೇ ಮನೆಯಲ್ಲಿಯೇ ತಯಾರಿಸಿ ಫ್ರೂಟ್ ಕೇಕ್‌

ಗರಿಗರಿಯಾದ ಪೂರಿ ಪಾಕ ವಿಧಾನ:

ಬೇಕಾಗುವ ಸಾಮಾಗ್ರಿಗಳು: 2 ಕಪ್ ಗೋಧಿ ಹಿಟ್ಟು 4 ಟೀ ಸ್ಪೂನ್ ತುಪ್ಪ 1 ಟೀ ಸ್ಪೂನ್ ಉಪ್ಪು ಪೂರಿಯನ್ನು ಡೀಪ್ ಫ್ರೈ ಮಾಡಲು ಬೇಕಾಗುವಷ್ಟು ಎಣ್ಣೆ

ಪೂರಿ ಮಾಡುವ ವಿಧಾನ:

ಗೋಧಿ ಹಿಟ್ಟಿಗೆ ತುಪ್ಪ, ಉಪ್ಪು ಸೇರಿಸಿ ನೀರನ್ನು ಬೆರೆಸಿ ಚೆನ್ನಾಗಿ ಹದವಾಗುವವರೆಗೆ ಹಿಟ್ಟನ್ನು ಕಳಸಿಕೊಳ್ಳಿ ಮತ್ತು ತಯಾಸಿದ ಹಿಟ್ಟನ್ನು 30 ನಿಮಿಷಗಳ ಕಾಲ ಮೃದುವಾಗಲು ಬಿಟ್ಟು ಬಿಡಿ. ನಂತರ ಎಣ್ಣೆಯನ್ನು ಬಿಸಿ ಮಾಡಿ ಚೆನ್ನಾಗಿ ಲಟ್ಟಿದ ಪುರಿಯನ್ನು ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ. ಈಗ ಗರಿಗರಿಯಾದ ಪುರಿ ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: