AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Fruitcake Day: ಓವನ್ ಇಲ್ಲದೇ ಮನೆಯಲ್ಲಿಯೇ ತಯಾರಿಸಿ ಫ್ರೂಟ್ ಕೇಕ್‌

ಕೇಕ್ ಮಾಡಲು ಓವನ್ ಇಲ್ಲ ಎಂಬ ಚಿಂತೆ ನಿಮ್ಮಲ್ಲಿ ಇದ್ದರೆ, ಈ ಚಿಂತೆಯನ್ನು ಈಗಾಲೇ ಬಿಟ್ಟು ಬಿಡಿ. ನೀವು ಓವನ್ ಇಲ್ಲದೆಯೂ ಕೇಕ್ ತಯಾರಿಸಬಹುದಾಗಿದೆ.

National Fruitcake Day:  ಓವನ್ ಇಲ್ಲದೇ ಮನೆಯಲ್ಲಿಯೇ ತಯಾರಿಸಿ ಫ್ರೂಟ್ ಕೇಕ್‌
ಸಾಂದರ್ಭಿಕ ಚಿತ್ರImage Credit source: Youtube
TV9 Web
| Updated By: ಅಕ್ಷತಾ ವರ್ಕಾಡಿ|

Updated on:Dec 27, 2022 | 11:09 AM

Share

ರಾಷ್ಟ್ರೀಯ ಹಣ್ಣಿನ ಕೇಕ್ ದಿನ(National Fruitcake Day)ವನ್ನು ಪ್ರತಿ ವರ್ಷ ಡಿಸೆಂಬರ್‌ 27ರಂದು ಆಚರಿಸಲಾಗುತ್ತದೆ. ಬಗೆ ಬಗೆಯ ಹಣ್ಣುಗಳನ್ನು ಬಳಸಿಕೊಂಡು ಜೊತೆಗೆ ಹಣ್ಣುಗಳನ್ನು ಒಂದೇ ಸಮನಾಗಿ ಕತ್ತರಿಸಿ ಸುಂದರವಾಗಿ ಹಣ್ಣುಗಳಿಂದಲೇ ಕೇಕ್​ನ್ನು ಅಲಂಕರಿಸಲಾಗುತ್ತದೆ. ಈ ಫ್ರೂಟ್ಸ್ ಕೇಕ್ನಿಂದ ನಿಮ್ಮ ದೇಹದ ಆರೋಗ್ಯದ ಮೇಲೂ ಸಾಕಷ್ಟು ಪ್ರಯೋಜನಗಳಿವೆ . ಇದರಲ್ಲಿ ಸಾಕಷ್ಟು ಹಣ್ಣುಗಳನ್ನು ಬಳಸುವುದರಿಂದ ಇದು ನಿಮ್ಮ ದೇಹಕ್ಕೆ ಪೋಷಕಾಂಶವನ್ನು ಒದಗಿಸುವಲ್ಲಿ ಸಹಾಯಮಾಡುತ್ತದೆ.

ರಾಷ್ಟ್ರೀಯ ಫ್ರೂಟ್ ಕೇಕ್ ದಿನವನ್ನು ಮೊದಲು ಪ್ರಾರಂಭಿಸಿದ್ದು ರೋಮ್‌ನಲ್ಲಿ. ಇಲ್ಲಿ ಮೊದಲ ಬಾರಿಗೆ ದಾಳಿಂಬೆ, ಒಣದ್ರಾಕ್ಷಿ ಮತ್ತು ಬಾರ್ಲಿಗಳನ್ನು ಬಳಸಿ ಮ್ಯಾಶ್‌ ಮಾಡಿ ತಯಾರಿಸಲಾಯಿತು. ಕಾಲ ಕ್ರಮೇಣ ಮುಂದುವರಿಯುತ್ತಾ ಹೋದ ಹಾಗೇ ವಿವಿಧ ಬಗೆಯ ಹಣ್ಣುಗಳನ್ನು ಬಳಸಿ ಕೇಕ್ ತಯಾರಿಸುವ ಟ್ರೆಂಡ್ ಶುರುವಾಯಿತು.

ಈ ವಿಶೇಷ ದಿನದಂದು ನಿಮ್ಮ ಮನೆಯಲ್ಲಿಯೇ ಆರೋಗ್ಯಕರ ಫ್ರೂಟ್ ಕೇಕ್ ತಯಾರಿಸಲು ಪಾಕ ವಿಧಾನ ಇಲ್ಲಿದೆ. ಇದರಿಂದ ನೀವು ಸುಲಭವಾಗಿ ಮನೆಯಲ್ಲಿಯೇ ಯಾವುದೇ ಕಲಬೆರಕೆಯನ್ನು ಬಳಸದೇ ತಯಾರಿಸಬಹುದಾಗಿದೆ. ಜೊತೆಗೆ ಕೇಕ್ ಮಾಡಲು ಓವನ್ ಇಲ್ಲ ಚಿಂತೆ ನಿಮ್ಮಲ್ಲಿ ಇದ್ದರೆ, ಈ ಚಿಂತೆಯನ್ನು ಈಗಾಲೇ ಬಿಟ್ಟು ಬಿಡಿ. ನೀವು ಓವನ್ ಇಲ್ಲದೆಯೂ ಕೇಕ್ ತಯಾರಿಸಲು ಈ ವಿಡಿಯೋ ನೋಡಿ.

ಇದನ್ನೂ ಓದಿ: ಚಳಿಗಾಲದಲ್ಲಿ ನೀವು ಸೇವಿಸುವ ಆಹಾರ ಹೇಗಿರಬೇಕು, ಯಾವ ಆಹಾರ ಆರೋಗ್ಯಕ್ಕೆ ಹಾನಿಕರ ತಿಳಿಯಿರಿ

ಈ ಫ್ರೂಟ್ ಕೇಕ್​ನಿಂದ ನಿಮ್ಮ ಆರೋಗ್ಯದ ಮೇಲೆ ಅಧ್ಬುತ ಪ್ರಯೋಜನಗಳಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಹಣ್ಣಿನಿಂದ ತಯಾರಿಸಿದ ಈ ಕೇಕನ್ನು ಸವಿಯಬಹುದು. ಯಾಕೆಂದರೆ ಸಾಮಾನ್ಯವಾಗಿ ಕೇಕ್ ತಯಾರಿಸುವಾಗ ಸಾಕಷ್ಟು ರುಚಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಜೊತೆಗೆ ಸಿಹಿಕಾರಕವನ್ನೂ ಕೂಡ ಸೇರಿಸಲಾಗುತ್ತದೆ. ಆದರೆ ಈ ಕೇಕ್​ನಲ್ಲಿ ಹಣ್ಣುಗಳನ್ನು ಬಳಸುವುದರಿಂದ ಯಾವುದೇ ಸಿಹಿಕಾರಕವನ್ನು ಬಳಸುವ ಅಗತ್ಯವಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:05 am, Tue, 27 December 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ