Winter foods: ಚಳಿಗಾಲದಲ್ಲಿ ನೀವು ಸೇವಿಸುವ ಆಹಾರ ಹೇಗಿರಬೇಕು, ಯಾವ ಆಹಾರ ಆರೋಗ್ಯಕ್ಕೆ ಹಾನಿಕರ ತಿಳಿಯಿರಿ

ಪ್ರತಿಯೊಬ್ಬರಿಗೂ ಚಳಿಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳ ಬಗ್ಗೆ ವಿಶೇಷ ಒಲವು. ನಿಮ್ಮ ನಾಲಿಗೆಗೆ ರುಚಿ ನೀಡುವ ಆಹಾರಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು ಎಂದು ಪೌಷ್ಟಿಕತಜ್ಞರಾದ ಡಾ ರೋಹಿಣಿ ಪಾಟೀಲ್ ಎಚ್ಚರಿಸಿದ್ದಾರೆ.

Winter foods: ಚಳಿಗಾಲದಲ್ಲಿ ನೀವು ಸೇವಿಸುವ ಆಹಾರ ಹೇಗಿರಬೇಕು, ಯಾವ ಆಹಾರ ಆರೋಗ್ಯಕ್ಕೆ ಹಾನಿಕರ ತಿಳಿಯಿರಿ
ಸಾಂದರ್ಭಿಕ ಚಿತ್ರImage Credit source: Pinterest
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 13, 2022 | 5:08 PM

ಚಳಿಗಾಲ(Winter)ದಲ್ಲಿ ಸಮಾನ್ಯವಾಗಿ ತಿನ್ನುವ ಬಯಕೆಯು ಹೆಚ್ಚಿರುವುದರಿಂದ ನೀವು ಸೇವಿಸುವ ಆಹಾರಕ್ರಮಗಳ ಬಗ್ಗೆ ಎಚ್ಚರ ವಹಿಸಿ. ಚಳಿಗಾಲದ ತಂಪು ವಾತಾವರಣವು ನಿಮ್ಮ ದೇಹದಲ್ಲಿ ಉಷ್ಣತೆಯನ್ನು ಕಡಿಮೆಮಾಡುತ್ತದೆ. ಆ ಸಮಯದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಕ್ಯಾಲೋರಿ-ಭರಿತ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ದೇಹದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ನಿಮ್ಮ ನಾಲಿಗೆಗೆ ರುಚಿ ನೀಡುವ ಆಹಾರಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು ಎಂದು ಪೌಷ್ಟಿಕತಜ್ಞರಾದ ಡಾ ರೋಹಿಣಿ ಪಾಟೀಲ್ ಎಚ್ಚರಿಸಿದ್ದಾರೆ.

ಅತಿಯಾದ ಕೊಬ್ಬಿನ ಅಂಶವಿರುವ ಆಹಾರವನ್ನು ಸೇವಿಸಿದಾಗ ನಿಮ್ಮ ಅಪಧಮನಿಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದಿದ್ದರೆ, ಕಾಲಕ್ರಮೇಣ ಇದು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು ಎಂದು ಪಾಟೀಲ್ ಹೇಳುತ್ತಾರೆ. ಈ ಚಳಿಗಾಲದಲ್ಲಿ ನೀವು ಈ ಕೆಳಗಿನ ಆಹಾರಗಳ ಕುರಿತು ಎಚ್ಚರ ವಹಿಸಿ.

ಸಿಹಿ ತಿಂಡಿ: ಐಸ್ ಕ್ರೀಮ್ ಮತ್ತು ಕೇಕ್, ಪೇಸ್ಟ್ರಿ ಮತ್ತು ಕುಕ್ಕೀಸ್ ಗಳಲ್ಲಿ ಸಕ್ಕರೆಯನ್ನು ಸೇರಿಸಲಾಗುತ್ತದೆ. ಇಂತಹ ಬೇಯಿಸಿದ ಪದಾರ್ಥಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೇರಳವಾಗಿರುತ್ತದೆ. ಆದ್ದರಿಂದ ನಿಮಗೆ ಸಿಹಿ ತಿಂಡಿ ಪ್ರಿಯರಾಗಿದ್ದರೆ ವಿಶೇಷವಾಗಿ ಚಳಿಗಾಲದಲ್ಲಿ ಎನಾದರೂ ಸೇವಿಸುವ ಬಯಕೆ ಹೆಚ್ಚಿದ್ದಾಗ ಆದಷ್ಟು ಆರೋಗ್ಯದ ಕುರಿತು ಎಚ್ಚರ ವಹಿಸಿ. ಆದರೆ, ಸಿಹಿತಿಂಡಿಯನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಸಿಹಿತಿಂಡಿಗಾಗಿ, ಹಣ್ಣುಗಳೊಂದಿಗೆ ಕಡಿಮೆ-ಕೊಬ್ಬಿನ ಹೆಪ್ಪುಗಟ್ಟಿದ ಮೊಸರನ್ನು ಪ್ರಯತ್ನಿಸಿ. ಜೊತೆಗೆ ಬೆಣ್ಣೆಯನ್ನು ಆದಷ್ಟು ಕಡಿಮೆ ಬಳಸಿ ಎಂದು ಹೇಳುತ್ತಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮಸಾಲೆಯುಕ್ತ ಕಿತ್ತಳೆ ಕಾಕ್ಟೈಲ್ ಸವಿಯಿರಿ

ಮಾಂಸ: ವಿಶೇಷವಾಗಿ ಕುರಿಮರಿ, ಹಂದಿ ಮಾಂಸಗಳಲ್ಲಿ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಅಧಿಕವಾಗಿರುತ್ತದೆ. ಇದು ವರ್ಷದ ಕೊನೆಯಾಗಿರುವುರಿಂದ ಸಂಭ್ರಮ ಸಡಗರಗಳಲ್ಲಿ ಮಾಂಸಗಳನ್ನು ಸೇವಿಸುವಾಗ ಎಚ್ಚರದಿಂದಿರುವುದು ಅತ್ಯಂತ ಅಗತ್ಯವಾಗಿದೆ. ನೀವು ಈಗಾಗಲೇ ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ, ಇದು ಅಪಾಯಕಾರಿ ಹಾಗೂ ಜೊತೆಗೆ ನಿಮಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ ಮಾರಣಾಂತಿಕವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದ ಈ ಮಾಂಸಗಳ ಬದಲಾಗಿ ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿರುವ ಮೀನು ಮತ್ತು ಕೋಳಿಯನ್ನು ಸೇವಿಸಿ.

ಇದನ್ನೂ ಓದಿ: ಬೆಂಗಳೂರಿನ ತಿಂಡಿ ಬೀದಿ ಇನ್ನುಂದೆ ಹೊಸ ಸೌಕರ್ಯದೊಂದಿಗೆ ವಿನೂತನ ರೂಪ ಪಡೆಯಲಿದೆ

ಕರಿದ ಆಹಾರಗಳು: ಪ್ರತಿಯೊಬ್ಬರಿಗೂ ಚಳಿಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳ ಬಗ್ಗೆ ವಿಶೇಷ ಒಲವು. ಆಲೂಗಡ್ಡೆ ಚಿಪ್ಸ್, ಪಕೋಡ, ಚಿಕನ್ ವಿಂಗ್ಸ್, ಬೋಂಡಾ ಇವುಗಳು ಚಳಿಗಾಲದಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ನಿಮಗೆ ಸಾಕಷ್ಟು ಉಲ್ಲಾಸವನ್ನು ನೀಡುತ್ತದೆ. ಆದರೆ ಈ ಕರಿದ ಆಹಾರಗಳು ಹೆಚ್ಚು ರುಚಿಯಾಗಿದ್ದು, ಹೆಚ್ಚು ಕ್ಯಾಲೋರಿಗಳನ್ನು ಹೊಂದಿದೆ. ಅದಾಗಿಯೂ ನೀವು ಕರಿದ ತಿಂಡಿಗಳನ್ನು ಸೇವಿಸಲು ಬಯಸಿದರೆ ಆಲಿವ್ ಎಣ್ಣೆಯನ್ನು ಬಳಸುವುದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ