AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spicy Orange Cocktail: ಚಳಿಗಾಲದಲ್ಲಿ ಮಸಾಲೆಯುಕ್ತ ಕಿತ್ತಳೆ ಕಾಕ್ಟೈಲ್ ಸವಿಯಿರಿ

ಚಳಿಗಾಲದಲ್ಲಿ ನಿಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಂಜೆಯ ಪಾರ್ಟಿ ಮಾಡಲು ಬಯಸುತ್ತೀರಾ? ಹಾಗಿದ್ದರೆ ಮನೆಯಲ್ಲಿಯೇ ಮಸಾಲೆಯುಕ್ತ ಕಿತ್ತಳೆ ಕಾಕ್ಟೈಲ್ ತಯಾರಿಸಿ.

Spicy Orange Cocktail: ಚಳಿಗಾಲದಲ್ಲಿ ಮಸಾಲೆಯುಕ್ತ ಕಿತ್ತಳೆ ಕಾಕ್ಟೈಲ್ ಸವಿಯಿರಿ
ಸಾಂದರ್ಭಿಕ ಚಿತ್ರImage Credit source: Yummly
TV9 Web
| Edited By: |

Updated on:Dec 09, 2022 | 12:40 PM

Share

ಚಳಿಗಾಲದಲ್ಲಿ ನಿಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಂಜೆಯ ಪಾರ್ಟಿ ಮಾಡಲು ಬಯಸುತ್ತೀರಾ? ಹಾಗಿದ್ದರೆ ಮನೆಯಲ್ಲಿಯೇ ಮಸಾಲೆಯುಕ್ತ ಕಿತ್ತಳೆ ಕಾಕ್ಟೈಲ್ (Cocktail) ತಯಾರಿಸಿ. ಇದು ಯಾವುದೇ ಕಲಬೆರಕೆ ಹಾಗೂ ಕೃತಕ ಬಣ್ಣಗಳನ್ನು ಬಳಸದೇ ಮಾಡುವುದರಿಂದ ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಕಾರಿಯಾಗಿದೆ. ತ್ವರಿತವಾಗಿ ಹಾಗೂ ಸುಲಭವಾಗಿ ತಯಾರಿಸಬಹುದಾದ ಈ ಕಿತ್ತಳೆ ಕಾಕ್ಟೈಲ್ ಒಮ್ಮೆ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು:

3 ಕಪ್ ಕಿತ್ತಳೆ ರಸ 90 ಮಿಲಿ ವೋಡ್ಕಾ 2 ಚಮಚ ಪುಡಿ ಸಕ್ಕರೆ 3 ಹಸಿರು ಮೆಣಸಿನಕಾಯಿ 1 ಕಪ್ ನೀರು 1/4 ಕಪ್ ನಿಂಬೆ ರಸ 8 ಐಸ್ ಕ್ಯೂಬ್ ಗಳು 1/2 ಚಮಚ ಕರಿಮೆಣಸು 1/2 ಚಮಚ ಕೋಷರ್ ಉಪ್ಪು 5 ನಿಂಬೆ ತುಂಡುಗಳು

ಮಾಡುವ ವಿಧಾನ:

ಹಂತ 1 ಸಿಟ್ರಸ್ ರಸವನ್ನು ಮಿಶ್ರಣ ಮಾಡಿ:

ದೊಡ್ಡ ಗಾಜಿನ ಜಾರ್ ಅನ್ನು ತೆಗೆದುಕೊಂಡು ಕಿತ್ತಳೆ ರಸ, ನಿಂಬೆ ರಸ ಮತ್ತು ವೋಡ್ಕಾವನ್ನು ಒಟ್ಟಿಗೆ ಸೇರಿಸಿ.

ಹಂತ 2 ಮಸಾಲೆ ಮತ್ತು ಸಕ್ಕರೆ ಸೇರಿಸಿ:

ನಂತರ ಇದಕ್ಕೆ ಸಕ್ಕರೆ, ಕರಿಮೆಣಸು, ಹಸಿರು ಮೆಣಸಿನಕಾಯಿ, ಉಪ್ಪು ಮತ್ತು ಐಸ್ ಕ್ಯೂಬ್ ಗಳನ್ನು ಸೇರಿಸಿ. ಇದಾದ ನಂತರ ಸ್ವಲ್ಪ ನೀರು, ಉದ್ದಕ್ಕೆ ಕತ್ತರಿಸಿ ನಿಂಬೆ ಚೂರುಗಳನ್ನು ಸೇರಿಸಿ ಮತ್ತು ಆಕರ್ಷಕವಾಗಿ ಅಲಂಕರಿಸಿ. ನಂತರ ನಿಮ್ಮ ಪಾರ್ಟಿಯಲ್ಲಿ ಬಂದ ಸ್ನೇಹಿತರು ಅಥವಾ ಕುಟುಂಬದವರಿಗೆ ಸರ್ವ್​ ಮಾಡಿ.

ಇದನ್ನು ಓದಿ:

ಇದು ಈ ಚಳಿಗಾಲದಲ್ಲಿ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಕಿತ್ತಳೆಯನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ತೇವಾಂಶವನ್ನು ಒದಗಿಸುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ಒಡೆಯುವ ಅಥವಾ ಬಿರುಕು ಬಿಡುವ ಚರ್ಮದ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 7:30 pm, Thu, 8 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ