AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips For Winter: ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಿ, ಇಲ್ಲಿವೆ ಬ್ಯೂಟಿ ಟಿಪ್ಸ್

ಚಳಿಗಾಲದಲ್ಲಿ ಸಾಮಾನ್ಯವಾಗಿ ತ್ವಚೆಯು ತೇವಾಂಶವನ್ನು ಕಳೆದುಕೊಳ್ಳುವುದರಿಂದ ಬಿರುಕು ಬಿಡುತ್ತದೆ. ಚರ್ಮಕ್ಕೆ ತೇವಾಂಶವು ಅಗತ್ಯವಿರುವುದರಿಂದ ನಿಮ್ಮ ತ್ವಚೆಗೆ ಮಾಯಿಶ್ಚರೈಸೇಶನ್ ಮಾಡುವುದು ತುಂಬಾ ಅಗತ್ಯವಾಗಿದೆ.

Beauty Tips For Winter: ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಿ, ಇಲ್ಲಿವೆ ಬ್ಯೂಟಿ ಟಿಪ್ಸ್
ಸಾಂದರ್ಭಿಕ ಚಿತ್ರImage Credit source: Google
TV9 Web
| Edited By: |

Updated on:Dec 08, 2022 | 11:35 AM

Share

ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಪ್ರತಿದಿನ ತ್ವಚೆಯ ಆರೈಕೆಯ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ತ್ವಚೆಯು ತೇವಾಂಶವನ್ನು ಕಳೆದುಕೊಳ್ಳುವುದರಿಂದ ಬಿರುಕು ಬಿಡುತ್ತದೆ. ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ತೇವಾಂಶವು ಅಗತ್ಯವಿರುವುದರಿಂದ ನಿಮ್ಮ ತ್ವಚೆಗೆ ಮಾಯಿಶ್ಚರೈಸೇಶನ್ ಮಾಡುವುದು ತುಂಬಾ ಅಗತ್ಯವಾಗಿದೆ. ಇದು ನಿಮ್ಮ ತ್ವಚೆಯನ್ನು ಮೃದುವಾಗಿಡಲು ಸಹಾಯಮಾಡುತ್ತದೆ. ಈ ಚಳಿಗಾಲದ ಋತುವಿನಲ್ಲಿ ತ್ವಚೆಯ ಆರೈಕೆಗೆ ತಜ್ಞರು ನೀಡಿರುವ ಒಂದಿಷ್ಟು ಸಲಹೆಗಳು ಇಲ್ಲಿವೆ.

1. ಕ್ಲೆನ್ಸರ್‌ ಬಳಸಿ:

ಚಳಿಗಾಲದ ಋತುವಿನಲ್ಲಿ ತ್ವಚೆಗೆ ಹೆಚ್ಚಿನ ತೇವಾಂಶದ ಅಗತ್ಯವಿರುವುದ್ದರಿಂದ ನೀವು ಕ್ಲೆನ್ಸರ್ ಬಳಸುವುದು ಅತ್ಯಂತ ಅಗತ್ಯವಾಗಿದೆ. ಪ್ರತಿದಿನ ಎರಡು ಬಾರಿ ಮೃದುವಾದ ಕ್ಲೆನ್ಸರ್ ಬಳಸಿ ಮತ್ತು ನಿಮ್ಮ ಚರ್ಮವನ್ನು ನೀರಿನಿಂದ ಎರಡು ಮೂರು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡುವುದರಿಂದ ಶುಷ್ಕ, ಒಡೆದ ಚರ್ಮವನ್ನು ವಿಶ್ರಾಂತಿ ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ.

2. ನಿರ್ಜಲೀಕರಣ:

ಚಳಿಗಾಲದ ತಂಪಾದ ಹವಾಮಾನವು ನಿಮಗೆ ತಂಪಾಗಿನ ಅನುಭವನ್ನು ನೀಡಿದರೂ ಕೂಡ ಇದು ತ್ವಚೆಯು ತೇವಾಂಶವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ತ್ವಚೆಯ ಆರೋಗ್ಯಕ್ಕಾಗಿ ದಿನಕ್ಕೆ ಕನಿಷ್ಟ 2ಲೀಟರ್ ನೀರು ಕುಡಿಯಿರಿ. ಜೊತೆಗೆ ಮಾಯಿಶ್ಚರೈಸೇಶನ್ ಮಾಡುವುದು ತುಂಬಾ ಅಗತ್ಯವಾಗಿದೆ. ಸೀರಮ್‌ಗಳಲ್ಲಿ ಹೈಲುರಾನಿಕ್ ಆಮ್ಲದಂತಹ ಪದಾರ್ಥಗಳನ್ನು ಈ ಚಳಿಗಾಲದಲ್ಲಿ ಆಯ್ಕೆಮಾಡಿ.

3. ಎಕ್ಸ್‌ಫೋಲಿಯೇಶನ್ ಅತ್ಯಗತ್ಯ:

ಎಕ್ಸ್‌ಫೋಲಿಯೇಶನ್ ಎಂದರೆ ಸತ್ತ ಚರ್ಮದಲ್ಲಿನ ಜೀವಕೋಶಗಳನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದೆ. ಇದು ಚರ್ಮದ ಇದು ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ನೀವು ನಿಮ್ಮ ಚರ್ಮದ ರಕ್ಷಣೆಗಾಗಿ ಫೇಸ್ ಪ್ಯಾಕ್ ಮಾಡಿದಾಗ ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚು ಸ್ಕ್ರಬ್ ಮಾಡಬೇಡಿ. ತುಂಬಾ ಗಟ್ಟಿಯಾಗಿ ಸ್ಕ್ರಬ್ ಮಾಡುವುದರಿಂದ ನಿಮ್ಮ ಚರ್ಮದ ರಕ್ಷಣಾತ್ಮಕ ತಡೆಗೋಡೆ ಒಡೆಯಬಹುದು.

4. ಚಳಿಗಾಲದಲ್ಲಿ ದಿನಚರಿಯನ್ನು ಬದಲಾಯಿಸಿ:

ನಿಮ್ಮ ತ್ವಚೆಯ ವಿಷಯಕ್ಕೆ ಬಂದರೆ, ಇದು ಕೇವಲ ಮುಖ ಮಾತ್ರವಲ್ಲದೆ ನಿಮ್ಮ ದೇಹವೂ ಮತ್ತು ಈ ಋತುವಿನಲ್ಲಿ ತೇವಾಂಶವನ್ನು ಕಳೆದು ಕೊಂಡು ಬಿರುಕು ಬಿಡುವ ಸಾಧ್ಯತೆಗಳು ಹೆಚ್ಚಿದೆ. ಒಡೆದ ತುಟಿಗಳನ್ನು ದೂರವಿರಿಸಲು ಲಿಪ್ ಬಾಮ್ ಪ್ರತಿ ಸಲ ಪೂರ್ತಿಯಾಗಿ ಹಚ್ಚುವುದನ್ನು ಖಚಿತಪಡಿಸಿಕೊಳ್ಳಿ.

5. ನಿಮ್ಮ ದೇಹದ ಆರೈಕೆಯ ದಿನಚರಿಯನ್ನು ಮರೆಯಬೇಡಿ:

ಚಳಿಗಾಲ ಬಂತೆಂದರೆ ನಮ್ಮ ತ್ವಚೆಯು ತುಂಬಾ ಒಣಗುತ್ತದೆ. ನಾವು ಇನ್ನೂ ಮುಖದ ಆರೈಕೆ ಮಾಡುವಾಗ, ನಾವು ಸಾಮಾನ್ಯವಾಗಿ ನಮ್ಮ ದೇಹದ ಬಗ್ಗೆ ಮರೆತುಬಿಡುತ್ತೇವೆ. ಚರ್ಮಕ್ಕೆ ಪೋಷಣೆ ಮತ್ತು ಮಾಯಿಶ್ಚರೈಸೇಶನ್ ನೀಡಲು ಸಹಾಯ ಮಾಡುವ ಬಾಡಿ ಲೋಷನ್‌ಗಳನ್ನು ಆರಿಸಿಕೊಳ್ಳುವುದು ಅತ್ಯಗತ್ಯ.

ಇದನ್ನು ಓದಿ:

6. ಸನ್‌ಸ್ಕ್ರೀನ್‌ಗಳನ್ನು ನಿರ್ಲಕ್ಷಿಸಬೇಡಿ:

ಚಳಿಗಾಲದಲ್ಲಿ ಬಿಸಿಲು ಕಡಿಮೆ ಇರುವುದರಿಂದ ನೀವು ಸನ್‌ಸ್ಕ್ರೀನ್‌ ಬಳಸುವುದನ್ನು ನಿರ್ಲಕ್ಷಿಸಬೇಡಿ. ಇದು ಚಳಿಗಾಲದಲ್ಲಿ, ನಿಮ್ಮ ಚರ್ಮಕ್ಕೆ ಖಂಡಿತವಾಗಿಯೂ ಹೆಚ್ಚುವರಿ ರಕ್ಷಣೆಯನ್ನು ನೀಡುತ್ತದೆ. ಸನ್‌ಸ್ಕ್ರೀನ್‌ಗಳು ನಿಮ್ಮ ಚರ್ಮವನ್ನು UV ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುವುದಲ್ಲದೆ, ಚರ್ಮವನ್ನು ಸರಿಪಡಿಸಲು ಮತ್ತು ಸರಿಪಡಿಸಲು ಉತ್ತಮ ಮಾರ್ಗವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:35 am, Thu, 8 December 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್