ನಿಮ್ಮ ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿಗೆ ಸಮೀಪದಲ್ಲಿರುವ ತಾಣಗಳ ಕುರಿತು ಮಾಹಿತಿ ಇಲ್ಲಿದೆ

ನಿಮ್ಮ ಕೆಲಸದ ವಾರಾಂತ್ಯದಲ್ಲಿ ನಿಮ್ಮವರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

ನಿಮ್ಮ ವಾರಾಂತ್ಯದ ವಿಹಾರಕ್ಕಾಗಿ ಬೆಂಗಳೂರಿಗೆ ಸಮೀಪದಲ್ಲಿರುವ ತಾಣಗಳ ಕುರಿತು ಮಾಹಿತಿ ಇಲ್ಲಿದೆ
Nandi HillsImage Credit source: NDTV
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 08, 2022 | 6:30 AM

ಬೆಂಗಳೂರಿನಲ್ಲಿ  ಕೆಲಸದ ಒತ್ತಡ, ಜನದಟ್ಟನೆ ಧೂಳು ಮಾಲಿನ್ಯಗಳಿಂದ ನೀವು ಮಾನಸಿಕವಾಗಿ ನೆಮ್ಮದಿಯನ್ನು ಕಂಡುಕೊಳ್ಳಲು ಒಂದು ಉತ್ತಮ ನಿಸರ್ಗದತ್ತವಾದ ಪ್ರದೇಶಗಳು ಅಗತ್ಯವಿದೆ. ನಿಮ್ಮ ಕೆಲಸದ ವಾರಾಂತ್ಯದಲ್ಲಿ ನಿಮ್ಮವರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ. ಈ ಪ್ರದೇಶಗಳಿಗೆ ಭೇಟಿ ನೀಡದರೆ ನಿಮ್ಮಲ್ಲಿರುವ ಒತ್ತಡಗಳು ಕಡಿಮೆಯಾಗಬಹುದು. ಮಾನಸಿಕ ನೆಮ್ಮದಿ ಪಡೆಯಲು ಈ ಸ್ಥಳಗಳು ಉತ್ತಮ

1. ನಂದಿ ಬೆಟ್ಟ:

ಬೆಂಗಳೂರು ನಗರದಿಂದ ಕೇವಲ 2 ಗಂಟೆಗಳ ಪ್ರಯಾಣದ ಒಂದು ಪರಿಪೂರ್ಣ ಸ್ಥಳ. ಇಲ್ಲಿ ನಂದಿ ಕ್ಯಾಂಪಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಸಾಹಸ ಕ್ರೀಡೆಗಳಂತಹ ವಿವಿಧ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಕೇವಲ 60 ಕಿಮೀ ದೂರದಲ್ಲಿದೆ.

2. ಕುಂತಿ ಬೆಟ್ಟ:

ನೀವು ಸಾಹಸ-ಪ್ರೇಮಿಗಳಾಗಿದ್ದರೆ ನೀವು ಖಂಡಿತವಾಗಿಯೂ ಬೆಂಗಳೂರಿನಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ಕುಂತಿ ಬೆಟ್ಟಕ್ಕೆ ಭೇಟಿ ನೀಡಬೇಕು. ಪಾಂಡವಪುರ ಪಟ್ಟಣದಿಂದ 2882 ಮೀಟರ್ ಎತ್ತರದಲ್ಲಿರುವ ಕುಂತಿ ಬೆಟ್ಟದವರೆಗೆ ಆಸಕ್ತಿದಾಯಕ ಚಾರಣವನ್ನು ಏರ್ಪಡಿಸಲಾಗಿದೆ. ಇಲ್ಲಿ ನೀವು ಆನಂದದಾಯಕ ವಾರಾಂತ್ಯವನ್ನು ಕಳೆಯಬಹುದಾಗಿದೆ.

3. ಮೈಸೂರು:

ಬೆಂಗಳೂರಿನ ಸುತ್ತಮುತ್ತಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮೈಸೂರು ಪ್ರಮುಖವಾದುದು. ಮೈಸೂರಿನ ಪ್ರಸಿದ್ಧ ಆಕರ್ಷಣೆಗಳಲ್ಲಿ ಮೈಸೂರು ಅರಮನೆ ಮತ್ತು ಮೈಸೂರು ಮೃಗಾಲಯಗಳು ಸೇರಿವೆ. ಬೆಂಗಳೂರಿನಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿರುವ ಮೈಸೂರು ನಿಮ್ಮ ವಾರಾಂತ್ಯದ ವಿಹಾರಕ್ಕೆ ಒಂದು ಉತ್ತಮ ಸ್ಥಳವಾಗಿದೆ.

4. ಹಾಸನ:

ಬೆಂಗಳೂರಿನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಹಾಸನವು ನಿಮ್ಮ ವಾರಂತ್ಯಕ್ಕೆ ಉತ್ತಮ ಸ್ಥಳವಾಗಿದೆ. ಹಾಸನವು ಹಲವಾರು ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಶಿಲ್ಪಗಳನ್ನು ಹೊಂದಿದ್ದು, ನಿಮಗೆ ಮನೋರಂಜನೆಯ ಜೊತೆಗೆ ಇತಿಹಾಸದ ಮಾಹಿತಿಗಳನ್ನು ತಿಳಿಯಲು ಸಹಾಯಕವಾಗಿದೆ.

5. ಕಬಿನಿ:

ವನ್ಯಜೀವಿ ಅಭಯಾರಣ್ಯಗಳು ಮತ್ತು ಪ್ರಕೃತಿ ಮಡಿಲಿನಲ್ಲಿ ನೀವು ವಾರಾಂತ್ಯವನ್ನು ಕಳೆಯಲು ಬಯಸಿದರೆ ಕಬಿನಿ ಉತ್ತಮ ಆಯ್ಕೆಯಾಗಿದೆ. ಇದು ಬೆಂಗಳೂರಿನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಕಬಿನಿ ಅಣೆಕಟ್ಟು, ಕಬಿನಿ ನದಿ ಮತ್ತು ಕಬಿನಿ ಹಿನ್ನೀರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ನೀವು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದಾಗಿದೆ.

6. ಚಿಕ್ಕಮಗಳೂರು:

ಚಿಕ್ಕಮಗಳೂರು ಬೆಂಗಳೂರಿನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿದೆ. ಇದು ಸ್ಥಳೀಯ ಮಾರುಕಟ್ಟೆಗಳು, ಉತ್ತಮ ತಿನಿಸುಗಳು ಮತ್ತು ಕೆಫೆಗಳೊಂದಿಗೆ ಆಸಕ್ತಿದಾಯಕ ಪ್ರವಾಸಿ ತಾಣವಾಗಿದೆ. ಜೊತೆಗೆ ನೀವು ಇಲ್ಲಿಂದ 9 ಕಿಲೋಮೀಟರ್ ಕುದುರೆಮುಖ ಟ್ರೆಕ್ಕಿಂಗ್ ಮಾಡಬಹುದಾಗಿದೆ.

ಇದನ್ನು ಓದಿ: ತಮಿಳುನಾಡಿನ ದ್ವೀಪ ಪ್ರದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು? ಮಾಹಿತಿ ಇಲ್ಲಿದೆ

7. ವಯನಾಡ್:

ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಸುಂದರವಾದ ಗಿರಿಧಾಮ ವಯನಾಡ್. ಹೇರಳವಾದ ಹಸಿರು, ಪರಿಪೂರ್ಣ ಹವಾಮಾನ ಮತ್ತು ಪ್ರಶಾಂತವಾದ ಸುಂದರವಾದ ತಾಣವಾಗಿದೆ. ವಯನಾಡ್ ಬೆಂಗಳೂರಿನಿಂದ ಸುಮಾರು 270 ಕಿಲೋಮೀಟರ್ ದೂರದಲ್ಲಿದೆ. ನಿಮ್ಮ ಒತ್ತಡದ ಕೆಲಸದಿಂದ ಸ್ವಲ್ಪ ವಿರಾಮವನ್ನು ಪಡೆಯಲು ವಯನಾಡ್ ಪರಿಪೂರ್ಣ ಸ್ಥಳವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ