- Kannada News Photo gallery Try the following image to draw animals and birds with a single line Kannada news
Single Line Art: ಕೇವಲ ಒಂದೇ ಗೆರೆಯಿಂದಲೇ ಚಿತ್ರ ಬಿಡಿಸಲು ನಿಮಗೆ ಸಾಧ್ಯವೇ?
ಸುಂದರವಾಗಿ ಚಿತ್ರಗಳನ್ನು ಬಿಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆ ನಿಮ್ಮಲ್ಲಿದ್ದರೆ ಇನ್ನು ಬಿಟ್ಟುಬಿಡಿ. ಹೌದು ಒಂದೇ ಗೆರೆಯಿಂದ ಸಾಕಷ್ಟು ಪ್ರಾಣಿ ಪಕ್ಷಿಗಳ ಚಿತ್ರ ಬಿಡಿಸಲು ಸಾಧ್ಯವಿದೆ. ಈ ಕೆಳಗಿನ ಚಿತ್ರಗಳನ್ನು ನೀವೂ ಕೂಡ ಪ್ರಯತ್ನಿಸಿ.
Updated on: Dec 07, 2022 | 6:25 PM

ಚಿತ್ರಕಲೆಯ ಬಗ್ಗೆ ನಿಮಗೆ ತುಂಬಾ ಆಸಕ್ತಿ ಇದೆಯೇ? ಅದರೆ ಸುಂದರವಾಗಿ ಚಿತ್ರಗಳನ್ನು ಬಿಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆ ನಿಮ್ಮಲ್ಲಿದ್ದರೆ ಇನ್ನು ಬಿಟ್ಟುಬಿಡಿ. ಅದಕ್ಕಾಗಿಯೇ ನೀವು ಸುಲಭವಾಗಿ ಚಿತ್ರಿಸಬಹುದಾದ ಚಿತ್ರಗಳು ಇಲ್ಲಿವೆ.

ಬೆಕ್ಕು: ನಿಮಗೆ ಒಂದೇ ಗೆರೆಯಿಂದ ಸುಂದರವಾಗಿ ಬೆಕ್ಕಿನ ಚಿತ್ರ ಬಿಡಿಸಬಹುದಾಗಿದೆ. ಅತ್ಯಂತ ಸುಲಭ ಹಾಗೂ ಬೇಗ ಕ್ರಿಯಾತ್ಮಕವಾಗಿ ಚಿತ್ರ ಬಿಡಿಸಲು ಈ ಚಿತ್ರವನ್ನೊಮ್ಮೆ ನೋಡಿ.

ದನ: ನೀವೂ ಸಾಮಾನ್ಯವಾಗಿ ದನದ ಚಿತ್ರವನ್ನು ಬಿಡಿಸಲು ಸಾಕಷ್ಟು ಕಷ್ಟ ಪಡಬೇಕು. ಯಾಕೆಂದರೆ ಅದರ ಬಾಲ ಕೊಂಬು, ಕಾಲು ಹಾಗೂ ಗೊರಸೆ ಬಿಡಿಸುವುದು ತುಂಬಾ ಕಷ್ಟದ ಕೆಲಸ. ಆದರೆ ಇಲ್ಲಿ ಅತ್ಯಂತ ಸುಲಭವಾಗಿ ದನವನ್ನು ಬಿಡಿಸಲು ಈ ಚಿತ್ರವನ್ನೊಮ್ಮೆ ನೀವೂ ಪ್ರಯತ್ನಿಸಿ ನೋಡಿ.

ಹಾವು: ಹೌದು ನೀವು ಒಂದೇ ಗೆರೆ ಎಳೆದು ಹಾವಿನ ಚಿತ್ರ ಬಿಡಿಸಬಹುದು. ನಿಮಗೆ ಚಿತ್ರ ಕಲೆಯ ಬಗ್ಗೆ ಅತಿಯಾದ ಆಸಕ್ತಿಯಿದ್ದು, ಈ ಸುಲಭವಾದ ಹಾವಿನ ಚಿತ್ರವನ್ನೊಮ್ಮೆ ಪ್ರಯತ್ನಿಸಿ ನೋಡಿ.

ಕೋತಿ: ಒಂದೇ ಗೆರೆಯಲ್ಲಿ ಕೋತಿಯನ್ನು ಬಿಡಿಸುವುದು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ನಾವು ನಿಮಗೆ ಹೇಳಿ ಕೊಡುತ್ತೇವೆ ಕೇವಲ ಒಂದೇ ಗೆರೆ ಎಳೆದು ಕೋತಿಯನ್ನು ಬಿಡಿಸಬಹುದು.

ಕುದುರೆ: ನೀವು ಚಿತ್ರ ಕಲೆಯ ಪ್ರಾರಂಭಿಕ ಹಂತದಲ್ಲಿದ್ದರೆ, ನೀವೂ ಕೇವಲ ಒಂದು ಗೆರೆಯಲ್ಲಿ ಸುಲಭವಾಗಿ ಬಿಡಿಸಬಹುದಾದ ಈ ವಿಧಾನವನ್ನು ಅಭ್ಯಾಸ ಮಾಡಿಕೊಳ್ಳಿ. ಇಲ್ಲಿ ನೀವೂ ಒಂದೇ ಗೆರೆ ಎಳೆದು ಕುದುರೆಯನ್ನು ಬಿಡಿಸಬಹುದಾಗಿದೆ.

ಡಾಲ್ಫಿನ್ : ನೀವೂ ಸಾಮಾನ್ಯವಾಗಿ ಮೀನಿನ ಚಿತ್ರವನ್ನು ಬಿಡಿಸುವಾಗ ಅದರ ಕಣ್ಣು, ರೆಕ್ಕೆಗಳನ್ನು ಬಿಡಿಸಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತೀರಿ. ಆದರೆ ನೀವು ಅತ್ಯಂತ ಸುಲಭವಾಗಿ ಒಂದೇ ಗೆರೆಯನ್ನು ಎಳೆದು ಡಾಲ್ಫಿನ್ ಮೀನಿನ ಚಿತ್ರ ಬಡಿಸಬಹುದು.

ಜಿಂಕೆ: ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ. ಅದ್ದಕಾಗಿ ಪ್ರಾರಂಭದಲ್ಲಿ ಈ ತರಹದ ಒಂದೇ ಗೆರೆಯಲ್ಲಿ ಬಿಡಿಸಬಹುದಾದ ಚಿತ್ರಗಳ ಕುರಿತು ನೀವೇ ಮನೆಯಲ್ಲಿ ಹೇಳಿಕೊಡಿ. ಇಲ್ಲಿ ಒಂದು ಸುಂದರ ಜಿಂಕೆಯನ್ನು ಕಾಣಬಹುದು.

ಮೊಲ: ಕೇವಲ ಒಂದೇ ಗೆರೆಯ ಮೂಲಕ ಮೊಲದ ಚಿತ್ರವನ್ನು ಬಿಡಿಸಲು ಸಾಧ್ಯವಿದೆ. ಈ ಚಿತ್ರದಲ್ಲಿ ತೋರಿಸಿರುವಂತೆ ಮನೆಯಲ್ಲಿಯೇ ಯಾವುದೇ ತರಬೇತಿ ಇಲ್ಲದೇ ಅತ್ಯಂತ ಸುಲಭವಾಗಿ ಪ್ರಾಣಿಗಳ ಚಿತ್ರವನ್ನು ಬಿಡಿಸಬಹುದು.
























