Kannada News » Photo gallery » Follow this diet now to avoid wrinkles on your face Kannada lifestyle news
Beauty Tips: ನಿಮ್ಮ ಮುಖವು ಸುಕ್ಕುಗಟ್ಟದಂತೆ ತಡೆಯಲು ಕೂಡಲೇ ಈ ಆಹಾರಕ್ರಮ ರೂಢಿಸಿಕೊಳ್ಳಿ
TV9kannada Web Team | Edited By: Akshatha Vorkady
Updated on: Dec 08, 2022 | 5:00 PM
53 ವರ್ಷದ ನಟಿ ಭಾಗ್ಯಶ್ರೀ ತಮ್ಮ ಸೌಂದರ್ಯದ ಗುಟ್ಟನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Dec 08, 2022 | 5:00 PM
53 ವರ್ಷದ ನಟಿ ಭಾಗ್ಯಶ್ರೀ ಮತ್ತೇ ಕಿರುತೆರೆಯ ಮೂಲಕ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಎಷ್ಷೇ ವಯಸ್ಸಾದವರೂ ಅವರ ತ್ವಚೆಯ ಸೌಂದರ್ಯ ಇನ್ನೂ ಹಾಗೆಯೇ ಇದೆ.
1 / 7
ಸಾಕಷ್ಟು ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಸೌಂದರ್ಯದ ಗುಟ್ಟನ್ನು ಹಂಚಿಕೊಂಡಿದ್ದಾರೆ. ಯಾವ ರೀತಿಯ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂದು ನಟಿ ಭಾಗ್ಯಶ್ರೀ ತಿಳಿಸಿದ್ದಾರೆ.
2 / 7
ನಿಮ್ಮ ಪ್ರತಿ ದಿನದ ಆಹಾರದಲ್ಲಿ ಟೊಮೆಟೊ ಹಣ್ಣನ್ನು ಸೇರಿಸಿಕೊಳ್ಳಿ. ಅದು ಬೇಯಿಸಿ ಬೇಕಾದರೂ ತಿನ್ನಿ, ಇಲ್ಲ ಹಾಗೆಯೇ ಬೇಯಿಸದೇ ಕೂಡ ತಿನ್ನಬಹುದು. ನೀವೂ ಪ್ರತಿದಿನ ಟೊಮೆಟೊ ತಿನ್ನುವುದರಿಂದ ಮುಖದಲ್ಲಿ ಸುಕ್ಕು ಹಾಗೂ ನೆರಿಗೆ ಬಾರದಂತೆ ನೋಡಿಕೊಳ್ಳಬಹುದು ಎಂದು ಹೇಳಿದ್ದಾರೆ.
3 / 7
ಟೊಮೆಟೊದಲ್ಲಿ ವಿಟಮಿನ್ ಸಿ ಹೇರಳವಾಗಿರುವುದ್ದರಿಂದ ಇದು ನಿಮ್ಮ ಚರ್ಮಕ್ಕೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಜೊತೆಗೆ ನೀವು ಪ್ರತಿ ದಿನ ಟೊಮೆಟೊ ತಿನ್ನುವುದರಿಂದ ಹೊಳೆಯುವ ತ್ವಚೆಯನ್ನು ಪಡೆಯಬಹುದು.
4 / 7
ಜೊತೆಗೆ ಟೊಮೆಟೊದಲ್ಲಿ ವಿಟಮಿನ್ ಎ ಪೊಟಾಷಿಯಂ, ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ನಿಮ್ಮ ದೇಹದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ಕಾಪಾಡುತ್ತದೆ.
5 / 7
ನೀವೂ ಟೊಮೆಟೊವನ್ನು ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಮೊದಲಿಗೆ ಟೊಮೆಟೊವನ್ನು ಸ್ವಲ್ಪ ನೀರು ಹಾಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಹುಡಿ ಹಾಕಿ ಚೆನ್ನಾಗಿ ರುಬ್ಬಿಕೊಂಡು ಕುಡಿಯಿರಿ ಇದು ಕೂಡ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ.