- Kannada News Photo gallery Ravindra Jadeja's wife Rivaba Jadeja wins Gujarat’s Jamnagar seat know more about her
ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಮೊದಲ ಚುನಾವಣೆಯಲ್ಲೇ ಗೆದ್ದ ರಿವಾಬಾ ಜಡೇಜಾ
ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಿವಾಬಾ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿದ್ದು, ಇದು ಅವರ ಮೊದಲ ಚುನಾವಣೆ ಆಗಿದೆ.
Updated on: Dec 08, 2022 | 3:31 PM

ರಿವಸಿನ್ಹ್ ಹರ್ದೇವ್‌ಸಿನ್ಹ್ ಸೋಲಂಕಿ ಅಥವಾ ರಿವಾಬಾ ರವೀಂದ್ರ ಸಿಂಗ್ ಜಡೇಜಾ ರಾಜ್‌ಕೋಟ್ ಮೂಲದವರು.

2016ರಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರನ್ನು ರಿವಾಬಾ ಮದುವೆಯಾದರು

ರಿವಾಬಾ ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದಾರೆ.

ಡಿಸೆಂಬರ್ 1 ರಂದು ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಲ್ಲಿ ಮತದಾನವಾಗಿತ್ತು

ರಿವಾಬಾ ಜಡೇಜಾ 2019 ರಲ್ಲಿ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ್ದು ಜಾಮ್‌ನಗರ -ಸೌರಾಷ್ಟ್ರ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ.

ರಿವಾಬಾ ಅವರು ಹಿರಿಯ ಕಾಂಗ್ರೆಸ್ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿ. ಅವರು ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದ ಸಮುದಾಯ ಸಂಘಟನೆಯಾದ ಕರ್ಣಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ

2022 ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕ ಧರ್ಮೇಂದ್ರಸಿನ್ಹ್ ಜಡೇಜಾ ಕೈ ಬಿಟ್ಟು ರಿವಾಬಾ ಅವರಿಗೆ ಮಣೆ ಹಾಕಲಾಯಿತು. ಬಿಜೆಪಿಯ ಲೆಕ್ಕಾಚಾರ ತಪ್ಪಲಿಲ್ಲ, ರಿವಾಬಾ ತಾನು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ

ರಿವಾಬಾ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಜಾಮ್‌ನಗರ ರವೀಂದ್ರ ಜಡೇಜಾ ಅವರ ಹುಟ್ಟೂರು.

ಇದು ನನ್ನ ಗೆಲುವು ಮಾತ್ರವಲ್ಲ ನಮ್ಮೆಲ್ಲರ ಗೆಲುವು.ಗುಜರಾತ್ ಬಿಜೆಪಿ ಜತೆಗಿತ್ತು ಮತ್ತು ಮುಂದೆಯೂ ಅವರೊಂದಿಗಿರುತ್ತದೆ ಎಂದು ರಿವಾಬಾ ಹೇಳಿದ್ದಾರೆ

ಬಿಜೆಪಿಯ ರಿವಾಬಾ ಜಡೇಜಾ ಜಾಮ್‌ನಗರ ಉತ್ತರ ಕ್ಷೇತ್ರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.



















