ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (India vs Bangladesh) ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಮೊದಲ ಏಕದಿನದಲ್ಲಿ ಭಾರತೀಯ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರೆ, ಢಾಕಾದ ಶೇರೆ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಬೌಲರ್ಗಳು ಯಶಸ್ಸು ಸಾಧಿಸಲಿಲ್ಲ. 69 ರನ್ಗೆ ಬಾಂಗ್ಲಾದ 6 ವಿಕೆಟ್ ಕಬಳಿಸಲು ಯಶಸ್ಸಿಯಾದ ಬೌಲರ್ಗಳು ನಂತರದ ಒಂದು ವಿಕೆಟ್ ಕೀಳಲು ಪರದಾಡಿದರು.
ದ್ವಿತೀಯ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ನಾಯಕ ರೋಹಿತ್ ಶರ್ಮಾ ಹೋರಾಟಕ್ಕೆ ಫಲ ಸಿಗಲಿಲ್ಲ. 5 ರನ್ಗಳ ರೋಚಕ ಜಯದೊಂದಿಗೆ ಬಾಂಗ್ಲಾ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಇದೀಗ ಅಂತಿಮ ಏಕದಿನವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಭಾರತ ಪ್ಲಾನ್ ಮಾಡಿಕೊಂಡಿದೆ.
IND vs BAN 3rd ODI Team India return to action against Bangladesh after losing back-to-back ODI matches
ಈ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಜಿಯೋ ಟಿವಿ ಆ್ಯಪ್ ಇದ್ದವೂ ಇದರ ಮೂಲಕ ಕೂಡ ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು.
ತೃತೀಯ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಇಂದು ಚಿತ್ತಗಾಂಗ್ಗೆ ತಲುಪಿದ್ದಾರೆ. ಕೆಲ ಆಟಗಾರರು ಇಂದು ಮಧ್ಯಾಹ್ನದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ. ಇದರ ನಡುವೆ ರೋಹಿತ್ ಶರ್ಮಾ ಇಂಜುರಿಯಿಂದ ಮೂರನೇ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಹಾಗಾದರೆ ಟೀಮ್ ಇಂಡಿಯಾ ನಾಯಕ ಯಾರು?
ಫೀಲ್ಡಿಂಗ್ ವೇಳೆ ಸ್ಲಿಪ್ ವಿಭಾಗದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡ ರೋಹಿತ್ ಶರ್ಮಾ ಪಂದ್ಯದ ಬಹುಪಾಲು ಪೆವಿಲಿಯನ್‌ನಲ್ಲೇ ಇದ್ದರು. ಇದೀಗ ಇವರು ತೃತೀಯ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ನಾಯಕನ ಜವಾಬ್ದಾರಿ ಉಪ ನಾಯಕನಾಗಿರುವ ಕೆಎಲ್ ರಾಹುಲ್ ವಹಿಸಲಿದ್ದಾರೆ.
ರೋಹಿತ್ ಜೊತೆಗೆ ದೀಪಕ್ ಚಹರ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಕುಲ್ದೀಪ್ ಸೇನ್ ಕೂಡ ಬೆನ್ನು ನೋವಿನಿ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಕೂಡ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ.
Published On - 12:08 pm, Thu, 8 December 22