AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Thindi Beedi: ಬೆಂಗಳೂರಿನ ತಿಂಡಿ ಬೀದಿ ಇನ್ನುಂದೆ ಹೊಸ ಸೌಕರ್ಯದೊಂದಿಗೆ ವಿನೂತನ ರೂಪ ಪಡೆಯಲಿದೆ

ಬೆಂಗಳೂರು ತಿಂಡಿ ಬೀದಿ: ಇನ್ನು ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಎಂದು ಬಿಬಿಎಂಪಿ ವಲಯ ಆಯುಕ್ತ ಜಯರಾಮ್ ರಾಯಪುರ ಭರವಸೆ ನೀಡಿದ್ದಾರೆ.

Bengaluru Thindi Beedi: ಬೆಂಗಳೂರಿನ ತಿಂಡಿ ಬೀದಿ ಇನ್ನುಂದೆ ಹೊಸ ಸೌಕರ್ಯದೊಂದಿಗೆ ವಿನೂತನ ರೂಪ ಪಡೆಯಲಿದೆ
ಬೆಂಗಳೂರಿನ ವಿವಿ ಪುರಂನಲ್ಲಿರುವ ತಿಂಡಿ ಬೀದಿ ಅಥವಾ ಫುಡ್ ಸ್ಟ್ರೀಟ್Image Credit source: Big 7 Travel
TV9 Web
| Updated By: Digi Tech Desk|

Updated on:Dec 13, 2022 | 1:37 PM

Share

ಬೆಂಗಳೂರು (Bengaluru) ಕಿಕ್ಕಿರಿದ ಜನಸಂದಣಿ, ವಾಹನದಟ್ಟಣೆಯಿಂದಲೇ ಕೂಡಿರುತ್ತದೆ, ಸಂಜೆಯ ತಂಪಾದ ವೇಳೆಯಲ್ಲಿ ವಿಶೇಷವಾಗಿ ಈಗಿನ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿಂಡಿ ತಿನ್ನಬೇಕೇನಿಸುವುದು ಸಾಮಾನ್ಯ. ಸ್ಟ್ರೀಟ್ ಫುಡ್(Street Food) ಅತ್ಯಂತ ಕಡಿಮೆ ಬೆಲೆಗೆ ಈ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುವುದರ ಜೊತೆಗೆ ನಾಲಿಗೆಗೆ ರುಚಿಯನ್ನು ನೀಡುತ್ತದೆ. ಅಂತದ್ದೇ ಸ್ಟ್ರೀಟ್ ಫುಡ್ ಗೆ ಖ್ಯಾತಿ ಪಡೆದಿರುವ ಸ್ಥಳವೇ ಬೆಂಗಳೂರಿನ ವಿವಿ ಪುರಂನಲ್ಲಿರುವ ತಿಂಡಿ ಬೀದಿ ಅಥವಾ ಫುಡ್ ಸ್ಟ್ರೀಟ್. ಹೌದು ಇನ್ನು ಮುಂದೆ ನೀವೂ ಇಲ್ಲಿ ನೀವೂ ಕಷ್ಟ ಪಟ್ಟು ತಿಂಡಿ ಸೇವಿಸಬೇಕಿಲ್ಲ. ಇನ್ನು ಕೇವಲ ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಭಾರೀ ಜನದಟ್ಟನೆ ಹಾಗೂ ಕಾಲ್ತುಳಿತದ ಸಮಸ್ಯೆ, ಕಿಕ್ಕಿರಿದ ರಸ್ತೆ, ವಿಶೇಷವಾಗಿ ಸಂಜೆ 6 ಗಂಟೆಯ ನಂತರ ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದ್ದ ಈ ತಿಂಡಿ ಬೀದಿಯನ್ನು ಸುಸಜ್ಜಿತವಾಗಿ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೋಜನೆ ಕೈಗೆತ್ತಿಕೊಂಡಿದೆ.

ಇದನ್ನೂ ಓದಿ: ನೀವು ತಿಂಡಿ ಪ್ರಿಯರಾಗಿದ್ದರೆ ಇಲ್ಲಿದೆ ಬೆಂಗಳೂರಿನ ಟಾಪ್ ಸ್ಟ್ರೀಟ್ ಫುಡ್ ಗಳ ಕಂಪ್ಲೀಟ್ ವಿವರ

ಜನಸಂದಣಿಯನ್ನು ನಿರ್ವಹಿಸಲು, ಬೀದಿಗೆ ಮೀಸಲಾದ ಕುಳಿತುಕೊಳ್ಳುವ ಸ್ಥಳಗಳನ್ನು ನೀಡಲಾಗುತ್ತದೆ ಮತ್ತು ರಸ್ತೆಯ ಮೇಲೆ ಕಲ್ಲುಮಣ್ಣುಗಳನ್ನು ಹಾಕಿ ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಶಂಕುಸ್ಥಾಪನೆ ಕಾರ್ಯ ನಡೆಯಲಿದೆ. ಈಗಾಗಲೇ ತಿಂಡಿ ಬೀಡಿಯಲ್ಲಿ ಆಹಾರ ಮಾರಾಟಗಾರರು ಬೀದಿಯನ್ನು ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಪ್ರಸ್ತುತ ರಸ್ತೆಯಲ್ಲಿ ಅಧಿಕ ಜನಸಂದಣಿಯನ್ನು ಸರಿಹೊಂದಿಸುವುದೇ ದೊಡ್ಡ ಸವಾಲಾಗಿದೆ, ಆದ್ದರಿಂದ, ನಗರದಲ್ಲಿ ಇತ್ತೀಚೆಗೆ ನವೀಕರಿಸಿದ ಕಮರ್ಷಿಯಲ್ ಸ್ಟ್ರೀಟ್‌ನಂತೆ ರಸ್ತೆಯನ್ನು ಮರುರೂಪಿಸಲು ಬಿಬಿಎಂಪಿ ನಿರ್ಧರಿಸಿದೆ ಎಂದು ಬಿಬಿಎಂಪಿ ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಬಳಕೆದಾರರಿಗೆ ಗುಡ್ ನ್ಯೂಸ್: Paytm ಮತ್ತು Yaatraದಲ್ಲಿ ಟಿಕೆಟ್ ಸೇವೆ ಆರಂಭ

ಈ ತಿಂಗಳಿನಲ್ಲಿ ನವೀಕರಣ ಕಾಮಗಾರಿ ಆರಂಭವಾಗಲಿದ್ದು, ಯೋಜನೆಗೆ ₹5 ಕೋಟಿ ವೆಚ್ಚವಾಗಲಿದೆ ಎಂದು ವರದಿಯಾಗಿದೆ. ಕೆಲಸವನ್ನು ಪೂರ್ಣಗೊಳಿಸಲು ಆರು ತಿಂಗಳು ತೆಗೆದುಕೊಳ್ಳುತ್ತದೆ ಮತ್ತು ನಾವು ಈ ತಿಂಗಳು ನವೀಕರಣವನ್ನು ಪ್ರಾರಂಭಿಸುತ್ತೇವೆ. ಈ ಮೂಲಸೌಕರ್ಯ ಕಾರ್ಯವು ಆಹಾರ ಮಾರಾಟಗಾರರು ಮತ್ತು ಗ್ರಾಹಕರಿಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ, ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 1:00 pm, Tue, 13 December 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ