Christmas 2022: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲಿಯೇ ತಯಾರು ಮಾಡಬಹುದಾದ ಕೇಕ್ ರೆಸೆಪಿ ಐಡಿಯಾ ಇಲ್ಲಿದೆ
ಕ್ರಿಸ್ಮಸ್ ಹಬ್ಬ ಬಂತೆಂದರೆ ಕೇಕ್, ತಿಂಡಿಗಳ ಹವಾ ಜೋರಾಗಿ ಇರುತ್ತದೆ. ಈ ಕ್ರಿಸ್‌ಮಸ್‌ಗೆ ಏನಾದರೂ ಯೂನಿಕ್ ಆಗಿ ಮನೆಯಲ್ಲೇ ಸಿಹಿ ತಿಂಡಿ ತಯಾರಿಸುವ ಪ್ಲಾನ್‌ನಲ್ಲಿ ಇದ್ದಿರಾ, ಆದರೆ ಯಾವ ರೆಸಿಪಿ ಮಾಡಬೇಕೆಂಬ ಗೊಂದಲ ನಿಮಗೆ ಇದೆಯಾ ಹಾಗದರೆ ನಾವು ಕೆಲವೊಂದು ಕೇಕ್ ರೆಸೆಪಿಗಳ ಐಡಿಯಾ ಬಗ್ಗೆ ತಿಳಿಸಿಕೊಡುತ್ತೇವೆ.
ಕ್ರಿಸ್ಮಸ್ ಹಬ್ಬ ಬಂತೆಂದರೆ ಕೇಕ್, ತಿಂಡಿಗಳ ಹವಾ ಜೋರಾಗಿ ಇರುತ್ತದೆ. ಈ ಕ್ರಿಸ್‌ಮಸ್‌ಗೆ ಏನಾದರೂ ಯೂನಿಕ್ ಆಗಿ ಮನೆಯಲ್ಲೇ ಸಿಹಿ ತಿಂಡಿ ತಯಾರಿಸುವ ಪ್ಲಾನ್‌ನಲ್ಲಿ ಇದ್ದಿರಾ, ಆದರೆ ಯಾವ ರೆಸಿಪಿ ಮಾಡಬೇಕೆಂಬ ಗೊಂದಲ ನಿಮಗೆ ಇದೆಯಾ ಹಾಗದರೆ ನಾವು ಕೆಲವೊಂದು ಕೇಕ್ ರೆಸೆಪಿಗಳ ಐಡಿಯಾ ಬಗ್ಗೆ ತಿಳಿಸಿಕೊಡುತ್ತೇವೆ.
1. ಕ್ರಿಸ್ಮಸ್ ಪ್ಲಮ್ ಕೇಕ್ :
ಕ್ರಿಸ್ಮಸ್ ಮತ್ತು ಪ್ಲಮ್ ಕೇಕ್ ಕೇಕ್‌ನ ಸಂಬಂಧ ಬೇರ್ಪಡಿಸಲಾಗದು. ಪ್ಲಮ್ ಕೇಕ್‌ಗಳು ಕ್ರಿಸ್ಮಸ್ ಹಬ್ಬಗಳ ಸಾಂಪ್ರದಾಯಿಕ ಭಾಗವಾಗಿದೆ. ಈ ರುಚಿಕರವಾದ ಕೇಕ್‌ನ್ನು ಆಲ್ಕೋಹಾಲ್ ಅಥವಾ ಇಲ್ಲದೆಯೇ ಮಾಡಬಹುದು. ಇದು ಡ್ರೆಫ್ರೂಟ್ಸ್ ಮತ್ತು ಡ್ರೆನಟ್ಸ್ಗಳು ಸೇರಿದಂತೆ ಆರೋಗ್ಯಕರ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಇದು ಅದ್ಭುತ ರುಚಿಯಿಂದ ಕೂಡಿರುತ್ತದೆ. ಈ ರುಚಿಕರವಾದ ಕೆಕ್‌ನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯಬಹುದು
2. ವೈಟ್ ಚಾಕೊಲೇಟ್ ಚೀಸ್ ಕೇಕ್
ಈ ಕೇಕ್ ಇದರ ಸುವಾಸನೆ ಮತ್ತು ಮೃದುವಾದ ವಿನ್ಯಾಸದಿಂದ ಜನಪ್ರಿಯವಾಗಿದೆ. ಅನೇಕ ವಿಧಾನದ ಚೀಸ್ ಕೇಕ್‌ಗಳಿವೆ. ನಿಮಗೆ ಅನುಕೂಲಕರವೆನಿಸುವ ಫ್ಲೇವರ್ ಕೇಕ್ ತಯಾರು ಮಾಡಿ ಹಬ್ಬದ ದಿನ ಸವಿಯಬಹುದು.
3. ಮಾರ್ಬಲ್ ಕೇಕ್
ಬಾಯಲ್ಲಿ ಇಟ್ಟ ತಕ್ಷಣ ಕರಗುವಂತಹ ಮಾರ್ಬಲ್ ಕೇಕ್ ನಿಮ್ಮ ನಾಲಿಗೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ವೆನಿಲ್ಲಾ, ಕೋಕೊ ಮತ್ತು ಚಾಕ್‌ಲೇಟ್ ಮುಂತಾದ ಫ್ಲೇವರ್‌ಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು ಮಾಡಲು ಮೊಟ್ಟೆಗಳ ಅವಶ್ಯಕತೆಯೂ ಇಲ್ಲ. ಊಟದ ನಂತರದಲ್ಲಿ ತಿನ್ನಲು ಈ ಕೇಕ್ ಉತ್ತಮ ಡೆಸರ್ಟ್ ಅಂತನೇ ಹೇಳಬಹುದು.
4. ರಿಚ್ ಚಾಕೊಲೇಟ್ ಕೇಕ್ :
ಚಾಕ್‌ಲೆಟ್ ಕೇಕ್ ಯಾರಿಗೆ ಇಷ್ಟವಿಲ್ಲ ಹೇಳಿ, ಅದ್ಭುತ ರುಚುಯುಳ್ಳ ಚಾಕೊಲೇಟ್ ಕೇಕ್ ಮಕ್ಕಳಿಗೆ ಪಂಚಪ್ರಾಣ. ಕ್ರಿಸ್ಮಸ್ ಹಬ್ಬಕ್ಕೆ ಮಕ್ಕಳಿಎ ಏನಾದರೂ ಅರೋಗ್ಯವಾದ ತಿನಿಸನ್ನು ನೀಡಬೇಕೆಂದಿದ್ದರೆ ಈ ರಿಚ್ ಚಕೊಲೇಟ್ ಕೇಕ್‌ನ್ನು ಮಾಡಬಹುದು.
5. ಗ್ಲುಟನ್ ಫ್ರೀ ಕೇಕ್ :
ನೀವು ಅರೋಗ್ಯಕರ ಪಾಕ ವಿಧಾನವನ್ನು ಹುಡುಕಿತ್ತಿದ್ದೀರಾ? ಹಾಗಾದರೆ ಗ್ಲುಟನ್ ಫ್ರೀ ಕೇಕ್ ಉತ್ತಮ ಆಯ್ಕೆಯಾಗಿದೆ. ಇದು ಕಿತ್ತಲೆ, ನಿಂಬೆ, ಸೇಬು ಹಾಗೂ ಬೆಲ್ಲದ ಸಿರಪ್ ಮತ್ತು ಡ್ರೆಫ್ರೂಟ್‌ಗಳನ್ನು ತಯರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಲೈಟ್‌ವೈಟ್ ಸಿಹಿ ತಿಂಡಿಯನ್ನು ತಿನ್ನಲು ಬಯಸಿದರೆ ಈ ಕೇಕ್ ಒಂದು ಉತ್ತಮ ಆಯ್ಕೆಯಾಗಿದೆ.
6. ಆಟಾ ಕೇಕ್ :
ಆಟಾ ಕೇಕ್ ಮಾಡಬಹುದು, ತ್ವರಿತವಾಗಿ ಮಾಡಬಹುದಾದ ಈ ಪಾಕ ವಿಧಾನಕ್ಕೆ ಮೊಟ್ಟೆಯ ಅಗತ್ಯವಿಲ್ಲ. ಕೆವಲ 30 ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಅಥಿತಿಗಳು ಧಿಡಿರ್ ಆಗಿ ಮನೆಗೆ ಬಂದಂತಹ ಸಂದರ್ಭದಲ್ಲಿ ತ್ವರಿತವಾಗಿ ಈ ಕೆಕ್ ಮಾಡುವ ಮೂಲಕ ಸರ್ವ್ ಮಾಡಬಹುದು.
ಇದನ್ನು ಓದಿ: ಕ್ರಿಸ್ಮಸ್ ಹಬ್ಬದ ಸಂತೋಷ ಹೆಚ್ಚಿಸಲು ಸಾಂಪ್ರದಾಯಿಕ ಗಿಫ್ಟ್ ಐಡಿಯಾ ಇಲ್ಲಿದೆ
7. ಚಾಕೊಲೇಟ್ ಬನಾನ ಕೇಕ್ :
ಕೆಲವರು ಈ ಕೇಕ್ ಮಾಡಲು ಬಹಳಷ್ಟು ಸಮಯ ಮತ್ತು ಹೆಚ್ಚಿನ ಇಂಗ್ರೀಡಿಯಂಟ್ಸ್ ಬೇಕೆಂದು ತಪ್ಪು ತಿಳಿಯುತ್ತಾರೆ. ಆದರೆ ಕೆಲವೊಮ್ಮೆ ನೀವು ಅಂದುಕೊಂಡಷ್ಟು ಕಷ್ಟವಾಗದಿರಬಹುದು. ಬಾಯಲ್ಲಿ ನೀರೂರಿಸುವ ಬನಾನ ಚಾಕಲೇಟ್ ಕೇಕನ್ನು ಬಾಳೆ ಹಣ್ಣು, ಕಡಲೆಕಾಯಿ ಬೆಣ್ಣೆ ಮತ್ತು ಕೋಕೋ ಪೌಡರ್ ಈ ಮೂರು ಪದಾರ್ಥಗಳನ್ನು ಬಳಸಿ ತಯಾರಿಸಬಹುದು.
ಹಬ್ಬದ ದಿನದಂದು ಮನೆಯಲ್ಲಿಯೇ ಕೇಕ್ ತಯಾರು ಮಾಡುವ ಮೂಲಕ ಅಂಗಡಿಯಲ್ಲಿ ಸಿಗುವ ತಿಂಡಿಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಡಿಕೊಳ್ಳಿ.
ಜೀವನಶೈಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Thu, 22 December 22