Tongue Scraping: ಪ್ರತಿದಿನ ನಿಮ್ಮ ನಾಲಿಗೆ ಸ್ಕ್ರ್ಯಾಪಿಂಗ್ ಮಾಡಿ, ಇದು ಆಯುರ್ವೇಧದ ಸಲಹೆ

ಆರಂಭಿಕ ವೈದ್ಯಕೀಯ ಪಠ್ಯ, ಚರಕ ಸಂಹಿತೆಯು ನಾಲಿಗೆಯನ್ನು ಸ್ವಚ್ಛಗೊಳಿಸಲು ಶಿಫಾರಸ್ಸು ಮಾಡುತ್ತದೆ. ಏಕೆಂದರೆ ಇದು ನಾಲಿಗೆಯ ದುರ್ವಾಸನೆ ಮತ್ತು ರುಚಿರಹಿತವನ್ನು ತೆಗೆದು ಹಾಕುತ್ತದೆ.

Tongue Scraping:  ಪ್ರತಿದಿನ ನಿಮ್ಮ ನಾಲಿಗೆ ಸ್ಕ್ರ್ಯಾಪಿಂಗ್ ಮಾಡಿ, ಇದು ಆಯುರ್ವೇಧದ ಸಲಹೆ
ಸಾಂದರ್ಭಿಕ ಚಿತ್ರImage Credit source: Getty Images
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Dec 29, 2022 | 8:30 AM

ಕಳೆದೆರಡು ವರ್ಷಗಳಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಹೆಚ್ಚಿನ ಗಮನ ವಹಿಸಿದ್ದರೂ, ಜನರು ಸಾಮಾನ್ಯವಾಗಿ ತಮ್ಮ ಮೌಳಿಕ ಯೋಗಕ್ಷೇಮವನ್ನು ನೋಡಿಕೊಳ್ಳುವುದನ್ನು ಕಡೆಗಣಿಸುತ್ತಿದ್ದಾರೆ. ಪ್ರತಿದಿನ ಹಲ್ಲುಜ್ಜುವುದು ಸಾಕಾಗುವುದಿಲ್ಲ, ನಿಮ್ಮ ಹಲ್ಲುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ರೂಢಿಸಿಕೊಳ್ಳಬೇಕು. ಜೊತೆಗೆ ನಿಮ್ಮ ನಾಲಿಗೆಯನ್ನು ಕೆರೆದುಕೊಳ್ಳುವುದು ಕೂಡಾ ಮುಖ್ಯವಾಗಿದೆ. ‘ಬೆಳಗ್ಗೆ ಫ್ರೆಶ್‍ಅಪ್ ಸಮಯದಲ್ಲಿ ಬೆಳ್ಳಿ ಅಥವಾ ತಾಮ್ರದ ಯು-ಆಕಾರದ ಸ್ಕ್ರ್ಯಾಪರ್‍ನಿಂದ ನಿಮ್ಮ ನಾಲಿಗೆಯನ್ನು ಕೆರೆದುಕೊಳ್ಳುವುದು ನಿಜವಾಗಿಯೂ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹತೋಟಿಯಲ್ಲಿಡುತ್ತದೆ.’ ಎಂದು ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

ನಿಮ್ಮ ನಾಲಿಗೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ನಿಮ್ಮ ದೇಹದಲ್ಲಿರುವ ಎಲ್ಲಾ ವಿಷಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ. ಮತ್ತು ಕೆಲವು ತಜ್ಞರು ಇದು ನಮ್ಮ ಬಾಯಿಯ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಹಿಂದಿನ ಆಯುರ್ವೇದ ವೈದ್ಯಕೀಯ ಪಠ್ಯವಾದ ಚರಕ ಸಂಹಿತೆಯು ನಾಲಿಗೆಯನ್ನು ಶುಚಿಗೊಳಿಸುವುದನ್ನು ಶಿಫಾರಸ್ಸು ಮಾಡುತ್ತದೆ. ಏಕೆಂದರೆ ಅದು ದುರ್ವಾಸನೆ ಮತ್ತು ರುಚಿ ರಹಿತವನ್ನು ತೆಗೆದು ಹಾಕುತ್ತದೆ. ಈ ಸರಳ ಅಭ್ಯಾಸವು ನಿಮ್ಮ ಶರೀರದಿಂದ ವಿಷವನ್ನು ತೆಗೆದು ಹಾಕುವ ನೇರ ಮಾರ್ಗವಾಗಿದೆ.

ಕರ್ಮ ಆಯುರ್ವೇದದ ಸಂಸ್ಥಾಪಕ ಡಾ. ಪುನೀತ್ ಅವರು ಮೌಖಿಕ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾಲಿಗೆಯ ಸ್ಕ್ರ್ಯಾಪಿಂಗ್‍ನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಎಂದು ಹೇಳಿದರು. ಇದು ನಾಲಿಗೆಯ ಮೇಲಿನ ಲೇಪನಗಳನ್ನು ತೆಗೆಯುವ ಪ್ರಕ್ರಿಯೆಯಾಗಿದೆ ಮತ್ತು ತಕ್ಷಣವೇ ತಾಜಾತನವನ್ನು ತರುತ್ತದೆ ಎಂದು ಅವರು ಹೇಳಿದರು. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪ್ರಾಚೀನ ಭಾರತೀಯ ಸಂಪ್ರದಾಯವಾಗಿದೆ ಎಂದು ತಜ್ಞರು ಎತ್ತಿ ತೋರಿಸಿದ್ದಾರೆ. ನಾಲಿಗೆ ಮತ್ತು ಬಾಯಿಯ ಕರಹವು ನಿಮ್ಮ ಮನಸ್ಸು-ದೇಹ ವ್ಯವಸ್ಥೆ ಮತ್ತು ಹೊರಗಿನ ಪರಿಸರದ ನಡುವಿನ ಗೇಟ್‍ವೇಗಳಾಗಿದೆ. ಆದ್ದರಿಂದ ಈ ಪ್ರಮುಖ ಅಂಗದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ನಾಲಿಗೆಯನ್ನು ಕೆರೆದುಕೊಳ್ಳುವುದರಿಂದ ಅದು ದಟ್ಟಣೆಯನ್ನು ತೆಗೆದು ಹಾಕುತ್ತದೆ. ಮತ್ತು ಇದು ಕೆಟ್ಟ ಉಸಿರಾಟಕ್ಕೆ ಕಾರಣವಾಗಬಹುದಾದ ಅನೇಕ ಸೂಕ್ಷ್ಮ ಜೀವಿಗಳನ್ನು ತೆಗೆದು ಹಾಕುತ್ತದೆ ಎಂದು ಡಾ. ಪುನೀತ್ ಹೇಳಿದ್ದಾರೆ.

ಆಯುರ್ವೇದವು ನಾಲಿಗೆ ಮತ್ತು ಕರುಳಿನ ಆರೋಗ್ಯದ ನಡುವಿನ ಅರ್ಥಪೂರ್ಣ ಸಂಬಂಧವನ್ನು ವಿವರಿಸುತ್ತದೆ. ಎಂದು ಅವರು ವಿವರಿಸಿದರು. ನಾಲಿಗೆಯಲ್ಲಿನ ಯಾವುದೇ ಬಣ್ಣವು ಅನಾರೋಗ್ಯ ಅಥವಾ ದೇಹದ ನಿರ್ಧಿಷ್ಟ ಭಾಗಗಳಲ್ಲಿ ಅಸಮತೋಲನವನ್ನು ಉಂಟು ಮಾಡುತ್ತದೆ. ನಾಲಿಗೆಯ ವಿವಿಧ ಭಾಗಗಳು ದೇಹದ ವಿವಿಧ ಭಾಗಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಬ್ಯಾಕ್ಟೀರಿಯಾ ಮತ್ತು ಆಹಾರ ಕಣಗಳು ಪಪಿಲ್ಲೆಗಳ ನಡುವೆ ಸಂಗ್ರಹಗೊಳ್ಳುತ್ತವೆ. ಈ ಕಣಗಳನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸದಿದ್ದಲ್ಲಿ ಅವುಗಳು ಲೋಳೆಯ ಒಳ ಪದರದಿಂದ ಮುಚ್ಚಲ್ಪಡುತ್ತದೆ ಮತ್ತು ಅದು ನಿರಂತರ ದುರ್ವಾಸನೆಗೆ ಕಾರಣವಾಗುತ್ತದೆ. ಶುದ್ಧವಾದ ನಾಲಿಗೆಯು ರುಚಿಯನ್ನು ಉತ್ತಮವಾಗಿ ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಉಪ್ಪು, ಸಕ್ಕರೆ ಮತ್ತು ಮಸಾಲೆಗಳ ಕಡಿಮೆ ಬಳಕೆಗೆ ಕಾರಣವಾಗುತ್ತದೆ. ಉಪ್ಪು, ಸಕ್ಕರೆ ಮತ್ತು ಮಸಾಲೆಗಳ ಸೇವನೆಯನ್ನು ಕಡಿಮೆ ಮಾಡಿದರೆ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಹಾಗಾಗಿ ನಾಲಿಗೆಯನ್ನು ಸ್ವಚ್ಛಗೊಳಿಸುವುದು ನಿಮ್ಮ ನೈರ್ಮಲ್ಯದ ಪ್ರಮುಖ ಭಾಗವಾಗಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಪಾರ್ಸ್ಲಿ ಟೀ ಮಾಡುವ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಟಂಗ್ ಸ್ಕ್ರ್ಯಾಪಿಂಗ್‍ನ್ನು ಹೇಗೆ ಮಾಡುವುದು ?

ಡಾ. ಪುನೀತ್ ಅವರು ಟಂಗ್ ಸ್ಕ್ರ್ಯಾಪಿಂಗ್ ಮಾಡುವ ವಿಧಾನವನ್ನು ಸರಿಯಾಗಿ ವಿವರಿಸಿದರು.

-ಬೆಳಗ್ಗೆ ಬ್ರಶ್ ಮಾಡಿದ ನಂತರ ಸ್ಕ್ರ್ಯಾಪಿಂಗ್ ಮಾಡಿ.

-ನಿಮ್ಮ ಬಾಯಿ ತೆರೆಯಿರಿ ಮತ್ತು ನಾಲಿಗೆಯನ್ನು ನಿಧಾನವಾಗಿ ಹೊರ ಚಾಚಿ

-ಸ್ಕ್ರ್ಯಾಪರ್‍ನ್ನು ನಾಲಿಗೆಯ ಹಿಂಭಾಗದಲ್ಲಿ ದೃಢವಾಗಿ ಇರಿಸಿ ಮತ್ತು ಮತ್ತು ಮೃದುವಾಗಿ ಮುಂದಕ್ಕೆ ಎಳೆಯಿರಿ.

-ಸ್ಕ್ರ್ಯಾಪರ್‍ನಿಂದ ಕೀಟಾಣು ಕಣಗಳನ್ನು ತೊಳೆಯಿರಿ. ಸ್ಕ್ರ್ಯಾಪಿಂಗ್ ಸಾಧ್ಯವಾದಷ್ಟು ಮೃದುವಾಗಿರಬೇಕು.

-ನೀವು 3-4 ಸುತ್ತುಗಳ ಸ್ಕ್ರ್ಯಾಪಿಂಗ್ ಪೂರ್ಣಗೊಳಿಸಿದ ನಂತರ ನಿಮ್ಮ ಬಾಯಿಯನ್ನು ತೊಳೆಯಿರಿ.

-ಪ್ರತಿ ಬಳಕೆಯ ನಂತರ ಸ್ಕ್ರ್ಯಾಪರ್‍ನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ.

ಆಯುರ್ವೇದ ಧರ್ಮ ಗ್ರಂಥಗಳು ಸ್ಕ್ರ್ಯಾಪರ್‍ಗಳು ಚಿನ್ನ, ಬೆಳ್ಳಿ, ತಾಮ್ರ, ತವರ ಅಥವಾ ಹಿತ್ತಾಳೆಯದ್ದಾಗಿದ್ದರೆ ಉತ್ತಮ ಎಂದು ಶಿಫಾರಸ್ಸು ಮಾಡುತ್ತವೆ ಎಂದು ಡಾ. ಪುನೀತ್ ಹೇಳುತ್ತಾರೆ.

ಇದನ್ನೂ ಓದಿ: ದೆಹಲಿಯ ಕೊರೆಯುವ ಚಳಿಯಲ್ಲಿ ಟೀ ಶರ್ಟ್​ನಲ್ಲಿ ಓಡಾಡಿದ ರಾಹುಲ್ ಗಾಂಧಿ: ಇದರ ಹಿಂದಿದೆ ವೈಜ್ಞಾನಿಕ ಕಾರಣ

ಏನನ್ನು ಮಾಡಬೇಕು ಮತ್ತು ಏನು ಮಾಡಬಾರದು

ಮಾಡಬೇಕಾದುದು:

ನೀವು ನಿಮ್ಮ ನಾಲಿಗೆಯನ್ನು ಕ್ಲೀನ್ ಟಂಗ್ ಸ್ಕ್ರ್ಯಾಪರ್‍ನಿಂದ ಸ್ವಚ್ಛಗೊಳಿಸಬೇಕು. ಬೆಳಿಗ್ಗೆ ಎದ್ದ ನಂತರ ಒಮ್ಮೆ ಮತ್ತು ರಾತ್ರಿ ಮಲಗುವ ಮುನ್ನ ಒಂದು ದಿನದಲ್ಲಿ ಎರಡು ಬಾರಿ ನಾಲಿಗೆಯನ್ನು ಕೆರೆದರೆ ಪ್ರಯೋಜನಕಾರಿ. ನಯವಾದ ಅಂಚುಗಳನ್ನು ಹೊಂದಿರುವ ಉತ್ತಮ ಗುಣಮಟ್ಟದ ಸ್ಕ್ರ್ಯಾಪರ್‍ನ್ನು ಖರೀದಿಸಿ. ನಿಮ್ಮ ನಾಲಿಗೆಯ ಮೇಲೆ ಟಂಗ್ ಸ್ಕ್ರ್ಯಾಪರ್‍ನ್ನು ಲಘುವಾಗಿ ಬಳಸಿ. ನಾಲಿಗೆಗೆ ನೋವಾಗಬಾರದು.

ಏನು ಮಾಡಬಾರದು:

ನಿಮ್ಮ ನಾಲಿಗೆಯನ್ನು ಕೆರೆದುಕೊಳ್ಳುವಾಗ ನೀವು ಹೆಚ್ಚು ಒತ್ತಡ ಹಾಕಬಾರದು. ಹಾಗೆ ಮಾಡುವುದರಿಂದ ನಿಮ್ಮ ನಾಲಿಗೆಯ ಸೂಕ್ಷ್ಮ ಮೇಲ್ಮೈಗೆ ಹನಿಯಾಗಬಹುದು ಮತ್ತು ನಾಲಿಗೆಯ ರುಚಿ ಮೊಗ್ಗುಗಳನ್ನು ಹಾನಿಗೊಳಿಸಬಹುದು. ನೀವು ನಾಲಿಗೆಯನ್ನು ಬಿಳಿ ತೇಪೆಗಳು ಅಥವಾ ಹುಣ್ಣುಗಳಿದ್ದರೆ ಸ್ಕ್ರ್ಯಾಪ್ ಮಾಡಬೇಡಿ. ನಾಲಿಗೆ ಕೆರೆದುಕೊಳ್ಳಲು ಟೂತ್‍ಬ್ರಶ್‍ನ್ನು ಬಳಸಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ