AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದ್ ಆಗುವ ಆತಂಕದಲ್ಲಿ ಬಳ್ಳಾರಿ ಜೀನ್ಸ್ ಉದ್ಯಮ: ಬೀದಿಗೆ ಬೀಳಲಿದೆ ಎರಡು ಲಕ್ಷ ಜನರ ಬದುಕು

ಭಾರತ್​ ಜೋಡೋ ಯಾತ್ರೆ ಸಂದರ್ಭದಲ್ಲಿ, ಬಳ್ಳಾರಿಯಲ್ಲಿ ಜೀನ್ಸ್​ ಪಾರ್ಕ್​ ಸ್ಥಾಪಿಸುವ ಭರವಸೆ ನೀಡಿದ್ದರು ರಾಹುಲ್​ ಗಾಂಧಿ. ನಂತರ, ಜಮೀನು ಗುರುತಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಅದು ನನಸಾಗುವ ಸುಳಿವು ಕಾಣುತ್ತಿಲ್ಲ. ಜೀನ್ಸ್ ಪಾರ್ಕ್ ನಿರ್ಮಾಣ ಒತ್ತಟ್ಟಿಗಿರಲಿ, ಇರುವ ಜೀನ್ಸ್ ವಾಷಿಂಗ್​​ ಘಟಕಗಳೇ ಮೂಲಸೌಕರ್ಯ ಕೊರತೆಯಿಂದ ಮುಚ್ಚುತ್ತಿವೆ. ಇದೀಗ ಬಳ್ಳಾರಿ ಜಿನ್ಸ್ ಉದ್ಯಮ ಪೂರ್ತಿ ಬಂದ್ ಆಗುವ ಆತಂಕದಲ್ಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ ಇದಕ್ಕೆ ಕಾರಣ.

ಬಂದ್ ಆಗುವ ಆತಂಕದಲ್ಲಿ ಬಳ್ಳಾರಿ ಜೀನ್ಸ್ ಉದ್ಯಮ: ಬೀದಿಗೆ ಬೀಳಲಿದೆ ಎರಡು ಲಕ್ಷ ಜನರ ಬದುಕು
ಮುಚ್ಚುವ ಆತಂಕದಲ್ಲಿ ಬಳ್ಳಾರಿ ಜೀನ್ಸ್ ಉದ್ಯಮ
ವಿನಾಯಕ ಬಡಿಗೇರ್​
| Updated By: Ganapathi Sharma|

Updated on: Jul 04, 2025 | 8:13 AM

Share

ಬಳ್ಳಾರಿ, ಜುಲೈ 4: ಬಳ್ಳಾರಿ (Ballari) ಜೀನ್ಸ್ ಎಂದರೆ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿದೆ. ಇದೇ ಜೀನ್ಸ್ ಉದ್ಯಮ‌‌ (Jeans Industry) ನಂಬಿ ಎರಡು ಲಕ್ಷ ಜನ ಬದುಕು ಕಟ್ಟಿಕೊಂಡಿದ್ದಾರೆ. ಅಂತಹ ಜೀನ್ಸ್ ಉದ್ಯಮವೇ ಬಂದ್ ಆಗುವ ಆತಂಕ ಇದೀಗ ಎದುರಾಗಿದೆ. ಒಂದೆಡೆ, ಮೂಲಸೌಕರ್ಯ ಕೊರೆತೆಯಿಂದ ಈಗಾಗಲೇ ಜಿಲ್ಲೆಯ ಜೀನ್ಸ್ ವಾಷಿಂಗ್ ಘಟಕಗಳು ಮುಚ್ಚುತ್ತಿವೆ. ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಸೊರಗುತ್ತಿರುವ ಬಳ್ಳಾರಿ ಜೀನ್ಸ್ ಉದ್ದಿಮಕ್ಕೆ ಈಗ ಮತ್ತೊಂದು ಶಾಕ್‌ ಎದುರಾಗಿದೆ. ಜೀನ್ಸ್ ಉದ್ಯಮವೇ ಮುಚ್ಚುವ ಭೀತಿ ಎದುರಾಗಿದೆ. ಜೀನ್ಸ್ ವಾಷಿಂಗ್ ಘಟಕಗಳು ಕಲುಷಿತ ನೀರನ್ನು ಸಂಸ್ಕರಿಸದೇ ನೇರವಾಗಿ ಜಲಮೂಲಗಳಿಗೆ ಬಿಟ್ಟು, ಪರಿಸರ ಮತ್ತು ಜಲ ಮೂಲಗಳ ಮಾಲಿನ್ಯಕ್ಕೆ ಕಾರಣವಾಗಿರುವುದರಿಂದ ಘಟಕಗಳನ್ನು ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿಯ (Karnataka Pollution Board) ಬಳ್ಳಾರಿ ಕಚೇರಿಯು ಕೇಂದ್ರ ಕಚೇರಿಗೆ ವರದಿ ನೀಡಿದೆ. ಕೇಂದ್ರ ಕಚೇರಿಯು ಕೆಲವೇ ದಿನಗಳಲ್ಲಿ ಈ ಸಂಬಂಧ ಆದೇಶ ಹೊರಡಿಸುವ ಸಾಧ್ಯತೆಗಳಿದ್ದು, ವಾಷಿಂಗ್ ಘಟಕಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಬಳ್ಳಾರಿ ಜೀನ್ಸ್ ಉದ್ಯಮದ ಸಮಸ್ಯೆ ಏನು?

ಕಲುಷಿತ ನೀರು ಸಂಸ್ಕರಣ ಘಟಕಗಳನ್ನು ಸ್ಥಾಪಿಸಿಕೊಳ್ಳದಿರುವುದೇ ಇದಕ್ಕೆಲ್ಲ ಮೂಲ ಕಾರಣ. ಸದ್ಯ ವಾಷಿಂಗ್ ಘಟಕಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ನೀಡಿದ್ದು, ಯಾವುದೇ ಕ್ಷಣದಲ್ಲಿ ಮುಚ್ಚುವಂತೆ ಆದೇಶ ಬರುವ ಸಾಧ್ಯತೆ‌ ಇದೆ. ಆದರೆ, ಇದಕ್ಕೆ ಬಳ್ಳಾರಿಯಲ್ಲಿ ಉದ್ದಿಮೆದಾರರು ಹಾಗೂ ವಿಪಕ್ಷಗಳಿಂದ‌ ಸಾಕೊಷ್ಟು ವಿರೋಧ ವ್ಯಕ್ತವಾಗಿದೆ.

ಜೀನ್ಸ್ ಉದ್ಯಮಿಗಳ ಸಮಸ್ಯೆ ಕೇಳದ ಸರ್ಕಾರ

ಜೀನ್ಸ್ ವಾಷಿಂಗ್ ಘಟಕಗಳಲ್ಲಿ ಜೀನ್ಸ್ ಬಟ್ಟೆ ವಾಷ್ ಮಾಡಲು ಬೇರೆ ಕೆಮಿಕಲ್ ಬಳಕೆ ಮಾಡಲಾಗತ್ತದೆ. ಜೊತಗೆ ಬಣ್ಣಗಳು ನೀರಿನೊಂದಿಗೆ ಬೆರೆತು ಜಲಮೂಲ ಸೇರುತ್ತಿವೆ. ಈ ನೀರನ್ನು ಸಂಸ್ಕರಿಸಿ ಬಿಡಲು ಸ್ವಂತ ಘಟಕ ಸ್ಥಾಪನೆ ಮಾಡುವಷ್ಟು ಜೀನ್ಸ್ ಉದ್ಯಮಿಗಳು ಬಲಿಷ್ಠರಲ್ಲ ಎನ್ನಲಾಗಿದೆ. ಹೀಗಾಗಿ ಎಲ್ಲಾ ವಾಷಿಂಗ್ ಘಟಗಳಿಗಾಗಿ ಒಂದು ಬೃಹತ್‌ ಸಂಸ್ಕರಣಾ ಘಟಕ ಮಾಡಿಕೊಡಿ ಎಂದು ಸರ್ಕಾರಕ್ಕೆ ಉದ್ಯಮಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ
Image
ಬೆಂಗಳೂರು: ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕ ಅಸ್ಥಿಪಂಜರ ಪ್ರಕರಣಕ್ಕೆ ಟ್ವಿಸ್ಟ್
Image
ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್‌ ಕೇಸ್​: ಸ್ಪೋಟಕ ಮಾಹಿತಿ ಬಹಿರಂಗ
Image
ನನಸಾಗದ ರಾಹುಲ್​ ಗಾಂಧಿ ಕನಸು: ಬಳ್ಳಾರಿಯ ಜೀನ್ಸ್ ವಾಷಿಂಗ್​​ ಘಟಕಗಳು ಬಂದ್
Image
ಬಳ್ಳಾರಿ ಜೀನ್ಸ್ ​​: ರಾಹುಲ್ ಮಾತಿಗೂ ಬೆಲೆ ಕೊಡದ ಸಿದ್ದರಾಮಯ್ಯ ಸರ್ಕಾರ!

ಮೂಲಸೌಕರ್ಯ ಒದಗಿಸಿಕೊಡಿ: ಸರ್ಕಾರಕ್ಕೆ ಜೀನ್ಸ್ ಉದ್ಯಮಿಗಳ ಅಳಲು

ಇನ್ನೊಂದೆಡೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಳ್ಳಾರಿ‌ ಜೀನ್ಸ್ ಉದ್ಯಮಕ್ಕೆ 5 ಸಾವಿರ ಕೋಟಿ ರೂ. ಅನುದಾನ ಕೊಟ್ಟು ಜೀನ್ಸ್ ಕ್ಯಾಪಿಟಲ್ ಮಾಡುತ್ತೇವೆ ಎಂದು ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ನಮಗೆ 5 ಸಾವಿರ ಕೋಟಿ ರೂ.‌ ಬೇಡ. ಸಂಸ್ಕರಣಾ ಘಟಕ ಸೇರಿದಂತೆ ಮೂಲಭೂತ ಸೌಲಭ್ಯ ಕೊಡಿ ಎಂದು ಉದ್ಯಮಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನನಸಾಗದ ರಾಹುಲ್​ ಗಾಂಧಿ ಕನಸು: ಬಳ್ಳಾರಿಯ 40 ಜೀನ್ಸ್ ವಾಷಿಂಗ್​​ ಘಟಕಗಳು ಬಂದ್

ಒಟ್ಟಾರೆ, ಈ ಮೊದಲು 60 ಜೀನ್ಸ್ ಘಟಕಗಳಿದ್ದ ಬಳ್ಳಾರಿಯಲ್ಲಿ ಈಗ ಸಂಸ್ಕರಣಾ ಘಟಕ ಮಾಡಿಕೊಳ್ಳದ ಕಾರಣ 15 ಘಟಕಗಳನ್ನು ಮುಚ್ಚಿಸಲಾಗಿದೆ. ಇನ್ನು 10 ಘಟಕಗಳು ತನ್ನಿಂತಾನೆ ಹಲವು ಕಾರಣಗಳಿಂದ ಮುಚ್ಚಿವೆ. ಸದ್ಯ 37 ಘಟಕಗಳಿಗೆ ಹಲವು ಹಂತದ ನೋಟಿಸ್‌ಗಳನ್ನು ನೀಡಲಾಗಿದ್ದು ಸ್ಥಗಿತದ ಭೀತಿಯಲ್ಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ