AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಸಾಗದ ರಾಹುಲ್​ ಗಾಂಧಿ ಕನಸು: ಬಳ್ಳಾರಿಯ 40 ಜೀನ್ಸ್ ವಾಷಿಂಗ್​​ ಘಟಕಗಳು ಬಂದ್

ಬಳ್ಳಾರಿಯಲ್ಲಿ ಜೀನ್ಸ್ ಉಡುಪು ತಯಾರಿಕೆಯಲ್ಲಿ ತೊಡಗಿರುವ 80 ಜೀನ್ಸ್ ವಾಷಿಂಗ್ ಘಟಕಗಳ ಪೈಕಿ 40 ಘಟಕಗಳು ವಿದ್ಯುತ್ ದರ ಏರಿಕೆ, ನೀರಿನ ಸಮಸ್ಯೆ ಮತ್ತು ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ಮುಚ್ಚಿವೆ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕಾರ್ಮಿಕರಿಗೆ ಸಂಬಳ ನೀಡುವುದು ಕೂಡ ಕಷ್ಟವಾಗಿದೆ. ಜೀನ್ಸ್ ಪಾರ್ಕ್ ಸ್ಥಾಪನೆಗೆ ನೀಡಲಾದ ಭರವಸೆಗಳು ಇನ್ನೂ ಫಲ ನೀಡಿಲ್ಲ. ಈ ಸಂಕಷ್ಟದಿಂದ ಬಳ್ಳಾರಿಯ ಜೀನ್ಸ್ ಉದ್ಯಮ ತೀವ್ರ ಆರ್ಥಿಕ ಹೊಡೆತಕ್ಕೆ ಸಿಲುಕಿದೆ.

ನನಸಾಗದ ರಾಹುಲ್​ ಗಾಂಧಿ ಕನಸು: ಬಳ್ಳಾರಿಯ 40 ಜೀನ್ಸ್ ವಾಷಿಂಗ್​​ ಘಟಕಗಳು ಬಂದ್
ಬಳ್ಳಾರಿ ಜೀನ್ಸ್​ ವಾಷಿಂಗ್​ ಘಟಕಗಳು ಬಂದ್​
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ವಿವೇಕ ಬಿರಾದಾರ

Updated on:Apr 12, 2025 | 7:14 PM

ಬಳ್ಳಾರಿ, ಏಪ್ರಿಲ್​ 12: ಬಳ್ಳಾರಿಯಲ್ಲಿ (Ballari) ತಯಾರಾಗುವ ಜಿನ್ಸ್​ ಉಡುಪುಗಳಿಗೆ (Jeans Dress) ದೇಶಾದ್ಯಂತ ಭಾರಿ ಬೇಡಿಕೆ ಇದೆ. ಇಲ್ಲಿನ ಜೀನ್ಸ್​ ಉಡುಪು ತಯಾರಿಕಾ ಘಟಕಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ, ಇದೀಗ ಮೂಲಭೂತ ಸೌಕರ್ಯಗಳಿಲ್ಲದೆ ಜೀನ್ಸ್ ವಾಷಿಂಗ್ ಘಟಕಗಳು (Jeans washing unit) ಒಂದೊಂದಾಗಿ ಮುಚ್ಚುತ್ತಿವೆ. ವಿದ್ಯುತ್​ ದರ ಹೆಚ್ಚಳ, ನೀರಿನ ಸಮಸ್ಯೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಕಚ್ಚಾ ವಸ್ತುಗಳ ದರ ಹೆಚ್ಚಳದಿಂದ ಬಳ್ಳಾರಿಯಲ್ಲಿರುವ 80 ಜೀನ್ಸ್ ವಾಷಿಂಗ್ ಘಟಕಗಳಲ್ಲಿ ಈಗಾಗಲೇ 40 ಘಟಕಗಳು ಮಚ್ಚಿವೆ.

ಈ ಘಟಕಗಳ ಮಾಲೀಕರು ಕಾರ್ಮಿಕರಿಗೆ ಸಂಬಳ ನೀಡುವುದು ಕೂಡ ಕಷ್ಟವಾಗಿದೆ. ಕೊರೊನಾ ಮಹಾಮಾರಿ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಘಟಕಗಳು ಬಂದ್​ ಆಗಿದ್ದವು. ಈ ಸಮಯದಲ್ಲಿ ಬಂದ್​ ಆದ ಘಟಕಗಳು 4-5 ವರ್ಷಗಳು ಕಳೆದರೂ ಪುನಃ ಚೇತರಿಸಿಕೊಂಡಿಲ್ಲ. ಬಳ್ಳಾರಿ ಜೀನ್ಸ್ ಉದ್ಯಮ ಆರ್ಥಿಕ ಹೊಡೆತಕ್ಕೆ ಸಿಲುಕಿದೆ.

ನಷ್ಟಕ್ಕೆ ಕಾರಣವೇನು?

2006 ರಲ್ಲಿ ಆರ್ಥಿಕವಾಗಿ ಬಲಿಷ್ಠ ಇದ್ದ ಬಳ್ಳಾರಿ ಜೀನ್ಸ್ ವಾಷಿಂಗ್ ಉದ್ಯಮ, ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲಗುತ್ತಿದೆ. ಬಳ್ಳಾರಿ ಜೀನ್ಸ್ ವಾಷಿಂಗ್ ಉದ್ಯಮ  ಹಂತ – ಹಂತವಾಗಿ ಅರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವೇನು ಎಂಬುವುದನ್ನು ಜೀನ್ಸ್ ವಾಷಿಂಗ್ ಘಟಕಗಳ ಅಧ್ಯಕ್ಷ ವೇಣುಗೋಪಾಲ ತಿಳಿಸಿದ್ದಾರೆ.

ಇದನ್ನೂ ಓದಿ
Image
ಗಂಡನ ಕೊಲೆಯನ್ನು ವಿಡಿಯೋ ಕಾಲ್​ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!
Image
ಪತ್ನಿಯನ್ನ ತುಂಡರಿಸಿ ಸೂಟ್ ಕೇಸ್​ನಲ್ಲಿ ತುಂಬಿಟ್ಟ ಪತಿ!
Image
ಪತ್ನಿ ಜತೆ ಅಕ್ರಮ ಸಂಬಂಧ, ಗುಂಡಿ ತೋಡಿ ಬಾಡಿಗೆದಾರನನ್ನು ಜೀವಂತ ಸಮಾಧಿ
Image
ಉದ್ಯಮಿ ಕೊಲೆಗೆ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯೇ ಕತ್ತು ಸೀಳಿ ಹತ್ಯೆ!

ಉದ್ಯಮದಲ್ಲಿ ಪೈಪೋಟಿ ಹೆಚ್ಚಾಗಿದೆ. 2006 ರಿಂದ 2010 ರ ವರಗೆ ಒಂದು ಪ್ಯಾಂಟ್​ ತೊಳೆಯಲು ಮಾಡಲು 18 ರೂ. ತೆಗೆದುಕೊಳ್ಳಲಾಗುತ್ತಿತ್ತು. 2010 ರ ನಂತರ ಒಂದು ಪ್ಯಾಂಟ್ ತೊಳೆಯಲು 14 ರೂ. ತೆಗೆದುಕೊಳ್ಳಲಾಗುತ್ತಿದೆ. 2006 ರಿಂದ 2010 ರ ವರಗೆ 25000 ರೂ. ವಿದ್ಯುತ್​ ಬಿಲ್ ಬರುತ್ತಿತ್ತು. ನೀರಿನ ಬಿಲ್ ಕಡಿಮೆ ಇತ್ತು. ಮತ್ತು ವಾಷಿಂಗ್ ಕೆಮಿಕಲ್ಸ್‌ಗಳ ಬೆಲೆಯೂ ಕೂಡ ಕಡಿಮೆ ಇತ್ತು. ಆಗ, ಓರ್ವ ಕಾರ್ಮಿಕನಿಗೆ 10,000 ರೂ. ಸಂಬಳ ನೀಡಲಾಗುತ್ತಿತ್ತು. ಎಲ್ಲವೂ ಸೇರಿ ಒಂದು ತಿಂಗಳಿಗೆ 2 ಲಕ್ಷದ ವರಗೆ ಖರ್ಚು ಆಗುತ್ತಿತ್ತು.

ಆದರೆ, ಇದೀಗ ಎಲ್ಲದರ ಬೆಲೆ ಏರಿಕೆಯಾಗಿದೆ. ಕಾರ್ಮಿಕ ಕೂಲಿ ಕೂಡ ಹೆಚ್ಚಳವಾಗಿದೆ. ಆಗ, ಕಾರ್ಮಿಕನ ಸಂಬಳ 10 ಸಾವಿರ ರೂ. ಇದ್ದದ್ದು, 30 ಸಾವಿರ ರೂ.ಗೆ ಏರಿಕೆಯಾಗಿದೆ. ವಿದ್ಯುತ್​ ಬಿಲ್​ ತಿಂಗಳಿಗೆ 1.20 ಲಕ್ಷ ರೂ. ಬರುತ್ತಿದೆ. ನೀರಿನ ಬಿಲ್ 40 ಸಾವಿರ ರೂ. ಬರುತ್ತದೆ. ವಾಷಿಂಗ್ ಕೆಮಿಕಲ್​  2 ಲಕ್ಷ ರೂ.ವರೆಗೂ ನೀಡಬೇಕು. ಇದೆಲ್ಲವೂ ಸೇರಿ ಪ್ರಸ್ತುತ ಒಂದು ವಾಷಿಂಗ್ ಘಟಕ ನಡೆಸಬೇಕೆಂದರೆ ಕನಿಷ್ಠ ಅಂದ್ರೂ 6 ರಿಂದ 7 ಲಕ್ಷ ರೂ. ತಿಂಗಳಿಗೆ ಖರ್ಚಾಗುತ್ತದೆ.  ಎಲ್ಲದರ ಬೆಲೆ ಏರಿಕೆಯಾಗಿ ಆರ್ಥಿಕ ಸಂಕಷ್ಟ ಸಿಲುಕಿ ಒಂದೊಂದಾಗಿ ಘಟಕಗಳು ಬಂದ್​  ಆಗುತ್ತಿವೆ. ಸರ್ಕಾರಗಳು ಮಾತ್ರ ನಮ್ಮ ಮೇಲೆ ಹೊರೆ ಹಾಕುತ್ತಲೇ ಇವೆ. ಹೊಟ್ಟೆ ಪಾಡಿಗೆ ಜೀನ್ಸ್ ವಾಷಿಂಗ್ ಘಟಕಗಳನ್ನ ನಡೆಸುತ್ತಿದ್ದೆವೆ. ಯಾವುದೇ ಲಾಭವಾಗುತ್ತಿಲ್ಲ ಎಂದು ಹೇಳಿದರು.

ಜೀನ್ಸ್​ ಪಾರ್ಕ್​​ ಭರವಸೆ ನೀಡಿದ್ದ ರಾಹುಲ್​ ಗಾಂಧಿ

ಭಾರತ್​ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್​ ಗಾಂಧಿ ಬಳ್ಳಾರಿಯ ಜೀನ್ಸ್​ ತಯಾರಿಕೆ ಘಟಕಗಳ ಉದ್ಯೋಗಿಗಳ ಮತ್ತು ಮಾಲೀಕರ ಜೊತೆ ಮಾತುಕತೆ ನಡೆಸಿದ್ದರು. ಆಗ ಅವರು, ಜೀನ್ಸ್​ ಪಾರ್ಕ್​ ಸ್ಥಾಪಿಸುವ ಭರವಸೆ ನೀಡಿದ್ದರು. ರಾಜ್ಯ ಸರ್ಕಾರದ ಮೊದಲನೇ ಕ್ಯಾಬಿನೆಟ್​ನಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ರಾಹುಲ್​ ಗಾಂಧಿ ಹೇಳಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದ್ರೂ ಈ ಬಗ್ಗೆ ನೆಪ ಮಾತ್ರಕ್ಕೆ ಚರ್ಚೆ, ಹಣ ಮೀಸಲಿಟ್ಟಿಲ್ಲ.

ಬಜೆಟ್​ನಲ್ಲಿ ಘೋಷಿಸಿದ್ದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ 2024ರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್​ನಲ್ಲೂ ಬಳ್ಳಾರಿಯಲ್ಲಿ ಜೀನ್ಸ್​ ಪಾರ್ಕ್​ ಸ್ಥಾಪಿಸುವ ಘೋಷಣೆ ಮಾಡಿದ್ದರು. ಆದರೆ, ಜೀನ್ಸ್ ಉದ್ಯಮಿಗಳು ಜೀನ್ಸ್ ಪಾರ್ಕ್ ಬೇಡ, ವಿದ್ಯುತ್​ ದರ ಕಡಿಮೆ ಮಾಡಿದರೆ ಸಾಕು ಎನ್ನುತ್ತಿದ್ದಾರೆ. ಕೆಲಸಗಾರರು ಕನಿಷ್ಠ ಮೂಲಭೂತ ಸೌಕರ್ಯ ಕೊಡಿ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯ ಬಹುತೇಕ ಪಿಎಚ್‌ಸಿಗಳಲಿಲ್ಲ ಮರಣೋತ್ತರ ಪರೀಕ್ಷೆ ಕೇಂದ್ರಗಳು

ಒಂದು ಜೀನ್ಸ್ ವಾಷಿಂಗ್ ಘಟಕವನ್ನು ನಡೆಸಬೇಕಾದರೆ ಒಂದು ಲಕ್ಷ ಲೀಟರ್ ನೀರು ನಿತ್ಯ ಬೇಕು. ಬೇಸಿಗೆ ಹಿನ್ನೆಲೆ ನೀರಿನ ಅಭಾವ ಕೂಡ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜೀನ್ಸ್​ ವಾಷಿಂಗ್​ ಘಟಕಗಳಿಗೆ ಬೇಕಾದಷ್ಟು ನೀರು ಸಿಗದೆ ಪರದಾಡುತ್ತಿದ್ದಾರೆ. ದರ ಏರಿಕೆ ಮತ್ತು ಆರ್ಥಿಕ ಸಮಸ್ಯೆಗಳಿಂದ ಒಂದೊಂದೆ ಜೀನ್ಸ್​ ವಾಷಿಂಗ್​ ಘಟಕಗಳು ಬಂದ್​ ಆಗುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Sat, 12 April 25

ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ