ಬಳ್ಳಾರಿ ಜೀನ್ಸ್ ಪಾರ್ಕ್ ನಿರ್ಮಾಣ​​: ರಾಹುಲ್ ಗಾಂಧಿ ಮಾತಿಗೂ ಬೆಲೆ ಕೊಡದ ಸಿದ್ದರಾಮಯ್ಯ ಸರ್ಕಾರ!

Bellary Jeans Park: ಪಂಚ ಯೋಜನೆಗಳಿಗೆ ಗ್ಯಾರಂಟಿ ಹಣ ಜೋಡಿಸುವಲ್ಲೆ ಸರ್ಕಾರ ಹೆಣಗುತ್ತಿರುವಾಗ 5000 ಕೋಟಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್​​ ನಿರ್ಮಾಣ ಮಾಡುತ್ತಾ ಅನ್ನೋದೇ ಡೌಟ್ ಅಂತಿದ್ದಾರೆ ಬಳ್ಳಾರಿ ಜನ. ಈ ಮಧ್ಯೆ, ಮತ್ತೆ ಅಪರಲ್ ಪಾರ್ಕ್ ಅಜೆಂಡ ಹಿಡಿದು... ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವ ತಂತ್ರವನ್ನ ಕಾಂಗ್ರೆಸ್ ರೂಪಿಸಿದೆ. ಆದರೆ ಪದೆ ಪದೇ ಬಳ್ಳಾರಿ ಜನ್ರು ಇಂತಹ ಟೊಳ್ಳು ಭರವಸೆಗೆ ಮಣೆ ಹಾಕಲ್ಲ ಅಂತಾ ಜನರು ಪಿಸುಮಾತಿನಲ್ಲಿ ಹೇಳ್ತಿದಾರೆ.

Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಸಾಧು ಶ್ರೀನಾಥ್​

Updated on:Feb 23, 2024 | 11:03 AM

ಬಳ್ಳಾರಿ ಅಂದಾಕ್ಷಣ ನೆನಪಾಗೋದೇ ಅಲ್ಲಿನ ಜೀನ್ಸ್ ಉದ್ಯಮ (Bellary Jeans Park), ಆ ಉದ್ಯಮಕ್ಕೆ ಉತ್ತೇಜನ ನೀಡಬೇಕು ಅಂತ ಅಲ್ಲಿನ ಜನ್ರು ಹಲವು ವರ್ಷಗಳಿಂದ ಸರ್ಕಾರಗಳಿಗೆ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಆದ್ರೆ ಕೇವಲ ಭರವಸೆಗಳ ಮೇಲೆ ಭರವಸೆಗಳು ಅಭಿವೃದ್ಧಿ ಹೊಂದುತ್ತಿವೆಯೇ ಹೊರತು ವಾಸ್ತವದಲ್ಲಿ ಯಾವುದೂ ಪ್ರಗತಿಯಾಗಿಲ್ಲ. ಅದಕ್ಕೆ ಪೂರಕವಾಗುವಂತೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು (Rahul Gandhi) ಜೀನ್ಸ್ ಅಪರಲ್ ಪಾರ್ಕ್​​ ನಿರ್ಮಾಣ ಮಾಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದರು. ಅದು ಕೂಡ ಭರವಸೆಯಾಗಿ ಉಳಿಯುವ ಲಕ್ಷಣ ಎದ್ದು ಕಾಣುತ್ತಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ (Siddaramaiah).

ಹೌದು, ಬಳ್ಳಾರಿ ಅಂದಾಕ್ಷಣ ನೆನಪಿಗೆ ಬರುವುದು ಅಕ್ರಮ ಗಣಿಗಾರಿಕೆ ಮತ್ತೊಂದು ಜೀನ್ಸ್ ಉದ್ಯಮ. ಬಳ್ಳಾರಿಯಲ್ಲಿ ತಯಾರಾಗುವ ಜೀನ್ಸ್‌ಗೆ ಬೇರೆ – ಬೇರೆ ದೇಶಗಳಲ್ಲೂ ಒಳ್ಳೆ ಮಾರ್ಕೆಟ್ ಇದೆ. ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಬಹು ದೊಡ್ಡ ಉದ್ಯಮ ಅಂದ್ರೆ ಅದು ಜೀನ್ಸ್ ಉದ್ಯಮ..

ಈ ಉದ್ಯಮಕ್ಕೆ ಸರ್ಕಾರಗಳಿಂದ ಸರಿಯಾದ ಉತ್ತೇಜನ ಸಿಗುತ್ತಿಲ್ಲ.. ಹೀಗಾಗಿ ವರ್ಷದಿಂದ ವರ್ಷಕ್ಕೆ ಜೀನ್ಸ್ ಉದ್ಯಮ ಸೊರಗುತ್ತಿದೆ.. ಇದನ್ನ ಮನಗಂಡ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬಳ್ಳಾರಿಯಲ್ಲಿ 5,000 ಕೋಟಿ ರೂ ವೆಚ್ಚದಲ್ಲಿ ಜೀನ್ಸ್ ಅಫೆರಲ್ ಪಾರ್ಕ್​​ ಮಾಡುತ್ತೇವೆ, ಲಕ್ಷಾಂತರ ಜನ್ರಿಗೆ ಉದ್ಯೋಗ ನೀಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದರು.. ಇದು ಕಾಂಗ್ರೆಸ್‌ನ ಗ್ಯಾರಂಟಿ ಅಂತಲೂ ಘಂಟಾಘೋಷವಾಗಿ ಹೇಳಿದ್ರು.. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣವೇ ಅಫೆರಲ್ ಪಾರ್ಕ್​​ ನಿರ್ಮಾಣ ಮಾಡುತ್ತೇವೆ ಅಂದವರು ಮೊದಲ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಇದನ್ನ ಕೈ ಬಿಟ್ರು.. ನಂತರ ಇದನ್ನ ಗಮನಿಸಿದ ಸ್ವತಃ ರಾಹುಲ್ ಗಾಂಧಿ ಸರ್ಕಾರಕ್ಕೆ ಪತ್ರ ಬರೆದು ಬಳ್ಳಾರಿಯಲ್ಲಿ ಅಫೆರಲ್ ಪಾರ್ಕ್​​ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ರು.

ಇದನ್ನೂಓದಿ: ಧಾರವಾಡದಲ್ಲಿ ನರೇಗಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಒಂದು ಪೈಸೆ ಕೂಲಿಯನ್ನೂ ನೀಡಿಲ್ಲ! 6.51 ಕೋಟಿ ಬಾಕಿ ಉಳಿಸಿಕೊಂಡಿದೆ!

ಅಂದ್ಹಾಗೆ ರಾಹುಲ್ ಗಾಂಧಿ ಪತ್ರ ಬರೆದ ಬಳಿಕ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಅವರು ಮೊನ್ನೆಯ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಅಪರಲ್ ಪಾರ್ಕ ನಿರ್ಮಾಣ ಮಾಡುತ್ತೇವೆ ಅಂತಾ ಪ್ರಸ್ತಾಪ ಮಾಡಿದ್ರು… ಆದರೆ, ಇಂತಿಷ್ಟು ಹಣ ನೀಡಲಾಗುತ್ತೆ ಅಂತಾ ಬಜೆಟ್‌ನಲ್ಲಿ ಹೇಳಿಲ್ಲ, ಅಪರಲ್ ಪಾರ್ಕ್​​ ‌ಗೆ ಜಾಗ ಗುರುತು ಮಾಡಿಲ್ಲ. ಕೇವಲ ಪ್ರಸ್ತಾಪ ಮಾಡಿದ್ದಾರೆ.

ಜೊತೆಗೆ ಪಂಚ ಗ್ಯಾರಂಟಿ ಹಣ ಜೋಡಿಸುವಲ್ಲೆ ಸರ್ಕಾರ ಹೆಣಗುತ್ತಿರುವಾಗ ಐದು ಸಾವಿರ ಕೋಟಿ ರೂ ವೆಚ್ಚದಲ್ಲಿ ಜೀನ್ಸ್ ಪಾರ್ಕ ನಿರ್ಮಾಣ ಮಾಡುತ್ತಾ ಅನ್ನೋದೇ ಡೌಟ್ ಅಂತ ಬಳ್ಳಾರಿ ಜನರು ಹೇಳುತ್ತಿದ್ದಾರೆ.. ಇನ್ನು ಅಪರಲ್ ಪಾರ್ಕ್​​ ನಿರ್ಮಾಣದ ಅಜೆಂಡ ಹಿಡಿದು… ಮುಂದಿನ ಲೋಕಸಭಾ ಚುನಾವಣೆಯನ್ನ ಗೆಲ್ಲುವ ತಂತ್ರವನ್ನ ಕಾಂಗ್ರೆಸ್ ರೂಪಿಸಿದೆ.. ಹೀಗಾಗಿ ಪದೇ ಪದೇ ಬಳ್ಳಾರಿ ಜನ್ರು ಇಂತಹ ಟೊಳ್ಳು ಭರವಸೆಗೆ ಮಣೆ ಹಾಕಲ್ಲ. ಕಾಂಗ್ರೆಸ್ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು ಅಂತಾ ಜನ್ರು ಒತ್ತಾಯ ಮಾಡಿದ್ದಾರೆ.

ಒಟ್ಟಿನಲ್ಲಿ ಜೀನ್ಸ್ ಉದ್ಯಮದಲ್ಲಿ ಪ್ರಖ್ಯಾತಿ ಪಡೆದಿರುವ ಬಳ್ಳಾರಿಗೆ .. ಒಂದು ಅಪರಲ್ ಪಾಕ್೯ ಬಹಳ ಅವಶ್ಯಕತೆ ಇದೆ.. ಸರ್ಕಾರ ಕೇವಲ ಟೊಳ್ಳು ಭರವಸೆ ನೀಡದೆ.. ಕೊಟ್ಟ ಭರವಸೆ ಈಡೇರಿಸಬೇಕು ಜೊತೆಗೆ ಜೀನ್ಸ್ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕು ಎನ್ನುವುದು ಬಳ್ಳಾರಿ ಜನ್ರ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Fri, 23 February 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ