ಅಯೋಧ್ಯೆ ಯಾತ್ರಿಕರು ಪ್ರಯಾಣಿಸುತ್ತಿದ್ದ ರೈಲಿಗೆ ಬೆದರಿಕೆ: ಬೆಂಕಿ ಹಚ್ಚುವುದಾಗಿ ಯುವಕರಿಂದ ಧಮ್ಕಿ

ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಈ ವೇಳೆ ಮೂವರು ಯುವಕರು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿಯನ್ನ ಹತ್ತಿದ್ದು ಅಲ್ಲದೇ ಯಾತ್ರಿಕರೊಂದಿಗೆ ವಾಗ್ವಾದ ಮಾಡಿದ್ದಾರೆ. ನಮ್ಮ ಜತೆ ವಾಗ್ವಾದ ನಡೆಸಿ ರೈಲಿಗೆ ಬೆಂಕಿ ಹಚ್ಚುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ಯಾತ್ರಿಕರು ಹೇಳಿದ್ದಾರೆ.

ಅಯೋಧ್ಯೆ ಯಾತ್ರಿಕರು ಪ್ರಯಾಣಿಸುತ್ತಿದ್ದ ರೈಲಿಗೆ ಬೆದರಿಕೆ: ಬೆಂಕಿ ಹಚ್ಚುವುದಾಗಿ ಯುವಕರಿಂದ ಧಮ್ಕಿ
ರೈಲಿಗೆ ಬೆದರಿಕೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 23, 2024 | 9:35 AM

ಬಳ್ಳಾರಿ, ಫೆಬ್ರವರಿ 23: ಅವರೆಲ್ಲಾ ಅಯೋಧ್ಯೆ (Ayodhya) ಪ್ರಭು ಶ್ರೀರಾಮರ ದರ್ಶಶನ ಪಡೆದು ಮರಳಿ ತಮ್ಮೂರಿಗೆ ವಾಪಾಸ್ಸಾಗುತ್ತಿದ್ದರು. ಶ್ರೀರಾಮನ ಭಜನೆ ಮಾಡುತ್ತ ಧನ್ಯತಾ ಭಾವದೊಂದಿಗೆ ನೆಮ್ಮದಿಯಾಗಿ ಪ್ರಯಾಣಿಸುತ್ತಿದ್ದರು. ಯಾತ್ರಿಕರಿದ್ದ ಬೋಗಿಗೆ ಆ ಮೂವರು ಯುವಕರು ಹತ್ತಿ ಅವರೊಂದಿಗೆ ಕಾರಣವಿಲ್ಲದೆ ವಾಗ್ವಾದಕ್ಕಿಳಿದ್ದಾರೆ. ಮಾತಿನ ಭರದಲ್ಲಿ ಕಿಡಗೇಡಿಗಳು ಬೋಗಿಗೆ ಬೆಂಕಿ ಹಚ್ಚುವ ಧಮ್ಕಿ ಹಾಕಿದ್ದಾರೆ. ಈ ಮಾತಿಂದ ಕೆರಳಿದ ಯಾತ್ರಿಕರು ಒಂದು ಗಂಟೆಗಳ ಕಾಲ ಟ್ರೈನ್ ಸ್ಟಾಪ್ ಮಾಡಿ ಪ್ರತಿಭಟನೆ ಮಾಡಿ ಕಿಡಗೇಡಿಗಳನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ

ಅಯೋಧ್ಯೆ ಪ್ರಭು ಶ್ರೀರಾಮರ ದರ್ಶನ ಪಡೆದು ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಅನ್ಯಕೋಮಿನ ಮೂವರು ಯುವಕರು ಬೋಗಿ ನಂ 2 ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿಯನ್ನ ಹತ್ತಲು ಮುಂದಾಗಿದ್ದಾರಂತೆ. ಯಾತ್ರಿಕರು ಯುವಕರನ್ನ ತಡೆದು ಇದು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿ ಇದರಲ್ಲಿ ತಾವು ಹತ್ತುವ ಹಾಗಿಲ್ಲ ಎಂದು ತಿಳಿ ಹೇಳಿದ್ದಾರೆ. ಆದರೆ ಆ ಯುವಕರು ಯಾತ್ರಿಕರ ಮಾತು ಕೇಳಿದೆ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ದೇವರಾಜ ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್​ನಲ್ಲಿ ಅರೆಬೆಂದ, ಅಶುಚಿ ಆಹಾರ; ರೊಚ್ಚಿಗೆದ್ದ ವಿದ್ಯಾರ್ಥಿಗಳು

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ರೈಲು ಏನು ನಿಮ್ಮ ಅಪ್ಪನ ಮನೆದಲ್ಲ. ಇದಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇವೆ ಅಂತಾ ಅಂದಿದ್ದಾರಂತೆ. ಯಾತ್ರಿಕರು ತಕ್ಷಣ ರೈಲ್ವೆ ಪೊಲೀಸ್‌ರನ್ನ ಕರೆಸಿ ಅವರಿಗೆ ಯುವಕರನ್ನ ಒಪ್ಪಿಸಿದ್ದಾರೆ‌‌. ಈ ಸಂದರ್ಭದಲ್ಲಿ ಆ ಮೂವರು ಯುವಕರು ಯಾತ್ರಿಕರು ಇರುವ ಈ ಬೋಗಿಗೆ ಬೆಂಕಿ ಹಚ್ಚುತ್ತೆವೆ ಎಂದು ಮತ್ತೆ ಧಮ್ಕಿ ಹಾಕಿದ್ದಾರೆ. ಯಾವಾಗ ಬೋಗಿಗೆ ಬೆಂಕಿ ಹಚ್ಚುತ್ತೆವೆ ಅಂತಾ ಅಂದ್ರು ಆಗಲೇ ಯಾತ್ರಿಕರು ಕೋಪಗೊಂಡಿದ್ದಾರೆ.

ಯುವಕರನ್ನ ಬಂಧಿಸಿ ಅವರ ವಿರುದ್ಧ ಎಪ್‌ಐಆರ್​ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ಇಳಿದಿದ್ದರು. ಇನ್ನೂ ಗೋದ್ರಾ ಹತ್ಯಾ ಕಾಂಡ ಮತ್ತೆ ಮರಕಳಿಸುತ್ತೆ ಅಂತಾ ಹೇಳಿದ್ದ ಬಿ.ಕೆ. ಹರಿಪ್ರಸಾದ ಮಾತು ನೆನಪಾಗಿ ನಾವು ಇದನ್ನ ಸುಮ್ಮನೆ ಬಿಟ್ಟರೆ ಆಗಲ್ಲ ಅಂತಾ ಪ್ರತಿಭಟನೆ ಮಾಡಿದ್ದೇವೆ. ಆ ಕಿಡಗೇಡಿಗಳನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದೇವೆ ಎಂದು ಯಾತ್ರಿಕರು ತಿಳಿಸಿದ್ದಾರೆ.

ಅಂದ್ಹಾಗೆ ಧಮ್ಕಿ ಹಾಕಿದ ಅನ್ಯಕೋಮಿನ ಯುವಕರನ್ನ ಬಂಧಿಸುವ ಕೆಲಸ ಮಾಡಬೇಕಿದ್ದ ರೈಲ್ವೆ ಪೋಲೀಸರು ಯಾತ್ರಿಕರ ಮುಂದೆ ಅವರನ್ನ ಬಿಟ್ಟು ಕಳಿಸಿದ್ದಾರೆ. ಇದನ್ನ ಗಮನಿಸಿದ ಯಾತ್ರಿಕರು ರೈಲ್ವೆ ಪೋಲಿಸರ ಮೇಲೆ ಆಕ್ರೋಶಗೊಂಡು ಅಯೋಧ್ಯೆ ರೈಲನ್ನು ಸ್ಟಾಪ್ ಮಾಡಿ ಒಂದು ಗಂಟೆಗಳ ಕಾಲ ನಿರಂತರ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಹೊಸಪೇಟೆಯ ಸ್ಥಳೀಯ ಹಿಂದೂ ಕಾರ್ಯಕರ್ತರು, ಭಜರಂಗ ದಳ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ಆಗಮಿಸಿ ಹಿಂದೂ ಧ್ವಜ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: Tv9 Impact: ಕುಡಿಯುವ ನೀರಿಗಾಗಿ ಹಾಹಾಕಾರ, ಟಿವಿ9 ವರದಿ ಬಳಿಕ ಕುಡಿಯುವ ನೀರಿನ ಯೋಜನೆಗೆ ಚಾಲನೆ ಕೊಟ್ಟ ಸಚಿವರು

ಜೊತೆಗೆ ಎಸ್ಪಿ ಸ್ಥಳಕ್ಕೆ ಆಗಮಿಸಿ ಧಮ್ಕಿ ಹಾಕಿದ ಕಿಡಗೇಡಿಗಳ ಬಂಧಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಬಳಿಕ ವಿಜಯನಗರ ಜಿಲ್ಲೆ ಎಸ್ಪಿ ಶ್ರೀಹರಿಬಾಬು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಕಿಡಗೇಡಿಗಳ ಬಂಧಿಸುತ್ತೆವೆ. ಈ ಕೂಡಲೇ ಎಪ್‌ಐ‌ಆರ್ ಹಾಕುತ್ತೆವೆ ಎಂದು ಹೇಳಿದ್ದಾರೆ. ರೈಲು ಪ್ರಯಾಣ ಮುಂದುವರೆಯುವಂತೆ ಯಾತ್ರಿಕರ ಮನವೊಲಿಸುವಲ್ಲಿ ಯಶಸ್ವಿಯಾಗಿ ಅವರನ್ನ ಕಳಿಸಿದ್ದಾರೆ.

ಅಯೋಧ್ಯೆ ಪ್ರಭು ಶ್ರೀರಾಮನ ದರ್ಶನ ಪಡೆದು ಭಕ್ತಿ ಭಾವದಿಂದ ಮರಳುತ್ತಿದ್ದ ಯಾತ್ರಿಕರ ರೈಲಿಗೆ ಹತ್ತಿ ಬೆಂಕಿ ಹಚ್ಚುತ್ತೇವೆ ಎಂದು ಧಮ್ಕಿ ಹಾಕುತ್ತಾರಲ್ಲ. ಇಂತವರಿಂದಲೇ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವುದು. ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:47 am, Fri, 23 February 24

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್