Tv9 Impact: ಕುಡಿಯುವ ನೀರಿಗಾಗಿ ಹಾಹಾಕಾರ, ಟಿವಿ9 ವರದಿ ಬಳಿಕ ಕುಡಿಯುವ ನೀರಿನ ಯೋಜನೆಗೆ ಚಾಲನೆ ಕೊಟ್ಟ ಸಚಿವರು
ಬೇಸಿಗೆ ಪ್ರಾರಂಭದಲ್ಲೇ ಆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಗ್ರಾಮಕ್ಕೆ ಬರುವ ಒಂದು ಟ್ಯಾಂಕರ ನೀರಿಗಾಗಿ ಜಡೆ ಜಗಳವಾಗುತ್ತಿದೆ. ಹಲವು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಕ್ಕೆ ಹೋಗಿ ನಿಮ್ಮ Tv9 ವಿಸ್ತೃತ ವರದಿ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಗ್ರಾಮಕ್ಕೆ ಬೇಟಿ ನೀಡಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದಾರೆ.
ಬಳ್ಳಾರಿ, ಫೆ.18: ಬೇಸಿಗೆ ಪ್ರಾರಂಭದಲ್ಲಿ ಬಳ್ಳಾರಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಅದರಲ್ಲೂ ಈ ವರ್ಷ ಮಳೆ (Karnataka Rain) ಕೊರತೆಯಿಂದ ಕೆರೆಗಳು ಭತ್ತಿ ಆಗಿವೆ. ಅಂತರ್ಜಲ ಕುಸಿದು ಮಾಯವಾಗಿದೆ (Drinking Water Crisis). ಹೀಗಾಗಿ ಬೇಸಿಗೆ ಪ್ರಾರಂಭದಲ್ಲಿ ನೀರಿನ ತಾತ್ವಾರ ಶುರುವಾಗಿದೆ. ಸದ್ಯ ಈ ಬಗ್ಗೆ ಟಿವಿ9 ವರದಿ ಮಾಡಿದ್ದು ಎಚ್ಚೆತ್ತ ಸಚಿವರು (B Nagendra) ಕುಡಿಯುವ ನೀರಿನ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಹಲವು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲಿನ ಗ್ರಾಮಸ್ಥರು ನೀರು ಪೂರೈಕೆ ಮಾಡುವಂತೆ ಸಾಕಷ್ಟು ಹೋರಾಟ ಮಾಡಿದ್ದಾರೆ. ಈ ಹಿಂದೆ ವಿಧಾನ ಸಭಾ ಚುನಾವಣೆ ಮತ ಬಹಿಷ್ಕಾರ ಮಾಡಿದ್ದರು, ಕೊನೆಗೆ ಅಧಿಕಾರಿಗಳ ಮನವೊಲಿಕೆಯಿಂದ ಪ್ರತಿಭಟನೆ ಹಿಂದೆತೆಗೆದುಕೊಂಡು ಮತದಾನ ಮಾಡಿದ್ದರು. ಚುನಾವಣೆ ಮುಗಿದು ವರ್ಷ ಕರೆಯುತ್ತಾ ಬಂದ್ರು ಇವರ ಸಮಸ್ಯೆ ಮಾತ್ರ ಹಾಗೆ ಉಳಿದಿತ್ತು. ನೀರಿಲ್ಲದೆ ಗ್ರಾಮಸ್ಥರು ಜಾನುವಾರಗಳನ್ನ ಮಾರಾಟ ಮಾಡಿದ್ದಾರೆ. ಸ್ನಾನ ಮಾಡಲು ನೀರಿಲ್ಲದೆ ಜನ ಪರದಾಡಿದ್ದಾರೆ.
ಇದನ್ನೂ ಓದಿ: ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸ್ತೇವೆ, 6 TMC ಕಾವೇರಿ ನೀರು ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ -ಡಿಕೆ ಶಿವಕುಮಾರ್
ಇನ್ನ ಹರಗಿನಡೋಣಿ ಗ್ರಾಮದಲ್ಲಿನ ಸಮಸ್ಯೆ ಕುರಿತು ಯಾವಾಗ ನಿಮ್ಮ TV9 ವರದಿ ಪ್ರಸಾರ ಮಾಡಿತು ಕೂಡಲೇ ಎಚ್ಚತ್ತ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಕೆಲವೇ ಗಂಟೆಯಲ್ಲಿ ಗ್ರಾಮಕ್ಕೆ ಬೇಟಿ ನೀಡಿ, 30 ಲಕ್ಷ ವೆಚ್ಚದಲ್ಲಿ ಶಾಸಕರ ನಿಧಿಯಲ್ಲಿ ನಿರ್ಮಾಣಗೊಂಡಿದ್ದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ರು. ಹರಗಿನಡೋಣಿ ಗ್ರಾಮದ ಪಕ್ಕದಲ್ಲಿರುವ ಅಲ್ಲಿಪುರ ಕೆರೆಯಿಂದ ಪೈಪಲೈನ್ ಮೂಲಕ ಗ್ರಾಮಕ್ಕೆ ನೀರು ಸರಬರಾಜಾಗುತ್ತಿದೆ. ಇನ್ನೂ ಗ್ರಾಮಕ್ಕೆ ನೀರು ಬರುತ್ತಿದ್ದ ಜನ್ರು ಸಂತಸ ಪಟ್ಟರು. ಜೊತೆಗೆ ಹರಿಯುವ ನೀರಲ್ಲಿ ಚಿಣ್ಣರು ಕುಣಿದು ಕುಪ್ಪಳಿಸಿದ್ರು. ಇನ್ನು ಗ್ರಾಮಕ್ಕೆ ಹೊಂದಿಕೊಂಡಿರುವಂತೆ ಅಂದಾಜು 30 ಕೋಟಿರೂ ವೆಚ್ಚದಲ್ಲಿ ಒಂದೆ ಕೆರೆಯನ್ನ ಮುಂಬರುವ ದಿನಗಳಲ್ಲಿ ನಿರ್ಮಾಣ ಮಾಡಿಕೊಡುತ್ತೇವೆ. ಇದು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗುತ್ತೆ ಎಂದು ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಗ್ರಾಮದ ಜನ್ರಿಗೆ ಭರವಸೆ ನೀಡಿದ್ರು.
ಒಟ್ಟಿನಲ್ಲಿ ಹಲವು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದ ಗ್ರಾಮಕ್ಕೆ ನಿಮ್ಮ Tv9 ತೆರಳಿ ಪ್ರತ್ಯಕ್ಷ ವರದಿ ಮಾಡಿದ ಬಳಿಕ ಎಚ್ಚೆತ್ತ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ನೀರು ಹರಿಸಿದ್ದಾರೆ. ಮುಂದಿನ ದಿನದಲ್ಲಿ ಗ್ರಾಮಕ್ಕೊಂದು ಕೆರೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಮಾಡಿ ಕೊಡಲಿ ಎಂಬುದೇ ನಮ್ಮ ಆಶಯ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ