ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸ್ತೇವೆ, 6 TMC ಕಾವೇರಿ ನೀರು ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ -ಡಿಕೆ ಶಿವಕುಮಾರ್
ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸ್ತೇವೆ ಎಂದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಎಲ್ಲೆಲ್ಲಿ ಟ್ರಾಫಿಕ್ ಸರಿಮಾಡಬೇಕು ಚಿಂತನೆ ನಡೀತಿದೆ. ಆ ಮೂಲಕ ಬ್ರ್ಯಾಂಡ್ ಬೆಂಗಳೂರು ಮಾಡೋಕೆ ಹೊರಟಿದ್ದೇವೆ. ನಿಮ್ಮ ಕಣ್ಣುಗಳು ಈ ಬದಲಾವಣೆಗೆ ಸಾಕ್ಷಿ ಆಗಲಿವೆ ಎಂದರು.
ಬೆಂಗಳೂರು, ಫೆ.18: ‘ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ’ ಧ್ಯೇಯ ವಾಕ್ಯದಡಿ ಇಂದು ಆರ್.ಆರ್.ನಗರ, ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಜನಸ್ಪಂದನ (Jana Spandana) ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಸಂಸದ ಡಿಕೆ ಸುರೇಶ್, ಬಿಜೆಪಿ ಶಾಸಕರಾದ ಎಸ್‌ಟಿ ಸೋಮಶೇಖರ್ ಮತ್ತು ಮುನಿರತ್ನ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸ್ತೇವೆ. 6 TMC ಕಾವೇರಿ ನೀರು ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಇಗಾಗಲೇ ಅನೇಕ ಏರಿಯಾಗಳಲ್ಲಿ ಕುಡುಯುವ ನೀರಿಗಾಗಿ ಜನ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಸದ್ಯ ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸ್ತೇವೆ ಎಂದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. 6 TMC ಕಾವೇರಿ ನೀರು ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ. ನಮ್ಮ ನೀರು ನಮ್ಮ ಹಕ್ಕು ಯಾರಿಗೋಸ್ಕರ ಮಾಡಿದ್ವಿ? ಮೇಕೆದಾಟು ಹೋರಾಟ ಮಾಡಿದ್ದು ಬೆಂಗಳೂರಿನವರಿಗೆ. ಖಾತೆಗಳನ್ನ ಸರಿ ಮಾಡಿ, ಎಲ್ಲ ದಾಖಲೆಗಳನ್ನ ನೀಡ್ತೇವೆ. ಸದ್ಯದಲ್ಲೇ ಬೆಂಗಳೂರು ಬಜೆಟ್ ಬರ್ತಿದೆ. ನೀರಿನ ಸಮಸ್ಯೆ ಬಗೆಹರಿಸ್ತೇವೆ ಎಂಬ ಭರವಸೆ ನೀಡ್ತೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ನಮ್ಮ ಸಿದ್ದರಾಮಯ್ಯರವರು ಹಲವು ಅಭಿವೃದ್ಧಿ ಕೆಲಸ ಕೊಟ್ಟಿದ್ದಾರೆ. ಯಶವಂತಪುರ ತಾಜ್ ಹೊಟೇಲ್ ಭಾಗದಲ್ಲಿ ಟ್ರಾಫಿಕ್ ಸಮಸ್ಯೆಯಿದೆ. ಅಲ್ಲಿ ಟನಲ್ ಬೇಕೋ, ಫ್ಲೈ ಓವರ್ ಬೇಕೋ ಪರಿಶೀಲಿಸಲು ಹೇಳಿದ್ದೇವೆ. ಎಲ್ಲೆಲ್ಲಿ ಟ್ರಾಫಿಕ್ ಸರಿಮಾಡಬೇಕು ಚಿಂತನೆ ನಡೀತಿದೆ. ಆ ಮೂಲಕ ಬ್ರ್ಯಾಂಡ್ ಬೆಂಗಳೂರು ಮಾಡೋಕೆ ಹೊರಟಿದ್ದೇವೆ. ನಿಮ್ಮ ಕಣ್ಣುಗಳು ಈ ಬದಲಾವಣೆಗೆ ಸಾಕ್ಷಿ ಆಗಲಿವೆ. ಬರೀ ಆಶ್ವಾಸನೆಯನ್ನ ಕಿವಿ ಕೇಳ್ತಿತ್ತು. ಆದ್ರೆ ನಿಮ್ಮ ಕಣ್ಣುಗಳು ಈಗ ಕೆಲಸವನ್ನ ನೋಡ್ತಿವೆ ಎಂದರು.
ಇದನ್ನೂ ಓದಿ: ಬಜೆಟ್‌ಗೆ ವಿಪಕ್ಷಗಳ ಟೀಕೆ ವಿಚಾರ; ಬಡವರ ವಿರೋಧಿಗಳಿಗೆ ಬಜೆಟ್ ಅರ್ಥ ಆಗಲ್ಲ-ಸಿಎಂ ಸಿದ್ದರಾಮಯ್ಯ
ಭಾವನೆಗಳ ಮೇಲೆ ನಾವು ರಾಜಕಾರಣವನ್ನ ಮಾಡುತ್ತಿಲ್ಲ
ಇನ್ನು ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಜಾರ್ಜ್ ನಿಮಗೆಲ್ಲ ಮತ್ತೊಂದು ಹೊಸ ಯೋಜನೆ ತಂದಿದ್ದಾರೆ. ಮನೆಗೆ ಸೂರು ಹಾಕಿಕೊಳ್ತೀರಿ. ಸೋಲಾರ್ ಗೂ ಸಬ್ಸಿಡಿ ಕೊಡ್ತೀವಿ. ಭಾವನೆ ಮೇಲೆ ನಾವು ರಾಜಕಾರಣ ಮಾಡ್ತಾ ಇಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ನಿಮ್ಮ ಕಷ್ಟಕ್ಕೆ ಭಾಗಿಯಾಗುವ ಕೆಲಸ ಮಾಡ್ತಿದ್ದೀವಿ. ಸುಳ್ಳು ಸತ್ಯಕ್ಕೂ ನಾಲ್ಕೇ ಬೆರಳು ವ್ಯತ್ಯಾಸ. ನಮ್ಮ ಕಣ್ಣಿನಲ್ಲೇ ನಿಮ್ಮ ಕೆಲಸ ವೀಕ್ಷಿಸುತ್ತಿದ್ದೀರಿ. ನಮ್ಮ ಐದು ಗ್ಯಾರೆಂಟಿಗಳಿಗಿಂತ ನಿಮಗೆ ಮತ್ತೇನು ಬೇಕು ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:00 pm, Sun, 18 February 24