AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕ್ಷೇತ್ರದಲ್ಲಿ ಹೆಚ್ಚಿನ ದರಕ್ಕೆ ಟ್ಯಾಂಕರ್ ನೀರು ಮಾರುವಂತಿಲ್ಲ: ಶಾಸಕ‌ ಎಸ್​ಟಿ‌ ಸೋಮಶೇಖರ್​ ಎಚ್ಚರಿಕೆ

‘ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ’ ಧ್ಯೇಯ ವಾಕ್ಯದಡಿ ಇಂದು ಆರ್.ಆರ್.ನಗರ, ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ‌ ಎಸ್.ಟಿ‌ ಸೋಮಶೇಖರ್, ನನ್ನ ಕ್ಷೇತ್ರದಲ್ಲಿ ಹೆಚ್ಚಿನ ದರಕ್ಕೆ ಟ್ಯಾಂಕರ್ ನೀರಿನ‌ ದರ ಮಾರುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಮಾಲೀಕರನ್ನ ಸೀಜ್ ಮಾಡುವ ಕೆಲಸ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ನನ್ನ ಕ್ಷೇತ್ರದಲ್ಲಿ ಹೆಚ್ಚಿನ ದರಕ್ಕೆ ಟ್ಯಾಂಕರ್ ನೀರು ಮಾರುವಂತಿಲ್ಲ: ಶಾಸಕ‌ ಎಸ್​ಟಿ‌ ಸೋಮಶೇಖರ್​ ಎಚ್ಚರಿಕೆ
ಶಾಸಕ‌ ಎಸ್.ಟಿ‌ ಸೋಮಶೇಖರ್
Anil Kalkere
| Edited By: |

Updated on: Feb 18, 2024 | 4:08 PM

Share

ಬೆಂಗಳೂರು, ಫೆಬ್ರವರಿ 18: ನನ್ನ ಕ್ಷೇತ್ರದಲ್ಲಿ ಹೆಚ್ಚಿನ ದರಕ್ಕೆ ಟ್ಯಾಂಕರ್ ನೀರಿನ‌ ದರ ಮಾರುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಮಾಲೀಕರನ್ನ ಸೀಜ್ ಮಾಡುವ ಕೆಲಸ ಆಗುತ್ತೆ ಎಂದು ಶಾಸಕ‌ ಎಸ್.ಟಿ‌ ಸೋಮಶೇಖರ್ (ST Somashekhar) ಎಚ್ಚರಿಕೆ ನೀಡಿದ್ದಾರೆ. ‘ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ’ ಧ್ಯೇಯ ವಾಕ್ಯದಡಿ ಇಂದು ಆರ್.ಆರ್.ನಗರ, ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 800 ರೂ. ಕ್ಕಿಂತ ಜಾಸ್ತಿ ಬೆಲೆಗೆ ಟ್ಯಾಂಕರ್ ನೀರು ಮಾರಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮೇಲೆ ನಿಮ್ಮ ಮನಸ್ಸು ಇದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮನಸ್ಸು ಯಶವಂತಪುರ ಕ್ಷೇತ್ರದ ಜನತೆಯ ಬಳಿ ಇದೆ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರವಾಗಲಿ, ಪಕ್ಷ ಆಗಲಿ, ಅಭ್ಯರ್ಥಿಯಾಗಲಿ ಯಾರಾದರೂ ಕರೆಯಬೇಕು ಅಲ್ವಾ? ಯಾರೂ ಕರೆದೆ ಇಲ್ಲ‌ ಅಂದರೆ ಹೇಗೆ ಎಂದಿದ್ದಾರೆ.

6 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರಿಗೆ ನೀರಿನ ವಿಚಾರವಾಗಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​, ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ. 6 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ ಎಂದು ಎಂದು ಹೇಳಿದ್ದಾರೆ.

ಜೀವಜಲಕ್ಕೆ ಹಾಹಾಕಾರ: ನೀರಿಗಾಗಿ‌ ಸಿದ್ಧಾರ್ಥ ನಗರದ ನಿವಾಸಿಗಳು ಪರದಾಟ 

ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಬಳಿಯ ಸಿದ್ಧಾರ್ಥ ನಗರದಲ್ಲಿ ಕೇಳುವವರೆ ಇಲ್ಲ. ಸಿದ್ಧಾರ್ಥ ನಗರದಲ್ಲಿ ಜೀವಜಲಕ್ಕೆ ಹಾಹಾಕಾರ ನಡೆದಿದ್ದು, ಪ್ರತಿದಿನ ನೀರಿಗಾಗಿ‌ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ. ಸಿದ್ಧಾರ್ಥ ನಗರದಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಜಲಮಂಡಳಿ ನೀರು ಕೊಡೋದನ್ನ ಮರೆತಂತಿದೆ.

ಇದನ್ನೂ ಓದಿ: ಮೇ ತಿಂಗಳೊಳಗೆ ಕುಡಿವ ನೀರಿನ ಸಮಸ್ಯೆ ಬಗೆಹರಿಸ್ತೇವೆ, 6 TMC ಕಾವೇರಿ ನೀರು ಬೆಂಗಳೂರಿಗೆ ಮೀಸಲಿಟ್ಟಿದ್ದೇನೆ -ಡಿಕೆ ಶಿವಕುಮಾರ್

ವರ್ಷಗಳು ಕಳೆದರೂ ನೀರು ಬಂದಿಲ್ಲ. ವಾರಕ್ಕೆ ಒಂದು ಬಾರಿ ಮಾತ್ರ ಕಾವೇರಿ ನೀರು ಬೀಡಲಾಗುತ್ತದೆ. ಹೆಸರಿಗೆ ಮಾತ್ರ ನಲ್ಲಿ ಅಳವಡಿಕೆ ಮಾಡಿದ್ದು, ಮೋಟಾರ್ ಹಾಕಿ ಎಳೆದರೂ ಹನಿ ನೀರು ಬರಲ್ಲ. ನೀರಿಗಾಗಿ ಸಾರ್ವಜನಿಕರೆ ಬೋರ್‌ವೆಲ್ ಕೊರೆಸಿದ್ದಾರೆ. ಬೇಸಿಗೆ ಆರಂಭದಲ್ಲೆ ಬೋರ್‌ವೆಲ್ ಬತ್ತಿ ಹೋಗುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಜನಸ್ಪಂದನ: ಡಿಕೆ ಬ್ರದರ್ಸ್​ ಹಾಡಿ ಹೊಗಳಿದ S​.T.ಸೋಮಶೇಖರ್, ಕೆರೆಗಳ ಅಭಿವೃದ್ಧಿಗೆ ಮನವಿ ಮಾಡಿದ ಡಿಕೆ ಸುರೇಶ್

ಇನ್ನೊಂದೆಡೆ 6 ತಿಂಗಳ ಹಿಂದೆ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಬಿದ್ದಿದೆ. ಟ್ಯಾಂಕರ್ ನೀರು ಪಡೆಯಬೇಕು ಅಂದರು ದುಬಾರಿ ಬೆಲೆ ತೆರಬೇಕು. ಸ್ಥಳೀಯ ನಿವಾಸಿಗಳ ಪಾಲಿಗೆ ಪಾಲಿಕೆ, ಜಲಮಂಡಳಿ ಹಾಗೂ ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ. ನೀರು ಪೂರೈಕೆಗೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು