ಬಜೆಟ್‌ಗೆ ವಿಪಕ್ಷಗಳ ಟೀಕೆ ವಿಚಾರ; ಬಡವರ ವಿರೋಧಿಗಳಿಗೆ ಬಜೆಟ್ ಅರ್ಥ ಆಗಲ್ಲ-ಸಿಎಂ ಸಿದ್ದರಾಮಯ್ಯ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಗತ ಕೋರಿದರು. ಬಳಿಕ ಮಂಚನಹಳ್ಳಿಯಲ್ಲಿ ಕನಕದಾಸರ ಪುತ್ಥಳಿ ಉದ್ಘಾಟಿಸಿದ ಅವರು, ಈ ಬಾರಿ ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಕಾಂಗ್ರೆಸ್​ ಗೆಲ್ಲುತ್ತದೆ. ಆ ಮೂಲಕ ಜನ ಈ‌ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ. ಬಿಜೆಪಿಯವರು ಬರೀ ಬುರುಡೆ ಹೊಡೆಯುತ್ತಿದ್ದಾರೆ ಎಂದು ಹೇಳಿದರು.

ಬಜೆಟ್‌ಗೆ ವಿಪಕ್ಷಗಳ ಟೀಕೆ ವಿಚಾರ; ಬಡವರ ವಿರೋಧಿಗಳಿಗೆ ಬಜೆಟ್ ಅರ್ಥ ಆಗಲ್ಲ-ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 18, 2024 | 1:23 PM

ಮಂಡ್ಯ, ಫೆ.18: ಬಜೆಟ್‌ಗೆ ವಿಪಕ್ಷಗಳ ಟೀಕೆ ವಿಚಾರವಾಗಿ ಮಂಡ್ಯ(Mandya)ದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,(Siddaramaiah) ‘ಬಡವರ ವಿರೋಧಿಗಳಿಗೆ ಬಜೆಟ್ ಅರ್ಥ ಆಗಲ್ಲ. ನಾವು ಬಡವರ ಪರ ಮಾಡಿರುವ ಬಜೆಟ್ ಇದಾಗಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ನಾವು ಗ್ಯಾರಂಟಿ ಮಾತ್ರ ತಂದಿಲ್ಲ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ನಮಗೆ ಕೇಂದ್ರದಿಂದ 1 ಲಕ್ಷದ 87 ಸಾವಿರ ಕೋಟಿ ನಷ್ಟ ಆಗಿದೆ. ಅದು ಬಂದರೆ ಇನ್ನೂ ಹೆಚ್ಚು ಅಭಿವೃದ್ಧಿ ಮಾಡಬಹುದು. ಇನ್ನು ರಾಜ್ಯದಲ್ಲಿ ವಿರೋಧ ಪಕ್ಷ ಇರುವುದು ಒಂದೇ. ಬಿಜೆಪಿ ಜೊತೆ ಜೆಡಿಎಸ್ ಅವರು ಮರ್ಜ್ ಆಗಿದ್ದಾರೆ. ಇದರಿಂದ ಜೆಡಿಎಸ್ ಅವರು ಜೆಡಿಎಸ್‌ ರೀತಿಯಲ್ಲಿ ಕೆಲಸ ಮಾಡದೇ, ಬಿಜೆಪಿ ಅವರ ರೀತಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ಪಕ್ಷವಾಗಿ ಜೆಡಿಎಸ್ ಇಲ್ಲ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಿಎಂಗೆ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಗತ ಕೋರಿದರು. ಬಳಿಕ ಮಂಚನಹಳ್ಳಿಯಲ್ಲಿ ಕನಕದಾಸರ ಪುತ್ಥಳಿ ಉದ್ಘಾಟಿಸಿದ ಅವರು, ‘ಕನಕದಾಸರ ಪ್ರತಿಮೆ ಲೋಕಾರ್ಪಣೆ ಮಾಡಿದ್ದೇವೆ, ನಿಮಗೆ ಅಭಿನಂದನೆ. ಸಂತ ಕನಕದಾಸರು ಈ ದೇಶದಲ್ಲಿ ಜಾತಿ ತಾರತಮ್ಯ ಹೋಗಿ ಎಲ್ಲರೂ ಮನುಷ್ಯ ರಾಗಿ ಬಾಳುವ ಕನಸು ಕಂಡಿದ್ದರು. ಅವರನ್ನ ಕವಿ ಅಂತಲೂ ಕರೆಯುತ್ತೇವೆ. ನಾಡಿನಲ್ಲಿ ಮನುಷ್ಟತ್ವದ ಬೀಜ ಬಿತ್ತಿದ್ದಾರೆ. ಅವರು ವಿಶ್ವಗುರು, ಆಕಸ್ಮಿಕವಾಗಿ ಕುರುಬ ಜನಾಂಗದಲ್ಲಿ ಹುಟ್ಟಿದ್ದಾರೆ. ಅವರ ತತ್ವ ಆದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದರು.

ಇದನ್ನೂ ಓದಿ:ಹಾವೇರಿಯಲ್ಲಿ ರಾಜ್ಯ ಸರ್ಕಾರದ ‘ಆಶಾಕಿರಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ, ಏನಿದು ಯೋಜನೆ?

ಈ ಬಾರಿ ಕನಿಷ್ಠ 20 ಸ್ಥಾನಗಳನ್ನ ಗೆಲ್ಲುತ್ತೇವೆ ಎಂದ ಸಿಎಂ

ಈ ಬಾರಿ ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಕಾಂಗ್ರೆಸ್​ ಗೆಲ್ಲುತ್ತದೆ. ಆ ಮೂಲಕ ಜನ ಈ‌ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆ. ಬಿಜೆಪಿಯವರು ಬರೀ ಬುರುಡೆ ಹೊಡೆಯುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಸಿಎಂ, ಡಿಸಿಎಂ ಕೂಡ ಎಂಪಿ ಚುನಾವಣೆಗೆ ಸ್ಪರ್ಧಿಸಲಿ ಎಂಬ ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸ್ಥಳೀಯ ಮಟ್ಟದಲ್ಲಿ ಒಲವು ಇದ್ದವರು ಅಭ್ಯರ್ಥಿ ಆಗ್ತಾರೆ, ಸ್ಥಳೀಯರು ಯಾರು ಹೆಸರು ಹೇಳುತ್ತಾರೆ ಅವರಿಗೆ‌ ಟಿಕೆಟ್​ ಕೊಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ