Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಪೋಗಳಿಗೆ ಬರಲಿದೆ ಬಿಎಂಟಿಸಿ ‘ಭೋಜನ ಬಂಡಿ’: ಬನ್ನಿ ಕುಳಿತು ಊಟ ಮಾಡೋಣ

BMTC mobile canteen: ನೋಡಿ ಭೋಜನ ಬಂಡಿ. ಸ್ಕ್ರ್ಯಾಪ್ ವಾಹನದಿಂದ ಮೊಬೈಲ್ ಕ್ಯಾಂಟೀನ್‌ವರೆಗೆ ರೂಪಾಂತರಗೊಂಡಿದೆ. ನಮ್ಮ ನುರಿತ ತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಉತ್ಸಾಹ ಮತ್ತು ಹೆಮ್ಮೆಯಿಂದ ರಚಿಸಲಾಗಿದೆ. ನಾವೀನ್ಯತೆ ಮತ್ತು ಪಾಕಶಾಲೆಯ ಆನಂದವನ್ನು ಒಟ್ಟಿಗೆ ಆಚರಿಸೋಣ. ಭೋಜನ ಬಂಡಿ ಹೆಮ್ಮೆಯ ಪರಿವರ್ತನೆ ಮಾಡಲಾಗಿದೆ.

ಗಂಗಾಧರ​ ಬ. ಸಾಬೋಜಿ
|

Updated on: Feb 22, 2024 | 10:23 PM

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಕೆಲವು ನೌಕರರು ಹಳೆಯ ಸ್ಕ್ರ್ಯಾಪ್​ ಆದ ಬಸ್ ಅನ್ನು ತಮ್ಮ ಸಹೋದ್ಯೋಗಿಗಳಿಗಾಗಿ ಮೊಬೈಲ್ ಕ್ಯಾಂಟೀನ್‌ ಆಗಿ ನವೀಕರಿಸಿದ್ದಾರೆ. ಪೀಣ್ಯ ಮತ್ತು ಯಶವಂತಪುರ ಬಸ್ ಡಿಪೋಗಳಲ್ಲಿ ಈ ಬಸ್​ ಕ್ಯಾಂಟೀನ್ ಸದ್ಯ ಚಾಲ್ತಿಯಲ್ಲಿ ಎನ್ನಲಾಗುತ್ತಿದೆ. ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಎಂಟಿಸಿ ನೌಕರರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಮಾಡುವುದಕ್ಕೆ ಈ ಕ್ಯಾಂಟೀನ್ ಸಹಕಾರಿಯಾಗಲಿದೆ.

1 / 6
ಕ್ಯಾಂಟಿನ್​ಗಳು ಇಲ್ಲದ ಬಿಎಂಟಿಸಿ ಡಿಪೋಗಳಿಗೆ ಈ ಮೊಬೈಲ್​ ಕ್ಯಾಂಟೀನ್ ಸಿದ್ಧಪಡಿಸಲಾಗಿದೆ. ಹಳೆ BMTC ಬಸ್​ಗಳನ್ನೇ ಕ್ಯಾಂಟೀನ್​ಗಳಾಗಿ ಮಾಡಿದ್ದು, ಡಿಪೋಗಳಿಗೆ ಬರಲಿದೆ. ಭೋಜನ ಬಂಡಿ ಹೆಸರಿನ ಈ ಬಸ್ ಕ್ಯಾಂಟೀನ್​​ನ್ನು ಹೋಟೆಲ್ ಮಾದರಿಯಲ್ಲೇ ನಿರ್ಮಿಸಲಾಗಿದೆ.

2 / 6
ಈ ಕುರಿತಾಗಿ ಬಿಎಂಟಿಸಿ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ನೋಡಿ ಭೋಜನ ಬಂಡಿ. ಸ್ಕ್ರ್ಯಾಪ್ ವಾಹನದಿಂದ ಮೊಬೈಲ್ ಕ್ಯಾಂಟೀನ್‌ವರೆಗೆ ರೂಪಾಂತರಗೊಂಡಿದೆ. ನಮ್ಮ ನುರಿತ ತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಉತ್ಸಾಹ ಮತ್ತು ಹೆಮ್ಮೆಯಿಂದ ರಚಿಸಲಾಗಿದೆ. ನಾವೀನ್ಯತೆ ಮತ್ತು ಪಾಕಶಾಲೆಯ ಆನಂದವನ್ನು ಒಟ್ಟಿಗೆ ಆಚರಿಸೋಣ. ಭೋಜನ ಬಂಡಿ ಹೆಮ್ಮೆಯ ಪರಿವರ್ತನೆ ಎಂದು ಹೇಳಿದೆ.

3 / 6
ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಬಸ್‌ ಅನ್ನು ನವೀಕರಣ ಮಾಡಲಾಗಿದೆ. ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತನೆಯಾಗುವ ಮೊದಲು ಬಸ್ 10,64,298 ಕಿಲೋಮೀಟರ್ ದೂರ ಕ್ರಮಿಸಿತ್ತು.

4 / 6
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್ ಅವರು ಹೊಸ ಕ್ಯಾಂಟೀನ್ ವೀಕ್ಷಣೆ ಮಾಡಿದ್ದು, 
ತಾಂತ್ರಿಕ ಸಿಬ್ಬಂದಿಯನ್ನು ಶ್ಲಾಘಿಸಿದರು. ಈ ಮೊಬೈಲ್ ಕ್ಯಾಂಟೀನ್ ಊಟ ಸೇವನೆ ಮಾಡುವುದರೊಂದಿಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್ ಅವರು ಹೊಸ ಕ್ಯಾಂಟೀನ್ ವೀಕ್ಷಣೆ ಮಾಡಿದ್ದು, ತಾಂತ್ರಿಕ ಸಿಬ್ಬಂದಿಯನ್ನು ಶ್ಲಾಘಿಸಿದರು. ಈ ಮೊಬೈಲ್ ಕ್ಯಾಂಟೀನ್ ಊಟ ಸೇವನೆ ಮಾಡುವುದರೊಂದಿಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

5 / 6
ಮೊಬೈಲ್ ಕ್ಯಾಂಟೀನ್‌ನಲ್ಲಿ ಆಸನ, ಟೇಬಲ್, ಫ್ಯಾನ್ ಮತ್ತು ವಾಶ್ ಬೇಸಿನ್ ಇದೆ. ಇದಲ್ಲದೆ, ಇದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಹೊಂದಿದೆ. ಕ್ಯಾಂಟೀನ್‌ನ ಮೇಲ್ಭಾಗದಲ್ಲಿ ಗಾಜಿನ ಕಿಟಕಿ ಹೊಂದಿದ್ದು, ಗಾಳಿ ಮತ್ತು ಬೆಳಕು ಬರುವಂತೆ ವಿನ್ಯಾಸಗೊಳಿಸಲಾಗಿದೆ.

6 / 6
Follow us