- Kannada News Photo gallery Belagavi old age home 37 senior citizens went Mumbai trip from Belagavi by flight
ವಿಮಾನವೇರಿ ಮುಂಬೈ ಪ್ರವಾಸಕ್ಕೆ ಹೋದ ಬೆಳಗಾವಿಯ ಶಾಂತಾಯಿ ವೃದ್ದಾಶ್ರಮದ 37 ಹಿರಿಯ ಜೀವಗಳು
ರಾಜಕುಮಾರ್ ಸಿನಿಮಾದಲ್ಲಿ ಡಾ. ಪುನೀತ್ ರಾಜಕುಮಾರ್ ಅವರು ಅನಾಥಾಶ್ರಮದಲ್ಲಿದ್ದ ವೃದ್ದರನ್ನು ಗೋವಾ ಕರೆದುಕೊಂಡು ಹೋಗುತ್ತಾರೆ. ತೆರೆ ಮೇಲೆ ತೋರಿಸಲಾಗಿರುವ ಸನ್ನಿವೇಶ ಇಂದು (ಫೆ.23) ಬೆಳಗಾವಿಯಲ್ಲಿ ನಿಜವಾಗಿದೆ. ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಮಾಜಿ ಮೇಯರ್ ವಿಜಯ್ ಮೋರೆ ಅವರು ತಮ್ಮ ಆಶ್ರಮದ 37 ಜನ ವೃದ್ದರನ್ನು ಮುಂಬೈ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.
Updated on: Feb 23, 2024 | 12:03 PM

ರಾಜಕುಮಾರ್ ಸಿನಿಮಾದಲ್ಲಿ ಡಾ. ಪುನೀತ್ ರಾಜಕುಮಾರ್ ಅವರು ಅನಾಥಾಶ್ರಮದಲ್ಲಿದ್ದ ವೃದ್ದರನ್ನು ಗೋವಾ ಕರೆದುಕೊಂಡು ಹೋಗುತ್ತಾರೆ. ತೆರೆ ಮೇಲೆ ತೋರಿಸಲಾಗಿರುವ ಸನ್ನಿವೇಶ ಇಂದು (ಫೆ.23) ಬೆಳಗಾವಿಯಲ್ಲಿ ನಿಜವಾಗಿದೆ.

ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕ ಮಾಜಿ ಮೇಯರ್ ವಿಜಯ್ ಮೋರೆ ಅವರು ತಮ್ಮ ಆಶ್ರಮದ 37 ಜನ ವೃದ್ದರನ್ನು ಮುಂಬೈ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ.

ಇನ್ನು ಆಶ್ರಮದ ಯಾರು ಒಬ್ಬರೂ ಕೂಡ ವಿಮಾನ ಏರುವುದು ಬಿಡಿ, ಸಮೀಪದಿಂದ ವಿಮಾನವನ್ನೇ ನೋಡಿಲ್ಲ. ಈ ನಡುವೆಯೇ ವಿಮಾನವೇರಿ ಮುಂಬೈಗೆ ತೆರಳಿದ್ದು ವೃದ್ಧರಲ್ಲಿ ಸಂತಸ ಮೂಡಿಸಿದೆ.

ಇನ್ನು ಪ್ರವಾಸಕ್ಕೆ ಹೊರಟ್ಟಿದ್ದ ಹಿರಿಯರಿಗೆ ಬೆಳಗಾವಿ ವಿಮಾನ ನಿಲ್ದಾಣದ ಸಿಬ್ಬಂದಿ ಹೂ ನೀಡಿ ಬೀಳ್ಕೊಟ್ಟರು. ಇನ್ನು ಮುಂಬೈನಲ್ಲಿ ಹೋಟೆಲ್ ಸಿಬ್ಬಂದಿ ಹೂ ನೀಡಿ ಸ್ವಾಗತಿಸಿಕೊಂಡರು.

ಹಿರಿಯ ಜೀವಿಗಳು ಈಗಾಗಲೆ ಮುಂಬೈ ತಲುಪಿದ್ದು, ತಾಜ್ ಹೋಟೆಲ್ನಲ್ಲಿ ಎಲ್ಲರೂ ಉಪಹಾರ ಸೇವಿಸಿ ವಾಸ್ತವ್ಯ ಹೂಡಿದ್ದಾರೆ.

ಹಿರಿಯ ಜೀವಿಗಳು ಮುಂಬೈನಲ್ಲಿ ಗೇಟ್ ವೇ ಆಫ್ ಇಂಡಿಯಾ, ಸಿದ್ದಿ ವಿನಾಯಕ ಟೆಂಪಲ್, ಸಮುದ್ರ ಸಫಾರಿ ಸೀ ಲಿಂಕ್ ಬ್ರೀಡ್ಜ್, ಮಹಾರಾಷ್ಟ್ರ ವಿಧಾನಸೌಧ, ನಿಯರಮನ್ ಪಾಯಿಂಟ್ ಮತ್ತು ಬೃಹತ್ ಮಾಲ್‌ನಲ್ಲಿ ಶಾಪಿಂಗ್ ಮಾಡಿದ್ದಾರೆ.

ಶಾಂತಾಯಿ ವೃದ್ಧಾಶ್ರಮದ ಹಿರಿಯ ಜೀವಿಗಳು ನಾಲ್ಕು ದಿನಗಳ ಕಾಲ ಮುಂಬೈ ಪ್ರವಾಸ ಕೈಗೊಂಡು ವಾಪಸ್ ಬೆಳಗಾವಿಗೆ ಬರಲಿದ್ದಾರೆ.



















