- Kannada News Photo gallery Cricket photos Akash Deep Mother Emotional When he take Test cap from Rahul Dravid
Akash Deep: ಟೆಸ್ಟ್ ಕ್ಯಾಪ್ ಸಿಗುತ್ತಿದ್ದಂತೆ ತಾಯಿಯ ಬಳಿ ಓಡಿ ಹೋದ ಆಕಾಶ್ ದೀಪ್: ಫೋಟೋ ನೋಡಿ
Akash Deep Mother: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂಲಕ ಆಕಾಶ್ ದೀಪ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಆಕಾಶ್ ಅವರಿಗೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ಯಾಪ್ ನೀಡುತ್ತಿದ್ದಂತೆ ಅವರು ಭಾವುಕರಾದರು.
Updated on: Feb 23, 2024 | 12:53 PM

ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದ ಮೂಲಕ ಭಾರತದ ಆಕಾಶ್ ದೀಪ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಟಾಸ್ ಪ್ರಕ್ರಿಯೆಗು ಮುನ್ನ ಆಕಾಶ್ ಅವರಿಗೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ಯಾಪ್ ಅನ್ನು ವಿತರಿಸಿದರು.

ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಸ್ಥಾನಕ್ಕೆ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಲಾಯಿತು. ಬುಮ್ರಾ ಈ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಆಕಾಶ್ ದೀಪ್ ಭಾರತದ 313ನೇ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ನಾಲ್ಕನೇ ಆಟಗಾರನಾಗಿದ್ದಾರೆ.

ತನಗೆ ಟೆಸ್ಟ್ ಕ್ಯಾಪ್ ಸಿಗುತ್ತಿದ್ದಂತೆ ಆಕಾಶ್ ದೀಪ್ ತನ್ನ ತಾಯಿಯ ಬಳಿ ಓಡಿ ಆಶೀರ್ವಾದವನ್ನು ಪಡೆದುಕೊಂಡರು. ಆಕಾಶ್ ತನ್ನ ತಾಯಿಯ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸರಣಿಯಲ್ಲಿ ರಜತ್ ಪಾಟಿದಾರ್, ಸರ್ಫರಾಜ್ ಖಾನ್ ಮತ್ತು ಧುವ್ ಜುರೆಲ್ ಬಳಿಕ ಟೆಸ್ಟ್ ಕ್ಯಾಪ್ ಪಡೆದ ನಾಲ್ಕನೇ ಭಾರತೀಯ ಕ್ರಿಕೆಟಿಗ ಆಕಾಶ್ ಆಗಿದ್ದಾರೆ.

ರಾಹುಲ್ ದ್ರಾವಿಡ್ ಅವರಿಂದ ಕ್ಯಾಪ್ ಪಡೆದ ನಂತರ, ಆಕಾಶ್ ದೀಪ್ ನಾಯಕ ರೋಹಿತ್ ಶರ್ಮಾ ಬಳಿಗೆ ಹೋದರು. ನಂತರ ಇತರ ಭಾರತೀಯ ಕ್ರಿಕೆಟಿಗರು ಅಭಿನಂದಿಸಿದರು. ಬಳಿಕ ಆಕಾಶ್ ದೀಪ್ ಕ್ಯಾಪ್ ತೆಗೆದುಕೊಂಡು ನೇರವಾಗಿ ತಮ್ಮ ಕುಟುಂಬದ ಬಳಿ ತೆರಳಿದ್ದಾರೆ. ಈ ವೇಳೆ ಅವರ ತಾಯಿ ಭಾವುಕರಾದರು.

ಸದ್ಯ ಆಕಾಶ್ ದೀಪ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆಂಗ್ಲ ಬ್ಯಾಟರ್ಗಳ ಹುಟ್ಟಡಗಿಸಿ 3 ವಿಕೆಟ್ ಕಿತ್ತಿದ್ದಾರೆ. ಆರಂಭಿಕ ಆಟಗಾರ ಬೆನ್ ಡಕೆಟ್, ಒಲಿ ಪೋಪ್ ರಂತಹ ಸ್ಟಾರ್ ಅನುಭವಿ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿದ್ದಾರೆ.



















