Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ನರೇಗಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಒಂದು ಪೈಸೆ ಕೂಲಿಯನ್ನೂ ನೀಡಿಲ್ಲ! 6.51 ಕೋಟಿ ಬಾಕಿ ಉಳಿಸಿಕೊಂಡಿದೆ!

ಕೇಂದ್ರ ಸರಕಾರ ರಾಜ್ಯಕ್ಕೆ ನರೇಗಾ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಈ ಸಮಸ್ಯೆ ಆಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಅಂಥದ್ಯಾವುದೂ ನಡೆದಿಲ್ಲ ಅನ್ನೋದು ಕೇಂದ್ರದ ವಾದ. ಇನ್ನು ಈ ಬಗ್ಗೆ ಧಾರವಾಡ ಜಿ.ಪಂ. ಸಿಇಒ ಸ್ವರೂಪ ಟಿ.ಕೆ. ಅವರನ್ನು ಕೇಳಿದರೆ, ಈಗಾಗಲೇ ಅನುದಾನ ಬಿಡುಗಡೆಯಾಗಿದೆ ಅನ್ನೋ ಮಾಹಿತಿ ಇದೆ. ಅದು ಬರುತ್ತಲೇ ಎಲ್ಲರಿಗೂ ಕೂಲಿ ನೀಡಲಾಗುವುದು ಅನ್ನುತ್ತಾರೆ.

ಧಾರವಾಡದಲ್ಲಿ ನರೇಗಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಒಂದು ಪೈಸೆ ಕೂಲಿಯನ್ನೂ ನೀಡಿಲ್ಲ! 6.51 ಕೋಟಿ ಬಾಕಿ ಉಳಿಸಿಕೊಂಡಿದೆ!
ಧಾರವಾಡದಲ್ಲಿ ನರೇಗಾ ಕಾರ್ಮಿಕರಿಗೆ ರಾಜ್ಯ ಸರ್ಕಾರ 1 ಪೈಸೆ ಕೂಲಿ ನೀಡಿಲ್ಲ!
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on: Feb 23, 2024 | 10:14 AM

ರಾಜ್ಯದಲ್ಲಿ ಈ ಬಾರಿ ಭಾರೀ ಬರ ಬಂದಿದೆ. ಈ ಬರ ಇದೀಗ ಬಡವರ ಜೀವ ಹಿಂಡುತ್ತಿದೆ. ತುತ್ತು ಕೂಳಿಗೂ ಬಡ ಜನರು ಪರದಾಡುತ್ತಿದ್ದಾರೆ. ಬರದಿಂದಾಗಿ ಕೃಷಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಇನ್ನೊಂದು ಕಡೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಿಗಬೇಕಾಗಿರೋ ಕೂಲಿಯೇ ಸಿಗುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ (Dharwad) ಕಳೆದ ಎರಡು ತಿಂಗಳಿಂದ ಈ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿಯೇ ಪಾವತಿಯಾಗಿಲ್ಲ (single penny).

ನರೇಗಾ ಅಡಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದ ನಿರ್ಲಕ್ಷ್ಯದ ಪರಮಾವಧಿ ಧಾರವಾಡದಲ್ಲಿ ಕಂಡು ಬಂದಿದೆ. ಜಿಲ್ಲೆಯ ಎಲ್ಲ ಎಂಟು ತಾಲೂಕುಗಳನ್ನು ಸರಕಾರ ಬರಪೀಡಿತ ಅಂತಾ ಘೋಷಿಸಿದೆ. ಇಂಥ ಸಂದರ್ಭದಲ್ಲಿ ತಮಗೆ ಕೆಲಸ ಸಿಕ್ಕಿತಲ್ಲ ಎಂದು ಹುಮ್ಮಸ್ಸಿನಿಂದ ನರೇಗಾದಡಿ (Mahatma Gandhi National Rural Employment Guarantee Scheme MGNREGA Yojana) ಸಾವಿರಾರು ಕಾರ್ಮಿಕರು ಕೆಲಸ ಮಾಡಿದ್ದಾರೆ. ಆದರೆ ಈ ಯೋಜನೆಯಡಿ ದುಡಿದ ಕಾರ್ಮಿಕರಿಗೆ ಸರಕಾರ 2023 ರ ಡಿ. 6 ರಿಂದ ಇಲ್ಲಿಯವರೆಗೆ ಒಂದು ಪೈಸೆಯ ಕೂಲಿಯನ್ನೇ ನೀಡಿಲ್ಲ. ಇದರಿಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ 6.51 ಕೋಟಿ ರೂಪಾಯಿ ಕೂಲಿ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಕುಟುಂಬ ನಿರ್ವಹಣೆಗೆ ಕೂಲಿ ಮಾಡಿದರೂ ಕಾರ್ಮಿಕ ವರ್ಗ ಸಾಲದ ಸುಳಿಗೆ ಸಿಲುಕುವಂತಾಗಿದೆ. ಇನ್ನು 122 ವರ್ಷಗಳಲ್ಲಿ ಮೂರು ಭೀಕರ ಬರಗಳ ಪೈಕಿ ಈ ವರ್ಷದ್ದೂ ಒಂದಾಗಿದೆ. ಇಂಥ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರ ಸಹಾಯಕ್ಕೆ ಸರಕಾರಗಳು ಮುಂದೆ ಬರದಿದ್ದರೆ ಅವರ ಬದುಕಿನ ಕಥೆ ಏನು ಅನ್ನೋದು ಕಾರ್ಮಿಕ ಮುಖಂಡರ ಪ್ರಶ್ನೆ.

ಬರಗಾಲದಲ್ಲಿ ದುಡಿಯುವ ವರ್ಗಕ್ಕೆ ಕನಿಷ್ಠ 150 ದಿನ ಕೆಲಸ ನೀಡಬೇಕೆಂದು ಘೋಷಿಸಿರೋ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನರೇಗಾ ಕೆಲಸಕ್ಕೆ ದಿನಕ್ಕೆ ಒಬ್ಬರಿಗೆ 316 ರೂಪಾಯಿ ಕೂಲಿ ನಿಗದಿಪಡಿಸಿವೆ. ಇದಕ್ಕೆ ಪೂರಕವಾಗಿ ಬದು, ಶೆಡ್ ನಿರ್ಮಾಣ, ನಾಲೆ, ಕೆರೆ ಹೂಳೆತ್ತುವುದು ಸೇರಿದಂತೆ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿವೆ. ಆರಂಭದಲ್ಲಿ ಜನ ಉತ್ಸಾ ಹದ ಜತೆಗೆ ಅನಿವಾರ್ಯವಾಗಿ ಕೆಲಸ ಮಾಡಿ ದ್ದಾರೆ. ಆದರೆ 2 ತಿಂಗಳಿಂದ ಕೂಲಿ ಸಿಗದೇ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಕೇಂದ್ರ ಸರಕಾರ ನಾವು ರಾಜ್ಯಕ್ಕೆ ಅನುದಾನ ಕೊಟ್ಟಿದ್ದೇವೆ ಎಂದು ಪ್ರತಿಪಾದಿಸುತ್ತಿದ್ದರೆ, ರಾಜ್ಯ ಸರಕಾರ ತಮಗೆ ಹಣ ನೀಡದ ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ವಾದಿಸುತ್ತಿದೆ. ಆದರೆ ಇಲ್ಲಿ ನರೇಗಾದಲ್ಲಿ ದುಡಿದ ಕಾರ್ಮಿಕರಿಗೆ ಗರಿಷ್ಠ 15 ದಿನದೊಳಗೆ ಕೂಲಿ ಪಾವತಿಸಬೇಕೆಂಬ ನಿಯಮ ಇದ್ದರೂ ಪಾಲನೆ ಆಗುತ್ತಿಲ್ಲ. ಇಲ್ಲಿ ನಿಜವಾಗಿ ಅನ್ಯಾಯ ಆಗುತ್ತಿರುವುದು ನಮಗೆ ಅನ್ನೋದು ಕಾರ್ಮಿಕರ ನೋವಿನ ಮಾತು.

Also Read: ಸರ್ಕಾರಿ ಶಾಲೆಯಿಂದ ಮುಖ್ಯಮಂತ್ರಿ ಕಚೇರಿವರೆಗಿನ ಜರ್ನಿಯ ಮೆಲುಕು ಹಾಕಿದ ಕೆವಿ ಪ್ರಭಾಕರ್

ಇನ್ನು ಈ ಬಗ್ಗೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಸ್ವರೂಪ ಟಿ.ಕೆ. ಅವರನ್ನು ಕೇಳಿದರೆ, ಈಗಾಗಲೇ ಅನುದಾನ ಬಿಡುಗಡೆಯಾಗಿದೆ ಅನ್ನೋ ಮಾಹಿತಿ ಇದೆ. ಅದು ಬರುತ್ತಲೇ ಎಲ್ಲರಿಗೂ ಕೂಲಿ ನೀಡಲಾಗುವುದು ಅನ್ನುತ್ತಾರೆ.

ಕೇಂದ್ರ ಸರಕಾರ ರಾಜ್ಯಕ್ಕೆ ನರೇಗಾ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಈ ಸಮಸ್ಯೆ ಆಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಅಂಥದ್ಯಾವುದೂ ನಡೆದಿಲ್ಲ, ಎಲ್ಲ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಅನ್ನೋದು ಕೇಂದ್ರದ ವಾದ. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಕೇಂದ್ರ-ರಾಜ್ಯ ಸರಕಾರಗಳ ನಡುವೆ ಈ ಕೂಲಿ ಕಾರ್ಮಿಕರು ಅನಾಥರಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ