ಸಿರಿ ನಾಡಿಗೆ ಬಂಗಾರದ ಗಿಳಿ ಬಂದು ಕುಂತಿತಲೇ ಪರಾಕ್ – ಮೈಲಾರದ ಕಾರ್ಣಿಕ ನುಡಿದ ತಾಜಾ ಭವಿಷ್ಯ ಏನು ಹೇಳುತ್ತೆ?

ಇದೀಗ ರೈತಾಪಿ ಜನಕ್ಕೆ ಒಳ್ಳೆಯ ದಿನ ಬಂದು ಉತ್ತಮ ಮಳೆ ಬೆಳೆ ಜೊತೆಗೆ ಬೆಲೆ ಸಿಗಲಿದೆ, ಜನರ ಕಷ್ಟ ಪರಿಹಾರವಾಗಲಿದೆ ಎಂದು ಹಿರಿಯರು ಕಾರ್ಣಿಕ ವ್ಯಾಖ್ಯಾನ ಮಾಡುತ್ತಿದ್ದಾರೆ. ಒಟ್ಟಾರೆ ಮೈಲಾರಲಿಂಗೇಶ್ವರ ಜಾತ್ರೆ ಸರಪಳಿ ಪವಾಡ ಅತಿ ಸಂಭ್ರಮ ಸಡಗರದಿಂದ ನಡೆದಿವೆ.

Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಸಾಧು ಶ್ರೀನಾಥ್​

Updated on:Feb 22, 2024 | 11:58 AM

ಕುಂದಗೋಳ (ಹುಬ್ಬಳ್ಳಿ), ಫೆಬ್ರವರಿ 22: ಐತಿಹಾಸಿಕ ದೊಡ್ಡ ಮೈಲಾರಲಿಂಗೇಶ್ವರ ಜಾತ್ರೆಯಷ್ಟೇ ಐತಿಹ್ಯ ಪಡೆದ ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಅದ್ದೂರಿಯಾಗಿ ನೆರವೇರಿದ್ದು, ಇದೀಗ ಗೊರವಯ್ಯ ನುಡಿದ ಕಾರ್ಣಿಕ ಜನರಲ್ಲಿ ಖುಷಿ ತಂದಿದೆ.

ಹೌದು ! ತನ್ನ ಪವಾಡದಿಂದಲೇ ಹೆಸರಾದ ಬು.ಕೊಪ್ಪ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ದಿನ ಗೊರವಯ್ಯ ಬಿಲ್ಲನ್ನೇರಿ ನುಡಿಯುವ ಕಾರ್ಣಿಕ ಜಗತ್ತಿನ ಏಳು ಬೀಳು, ರೈತರ ಕಷ್ಟ ಕಾರ್ಪಣ್ಯಗಳನ್ನು ತಿಳಿಸುತ್ತದೆ.

ಅದರಂತೆ ಈ ವರ್ಷ ಗೊರವಯ್ಯ “ಸಿರಿ ನಾಡಿಗೆ ಬಂಗಾರದ ಗಿಳಿ ಮತ್ತೆ ಬಂದು ಕುಂತಿತಲೇ ಪರಾಕ್” “ಮುತ್ತಿನ ಮುರೆ ಮುಟ್ಟಿತು ದೈವಿ ತೊಟ್ಟಿಲು ಮತ್ತೆ ಕಟ್ಟಿತಲೇ ಪರಾಕ್’ ‘ಕಷ್ಟ ಪಟ್ಟ ಮನುಜನಿಗೆ ಮುತ್ತಿನ ದಾರಿ ಸಿಕ್ಕಿತಲೇ ಪರಾಕ್’ ಎಂದು ಭವಿಷ್ಯ ನುಡಿದಿದ್ದಾನೆ.

ಇದನ್ನೂ ಓದಿ; Kodi Mutt Swamiji: ಕರ್ನಾಟಕದಲ್ಲಿ ಜಲಪ್ರಳಯ, ಜಾಗತಿಕ ಮಟ್ಟದಲ್ಲಿ ದೊಡ್ಡ ದುರಂತ; ಕೋಡಿಮಠ ಶ್ರೀ ಭವಿಷ್ಯ

ಇದೀಗ ರೈತಾಪಿ ಜನಕ್ಕೆ ಒಳ್ಳೆಯ ದಿನ ಬಂದು ಉತ್ತಮ ಮಳೆ ಬೆಳೆ ಜೊತೆಗೆ ಬೆಲೆ ಸಿಗಲಿದೆ, ಜನರ ಕಷ್ಟ ಪರಿಹಾರವಾಗಲಿದೆ ಎಂದು ಹಿರಿಯರು ಕಾರ್ಣಿಕ ವ್ಯಾಖ್ಯಾನ ಮಾಡುತ್ತಿದ್ದಾರೆ. ಒಟ್ಟಾರೆ ಮೈಲಾರಲಿಂಗೇಶ್ವರ ಜಾತ್ರೆ ಸರಪಳಿ ಪವಾಡ ಅತಿ ಸಂಭ್ರಮ ಸಡಗರದಿಂದ ನಡೆದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:44 am, Thu, 22 February 24