ಈ ಮಾರ್ಗದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗಳ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ನೈಋತ್ಯ ರೈಲ್ವೆ ಪ್ರಯಾಣಿಕರ ಹೆಚ್ಚಳವನ್ನು ಪರಿಗಣಿಸಿ, ಬೆಂಗಳೂರಿನ ಎಸ್‌ಎಂವಿಟಿ ಟರ್ಮಿನಲ್‌ನಿಂದ ಬೀದರ್, ನಾರಂಗಿ ಮತ್ತು ಮಾಲ್ಡಾ ಟೌನ್‌ಗೆ ವಿಶೇಷ ರೈಲು ಸೇವೆಗಳನ್ನು ವಿಸ್ತರಿಸಿದೆ. ಬೀದರ್ ರೈಲು ಸೇವೆಯನ್ನು ಆಗಸ್ಟ್ 31 ರವರೆಗೆ, ನಾರಂಗಿ ರೈಲು ಜುಲೈ 19 ರವರೆಗೆ ಮತ್ತು ಮಾಲ್ಡಾ ರೈಲು ಜುಲೈ 16 ರವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರು, ಜುಲೈ 04: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆ (South Western Railway) ಕೆಲ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್, ನಾರಂಗಿ ಹಾಗೂ ಮಾಲ್ಡಾ ಟೌನ್ ನಡುವೆ ಈ ಹಿಂದೆ ಚಲಿಸುತ್ತಿದ್ದ ವಿಶೇಷ ರೈಲು ಸೇವೆಗಳನ್ನು (special train services) ಈಗಿರುವ ಸಮಯ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಸಲು ನಿರ್ಧರಿಸಿದೆ.
ಎಸ್‌ಎಂವಿಟಿ ಬೆಂಗಳೂರು ಟು ಬೀದರ್ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ
- ರೈಲು ಸಂಖ್ಯೆ 06539 ಎಸ್‌ಎಂವಿಟಿ ಬೆಂಗಳೂರು ಟು ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಶುಕ್ರವಾರ ಮತ್ತು ಭಾನುವಾರಗಳಂದು ಮುಂದುವರಿಯಲಿದೆ. ಈ ಹಿಂದೆ ಜೂನ್ 29 ರವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು. ಈಗ ಈ ಸೇವೆಯನ್ನು ಜುಲೈ 04 ರಿಂದ ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ.
ನೈಋತ್ಯ ರೈಲ್ವೆ ಟ್ವೀಟ್
Kindly note: To cater to the extra rush of passengers, South Western Railway has decided to continue the operation of the following special train services between Sir M. Visvesvaraya Terminal Bengaluru and Bidar, Narangi, and Malda Town, with existing timings, stoppages and coach… pic.twitter.com/aecGfnnVHD
ಇದನ್ನೂ ಓದಿ— South Western Railway (@SWRRLY) July 3, 2025
- ರೈಲು ಸಂಖ್ಯೆ 06540 ಬೀದರ್ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಶನಿವಾರ ಮತ್ತು ಸೋಮವಾರಗಳಂದು ಮುಂದುವರಿಯಲಿದೆ. ಈ ಹಿಂದೆ ಜೂನ್ 30 ರವರೆಗೆ ಕಾರ್ಯನಿರ್ವಹಿಸಲು ತಿಳಿಸಲಾಗಿತ್ತು. ಇದೀಗ ಈ ಸೇವೆಯನ್ನು ಜುಲೈ 05ರಿಂದ ಸೆಪ್ಟೆಂಬರ್ 01 ರವರೆಗೆ ವಿಸ್ತರಿಸಲಾಗಿದೆ.
- ವಿಸ್ತರಿಸಿದ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ 18 ಟ್ರಿಪ್ ಸಂಚರಿಸಲಿವೆ.
ಎಸ್‌ಎಂವಿಟಿ ಬೆಂಗಳೂರು ಟು ನಾರಂಗಿ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ
- ರೈಲು ಸಂಖ್ಯೆ 06559 ಎಸ್‌ಎಂವಿಟಿ ಬೆಂಗಳೂರು ನಾರಂಗಿ ಎಕ್ಸ್‌ಪ್ರೆಸ್ ವಿಶೇಷ ರೈಲು ಮಂಗಳವಾರಗಳಂದು ಸಂಚಾರ ಮುಂದುವರಿಯಲಿದೆ. ಈ ಹಿಂದೆ ಜೂನ್ 10 ರವರೆಗೆ ಸಂಚಾರ ನಡೆಸುವುದಾಗಿ ತಿಳಿಸಲಾಗಿತ್ತು, ಆದರೆ ಇದೀಗ ಜುಲೈ 08 ಮತ್ತು 15 ರಂದು ಸಂಚರಿಸಲಿದೆ.
- ರೈಲು ಸಂಖ್ಯೆ 06560 ನಾರಂಗಿ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಶನಿವಾರದಂದು ಸಂಚಾರ ಮುಂದುವರಿಸಲಿದೆ. ಈ ಹಿಂದೆ ಜೂನ್ 14 ರವರೆಗೆ ತಿಳಿಸಲಾಗಿತ್ತು. ಆದರೆ ಈಗ ಜುಲೈ 12 ಮತ್ತು 19 ರಂದು ಸಂಚಾರ ಮುಂದುವರಿಸಲಿದೆ.
- ರೈಲು ಸಂಖ್ಯೆ 06559/06560 ವಿಸ್ತರಿಸಿದ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ 2 ಟ್ರಿಪ್ ಸಂಚರಿಸಲಿದೆ.
ಎಸ್‌ಎಂವಿಟಿ ಬೆಂಗಳೂರು ಟು ಮಾಲ್ಡಾ ಟೌನ್ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ
- ರೈಲು ಸಂಖ್ಯೆ 06565 ಎಸ್‌ಎಂವಿಟಿ ಬೆಂಗಳೂರು ಟು ಮಾಲ್ಯಾ ಟೌನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಈ ಹಿಂದೆ ಜೂನ್ 15 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು. ಇದೀಗ ಭಾನುವಾರ (13.07.2025) ರಂದು ಸಂಚರಿಸಲಿದೆ.
- ರೈಲು ಸಂಖ್ಯೆ 06566 ಮಾಲ್ಡಾ ಟೌನ್ ಟು ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಈ ಹಿಂದೆ ಜೂನ್ 18 ರವರೆಗೆ ತಿಳಿಸಲಾಗಿತ್ತು. ಈಗ ಬುಧವಾರ (16.07.2025) ರಂದು ಸಂಚರಿಸಲಿದೆ.
- ರೈಲು ಸಂಖ್ಯೆ 06565/06566 ವಿಸ್ತರಿಸಿದ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ 1 ಟ್ರಿಪ್ ಸಂಚರಿಸಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








