
ದೇಶದ ಹಲವು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ನಿರಂತರ ಬದಲಾವಣೆ ಕಂಡುಬರುತ್ತಿದೆ. ಕೆಲವೊಮ್ಮೆ ತೀವ್ರ ಬಿಸಿಲು, ಮತ್ತೊಮ್ಮೆ ಮಳೆ ಮತ್ತು ತಣ್ಣನೆಯ ಗಾಳಿ ದೇಹದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಇಂತಹ ಹವಾಮಾನ ಬದಲಾವಣೆಗಳಿಂದ ದೇಹದ ರೋಗನಿರೋಧಕ ಶಕ್ತಿ (Immunity) ಕುಂದುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಶೀತ, ಕೆಮ್ಮು, ಜ್ವರ ಮತ್ತು ವಿವಿಧ ಸೋಂಕುಗಳ ಅಪಾಯ ಹೆಚ್ಚಾಗಬಹುದು. ವೈದ್ಯರ ಪ್ರಕಾರ, ಹವಾಮಾನ ಪದೇಪದೇ ಬದಲಾಗುವಾಗ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರಿಂದ ಇಮ್ಯುನಿಟಿ ಶಕ್ತಿ ಮೇಲೆ ಒತ್ತಡ ಉಂಟಾಗಿ ದೇಹ ಬೇಗ ದುರ್ಬಲಗೊಳ್ಳಬಹುದು. ಸಾಕಷ್ಟು ನಿದ್ರೆ ಮಾಡದೇ ಇರುವುದು, ಕಡಿಮೆ ನೀರು ಕುಡಿಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸದೇ ಇರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಹಾಗಾದರೆ ಇಮ್ಯುನಿಟಿ ಕಡಿಮೆಯಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಈ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಜ್ಞರ ಪ್ರಕಾರ, ಪದೇಪದೇ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುವುದು, ಬೇಗ ದಣಿವಾಗುವುದು, ಗಂಟಲು ನೋವು ಹಾಗೂ ದೇಹದಲ್ಲಿ ನೋವು ಕಾಣಿಸುವುದು ದುರ್ಬಲ ರೋಗನಿರೋಧಕ ಶಕ್ತಿಯ ಲಕ್ಷಣಗಳಾಗಿರಬಹುದು. ಗಾಯ ನಿಧಾನವಾಗಿ ಗುಣಮುಖವಾಗುವುದು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದು ಮತ್ತು ದಿನಪೂರ್ತಿ ಸುಸ್ತಾಗಿರುವುದು ಕೂಡ ಗಮನಿಸಬೇಕಾದ ಸೂಚನೆಗಳಾಗಿವೆ.
ಇದನ್ನೂ ಓದಿ: ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ