AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!

ಆರೋಗ್ಯವಾಗಿರಲು ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ಸರಿಯಾಗಿರುವುದು ಬಹಳ ಮುಖ್ಯ. ನಿಮ್ಮ ರೋಗನಿರೋಧಕ ಶಕ್ತಿ ಬಲವಾಗಿದ್ದಷ್ಟೂ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ರೋಗನಿರೋಧಕ ಶಕ್ತಿ ದುರ್ಬಲಗೊಂಡರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ಸೇವಿಸುವ ಆಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ರೋಗನಿರೋಧಕ ಶಕ್ತಿ ಬಲವಾಗಿದ್ದಷ್ಟೂ ಆರೋಗ್ಯ ಸಮಸ್ಯೆಗಳು ದೂರ ಉಳಿಯುತ್ತವೆ. ಹಾಗಾದರೆ ಇದನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!
Boost Immunity With These SuperfoodsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jan 13, 2026 | 8:01 PM

Share

ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರುವುದೇ ಒಂದು ದೊಡ್ಡ ಸವಾಲಾಗಿದೆ. ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆ, ಕೆಲಸದ ಒತ್ತಡ, ಸರಿಯಾಗಿ ಆಹಾರ ಸೇವನೆ ಮಾಡದಿರುವುದು ಸೇರಿದಂತೆ ನಾನಾ ಕಾರಣಗಳು ಇದಕ್ಕೆ ಕಾರಣವಾಗಿರಬಹುದು. ಏನೇ ಆಗಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ದೊಡ್ಡ ದೊಡ್ಡ ಕಾಯಿಲೆಗಳಿಂದ ದೂರವಿರಬೇಕಾಗುತ್ತದೆ. ಆದರೆ ಇದಕ್ಕೆ ನಾನಾ ರೀತಿಯ ಔಷಧಿ, ಮಾತ್ರೆಗಳನ್ನು ಸೇವನೆ ಮಾಡುವ ಮೊದಲು ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು (Immune System) ಬಲಪಡಿಸಿಕೊಳ್ಳಬೇಕು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಾಗಿರಲು ಇದು ಪ್ರಮುಖ ಅಡಿಪಾಯವಾಗಿರುತ್ತದೆ. ಈ ರೋಗನಿರೋಧಕ ಶಕ್ತಿ ಬಲವಾಗಿದ್ದಷ್ಟೂ ಆರೋಗ್ಯ ಸಮಸ್ಯೆಗಳು ದೂರ ಉಳಿಯುತ್ತವೆ. ಹಾಗಾದರೆ ಇದನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ಬೆಟರ್ ಹೆಲ್ತ್ ಪ್ರಕಾರ, ರೋಗನಿರೋಧಕ ಶಕ್ತಿ ಬಿಳಿ ರಕ್ತ ಕಣಗಳು, ಪ್ರತಿಕಾಯಗಳು, ದುಗ್ಧರಸ ವ್ಯವಸ್ಥೆ, ಗುಲ್ಮ, ಮೂಳೆ ಮಜ್ಜೆ ಮತ್ತು ಥೈಮಸ್ ಗ್ರಂಥಿಯಂತಹ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ನಿಮ್ಮ ರೋಗನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
  • ರೋಗನಿರೋಧಕ ಶಕ್ತಿ ದುರ್ಬಲಗೊಂಡರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ಸೇವಿಸುವ ಆಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
  • ಅದಕ್ಕಾಗಿಯೇ ಆಹಾರದಲ್ಲಿ ಸಾಧ್ಯವಾದಷ್ಟು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಹಣ್ಣುಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುವ ಏಕೈಕ ಆಹಾರಗಳಾಗಿವೆ. ಆದ್ದರಿಂದ, ಪೌಷ್ಟಿಕತಜ್ಞರು ವರ್ಷದ ಆಯಾ ಸಮಯಕ್ಕೆ ಅನುಗುಣವಾಗಿ ಎಲ್ಲಾ ಋತುಗಳಲ್ಲಿ ಲಭ್ಯವಿರುವ ಹಣ್ಣುಗಳನ್ನು ಸೇವಿಸಲು ಸಲಹೆ ನೀಡುತ್ತಾರೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕೇವಲ ಹಣ್ಣುಗಳಷ್ಟೇ ಅಲ್ಲ. ಗ್ರೀನ್ ಟೀ ಕೂಡ ಮುಖ್ಯ. ಟೀ ಅಥವಾ ಕಾಫಿ ಕುಡಿಯುವ ಬದಲು ಗ್ರೀನ್ ಟೀಯನ್ನು ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಸೇರಿಸಿಕೊಂಡರೆ, ರೋಗಗಳು ದೂರವಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ