ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಅನೇಕರಿಗೆ ಪದೇ ಪದೇ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಸಾಮಾನ್ಯವಾಗಿ ಈ ರೀತಿಯ ಅಭ್ಯಾಸಗಳ ಬಗ್ಗೆ ಯಾರೂ ಕೂಡ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಅದರ ಬದಲಾಗಿ ಕಡೆಗಣಿಸಲಾಗುತ್ತದೆ, ಆದರೆ ಕಾಲಾನಂತರದಲ್ಲಿ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಉಗುರು ಕಚ್ಚುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉಗುರು ಕಚ್ಚುವುದು (Biting Nails) ಸಾಮಾನ್ಯ. ಆದರೆ ಇದು ಆರೋಗ್ಯಕ್ಕೆ ಬಹಳ ಹಾನಿಕಾರಕ ಅಭ್ಯಾಸ ಎಂಬುದು ನಿಮಗೆ ತಿಳಿದಿದೆಯೇ, ಹೌದು, ಇದು ಒತ್ತಡ, ಆತಂಕ ಅಥವಾ ಬೇಸರದಿಂದ ಪ್ರಾರಂಭವಾಗುತ್ತದೆ. ಅನೇಕರು ಇದನ್ನು ಸಣ್ಣ ಅಭ್ಯಾಸವೆಂದು ನಿರ್ಲಕ್ಷಿಸುತ್ತಾರೆ, ಆದರೆ ಕಾಲಾನಂತರದಲ್ಲಿ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಉಗುರು ಕಚ್ಚುವುದರಿಂದ ಅದರಲ್ಲಿನ ಕೊಳಕು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ನೇರವಾಗಿ ದೇಹವನ್ನು ಪ್ರವೇಶಿಸುತ್ತದೆ. ಇದು ಬಾಯಿ, ಹೊಟ್ಟೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಈ ಅಭ್ಯಾಸ ಹಲ್ಲುಗಳ ರಚನೆ ಮತ್ತು ಒಸಡುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಉಗುರು ಕಚ್ಚುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಉಗುರು ಕಚ್ಚುವ ಅಭ್ಯಾಸದಿಂದ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತೆ?
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಉಗುರು ಕಚ್ಚುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಏಕೆಂದರೆ ಉಗುರುಗಳಲ್ಲಿನ ಕೊಳಕು ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುತ್ತವೆ. ಇದು ಅತಿಸಾರ, ಹೊಟ್ಟೆ ನೋವು ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟು ಮಾತ್ರವಲ್ಲ, ಒಸಡುಗಳ ಊತ, ರಕ್ತಸ್ರಾವ ಮತ್ತು ಹಲ್ಲಿನ ಸೋಂಕುಗಳು ಸಹ ಕಂಡುಬರಬಹುದು. ಜೊತೆಗೆ ನಿರಂತರವಾಗಿ ಉಗುರು ಕಚ್ಚುವುದರಿಂದ ಹಲ್ಲುಗಳಿಗೆ ಹಾನಿಯಾಗಬಹುದು, ಕ್ರಮೇಣ ಹಲ್ಲು ಸವೆಯಬಹುದು, ವಕ್ರ ಹಲ್ಲುಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ
ಉಗುರು ಕಚ್ಚುವ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಹೇಗೆ?
ಉಗುರು ಕಚ್ಚುವ ಅಭ್ಯಾಸವನ್ನು ತಡೆಯಲು ಮೊದಲು ಅದರ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ಯೋಗ, ಧ್ಯಾನ ಮತ್ತು ಆಳವಾದ ಉಸಿರಾಟ ಸೇರಿದಂತೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಜೊತೆಗೆ ಉಗುರು ಕಚ್ಚುವುದನ್ನು ತಡೆಯಲು ಅವುಗಳನ್ನು ಚಿಕ್ಕದಾಗಿ ಕತ್ತರಿಸುತ್ತೀರಿ. ಅಗತ್ಯವಿದ್ದರೆ, ಸಲಹೆಗಾರರು ಅಥವಾ ವೈದ್ಯರಿಂದ ಸಹಾಯ ಪಡೆಯಿರಿ. ಯಾವಾಗಲೂ ಬಾಯಿ ಮತ್ತು ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಿ. ಒತ್ತಡ ಹೆಚ್ಚಾದಾಗ ವಿರಾಮ ತೆಗೆದುಕೊಳ್ಳಿ. ಮಕ್ಕಳಲ್ಲಿ ಈ ಅಭ್ಯಾಸ ಕಂಡುಬರುವ ಮೊದಲೇ ಈ ಬಗ್ಗೆ ಗಮನ ಕೊಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




