ಕ್ಯಾಸ್ಟರ್ ಆಯಿಲ್ ನಿಜವಾಗಿಯೂ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ
ಕ್ಯಾಸ್ಟರ್ ಆಯಿಲ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಅನೇಕರು ಇದನ್ನು ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಬಳಸುತ್ತಾರೆ. ಅದರಲ್ಲಿಯೂ ಕರುಳಿನ ಕಾರ್ಯ ಸರಿಯಾಗಿ ನಡೆಯದಿದ್ದಾಗ, ಮಲಬದ್ಧತೆ, ಅನಿಲ ಮತ್ತು ಹೊಟ್ಟೆ ಭಾರವಾದ ಸಮಸ್ಯೆಗಳು ಉದ್ಭವಿಸಬಹುದು. ಅಂತಹ ಸಂದರ್ಭಗಳಲ್ಲಿ, ಅನೇಕರು ಹರಳೆಣ್ಣೆ ಉಪಯೋಗ ಮಾಡುತ್ತಾರೆ. ಆದರೆ ಕ್ಯಾಸ್ಟರ್ ಆಯಿಲ್ ನಿಜವಾಗಿಯೂ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬ ಸಂಶಯ ಹಲವರನ್ನು ಕಾಡುತ್ತದೆ. ಈ ಗೊಂದಲಕ್ಕೆ ಉತ್ತರ ಸ್ಟೋರಿಯಲ್ಲಿದೆ.

ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆಯನ್ನು (Castor Oil) ಮನೆಮದ್ದುಗಳಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದು ಚರ್ಮ, ಕೂದಲು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಕ್ಯಾಸ್ಟರ್ ಎಣ್ಣೆಯಲ್ಲಿರುವ ಪೋಷಕಾಂಶಗಳು ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತವೆ, ಅದಕ್ಕಾಗಿಯೇ ಅನೇಕರು ಇದನ್ನು ನಿಯಮಿತವಾಗಿ ಬಳಸುತ್ತಾರೆ. ವಿಶೇಷವಾಗಿ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಕಂಡುಕೊಳ್ಳಲು ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ನಿಮಗೆ ತಿಳಿದಿರಬಹುದು ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕುವಲ್ಲಿ ಕರುಳು ಪ್ರಮುಖ ಪಾತ್ರವಹಿಸುತ್ತವೆ. ಕರುಳಿನ ಕಾರ್ಯ ಸರಿಯಾಗಿ ನಡೆಯದಿದ್ದಾಗ, ಮಲಬದ್ಧತೆ, ಅನಿಲ ಮತ್ತು ಹೊಟ್ಟೆ ಭಾರವಾದ ಸಮಸ್ಯೆಗಳು ಉದ್ಭವಿಸಬಹುದು. ಅಂತಹ ಸಂದರ್ಭಗಳಲ್ಲಿ, ಅನೇಕರು ಹರಳೆಣ್ಣೆ ಉಪಯೋಗ ಮಾಡುತ್ತಾರೆ. ಆದರೆ ಈ ಎಣ್ಣೆಯ ಪರಿಣಾಮ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಎಣ್ಣೆಯ ಪ್ರಮಾಣದಲ್ಲಿ ಅಥವಾ ಸರಿಯಾದ ಮಾಹಿತಿ ಇಲ್ಲದೆ ಬಳಸುವುದರಿಂದ ಸಮಸ್ಯೆ ಕಡಿಮೆಯಾಗುವುದಿಲ್ಲ ಬದಲಾಗಿ ಹೆಚ್ಚಾಗುತ್ತದೆ. ಆದ್ದರಿಂದ, ಕ್ಯಾಸ್ಟರ್ ಆಯಿಲ್ ಮತ್ತು ಕರುಳಿನ ನಡುವಿನ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಕ್ಯಾಸ್ಟರ್ ಆಯಿಲ್ ನಿಜವಾಗಿಯೂ ಕರುಳನ್ನು ಸ್ವಚ್ಛಗೊಳಿಸುತ್ತದೆಯೇ, ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೆಕು ಎಂಬುದನ್ನು ತಿಳಿದುಕೊಳ್ಳಿ.
ಕ್ಯಾಸ್ಟರ್ ಆಯಿಲ್ ನಿಜವಾಗಿಯೂ ಕರುಳನ್ನು ಶುದ್ಧೀಕರಿಸುತ್ತದೆಯೇ?
ಕ್ಯಾಸ್ಟರ್ ಆಯಿಲ್ ಮುಖ್ಯವಾಗಿ ರಿಕಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಕರುಳಿನ ಸ್ನಾಯುಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ ತೆಗೆದುಕೊಂಡ ನಂತರ, ಕರುಳಿನಲ್ಲಿನ ಚಟುವಟಿಕೆ ಹೆಚ್ಚಾಗುತ್ತದೆ, ಇದು ಹೊಟ್ಟೆಯನ್ನು ಕ್ಲೀನ್ ಮಾಡಲು ಸುಲಭವಾಗುತ್ತದೆ. ಹೆಚ್ಚುವರಿಯಾಗಿ, ಇದರಲ್ಲಿರುವ ಕೊಬ್ಬಿನಾಮ್ಲಗಳು ಜೀರ್ಣಕಾರಿ ರಸವನ್ನು ಸಕ್ರಿಯಗೊಳಿಸಬಹುದು, ಅದಕ್ಕಾಗಿಯೇ ಕೆಲವರು ಇದನ್ನು ಮಲಬದ್ಧತೆ ಸಮಸ್ಯೆಗಳಿಗೆ ಬಳಸುತ್ತಾರೆ. ಆದರೆ ಡೋಸೇಜ್ ಮತ್ತು ಸರಿಯಾದ ವಿಧಾನಕ್ಕೆ ಗಮನ ಕೊಡುವುದು ಮುಖ್ಯ. ಸಲಹೆಯಿಲ್ಲದೆ ಇದನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಸೆಳೆತ ಅಥವಾ ದೌರ್ಬಲ್ಯವೂ ಉಂಟಾಗಬಹುದು.
ಇದನ್ನೂ ಓದಿ: ನಿರಂತರವಾಗಿ ಕಂಡುಬರುವ ಮಲಬದ್ಧತೆ ಸಮಸ್ಯೆ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದೇ?
ಕ್ಯಾಸ್ಟರ್ ಆಯಿಲ್ ಯಾವ ಸಮಸ್ಯೆಗಳಿಗೆ ಪ್ರಯೋಜನಕಾರಿ?
ಈ ಎಣ್ಣೆಯನ್ನು ಮಲಬದ್ಧತೆಗೆ ಬಳಸಲಾಗುತ್ತದೆ. ಇದರ ಜೊತೆಗೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆಯ ಭಾರವನ್ನು ನಿವಾರಿಸಲು ಇದು ಸಹಾಯಕವಾಗಿದೆ. ಕೆಲವರು ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಯಿಂದ ಪರಿಹಾರ ಕಂಡುಕೊಳ್ಳಲು ಇದನ್ನು ಉಪಯೋಗಿಸುತ್ತಾರೆ. ಬಾಹ್ಯವಾಗಿ, ಇದನ್ನು ಕೀಲು ನೋವು ಮತ್ತು ಒಣ ಚರ್ಮಕ್ಕೆ ಬಳಸಲಾಗುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ನೆತ್ತಿಯನ್ನು ಪೋಷಿಸಲು ಕ್ಯಾಸ್ಟರ್ ಆಯಿಲ್ ಉತ್ತಮ. ಆದರೆ ಇದರಿಂದ ಸಿಗುವ ಫಲಿತಾಂಶ ಪ್ರತಿಯೊಂದು ಸಮಸ್ಯೆಗೂ ಒಂದೇ ರೀತಿಯಾಗಿ ಇರುವುದಿಲ್ಲ. ಹಾಗಾಗಿ ಬಳಕೆ ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹಳ ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:37 pm, Wed, 14 January 26
