ಅಡುಗೆ ಮನೆಯಲ್ಲಿ ಲಭ್ಯವಿರುವ ಅರಶಿನವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ಇದೀಗಾಗಲೇ ತಿಳಿದಿರುವ ವಿಷಯ. ಈ ಕಾರಣದಿಂದಾಗಿ ಅನೇಕ ಜನರು ನೋವು ಮತ್ತು ಉರಿಯೂತವನ್ನು ಒಳಗೊಂಡಿರುವ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಅರಶಿನದ ಪುಡಿಯನ್ನು ಬಳಸುತ್ತಾರೆ. ಇದಲ್ಲದೆ ಜ್ವರ, ಖಿನ್ನತೆ, ಅಧಿಕ ಕೊಲೆಸ್ಟ್ರಾಲ್ ಹಾಗೂ ಯಕೃತ್ತಿನ ಕಾಯಿಲೆ ಮತ್ತು ತುರಿಕೆ ನಿವಾರಕವಾಗಿ ಅರಶಿನವನ್ನು ಔಷಧೀಯ ರೂಪವಾಗಿ ಬಳಸುವುದುಂಟು. ಆದರೆ ಅರಶಿನದ ಸೇವನೆ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಆರೋಗ್ಯ ತಜ್ಞರಾದ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ಫೈನಾನ್ಶಿಯಲ್ ಎಕ್ಸ್ಪ್ರೆಸ್ನ ಸಂದರ್ಶನವೊಂದರಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.
“ಅರಿಶಿನವು ಔಷಧವಲ್ಲ. ಇದು ಅಡುಗೆಯಲ್ಲಿ ಬಳಸುವ ಮಸಾಲೆಯಾಗಿದ್ದು ಅದು ಆಹಾರದ ರುಚಿ ಮತ್ತು ಬಣ್ಣ ನೀಡಲು ಸಹಾಯ ಮಾಡುತ್ತದೆ. ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇನ್ಫ್ಲಮೇಟರಿ,ಆಂಟಿ-ಕ್ಯಾನ್ಸರ್ ಮತ್ತು ಇತರ ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ ಎಂದು ಹೇಳಿದರೂ ಕೂಡ ಯಾವುದೇ ಪ್ರಯೋಗಾಲಯದ ಪ್ರಯೋಗಗಳಲ್ಲಿ ಮಾತ್ರ ಮಾನವರಲ್ಲಿ ನಿರ್ಣಾಯಕವಾಗಿ ಸಾಬೀತಾಗಿಲ್ಲ ಎಂದು ಡಾ. ಫಿಲಿಪ್ಸ್ ಹೇಳುತ್ತಾರೆ. ಇದಲ್ಲದೇ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿದರೂ ಯಾರಿಗೂ ಪ್ರಯೋಜನವಾಗುವುದಿಲ್ಲ. ಇದು ಕೇವಲ ಬಿಳಿ ಹಾಲು ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ಹಾಲಿನೊಂದಿಗೆ ಅರಿಶಿನವನ್ನು ನೇರವಾಗಿ ಸೇವಿಸಿದಾಗ, ಅದರಲ್ಲಿ ಶೇಕಡಾ 99 ರಷ್ಟು ಮಲದಲ್ಲಿ ಹೊರಹಾಕಲ್ಪಡುತ್ತದೆ. ಕೇವಲ ಶೇಕಡಾ 1ರಷ್ಟು ಮಾತ್ರ ದೇಹದಲ್ಲಿ ಹೀರಲ್ಪಡುತ್ತದೆ. ಇದರಿಂದ ದೇಹದೊಳಗೆ ಯಾವುದೇ ಪ್ರಯೋಜನ ಹೊಂದಲು ಸಾಧ್ಯವಿಲ್ಲ ಎಂದು ಅವರು ಸೇರಿಸುತ್ತಾರೆ.
ಇದನ್ನೂ ಓದಿ: ನೀವು ರಾತ್ರಿ ವೇಳೆ ಸಾಕ್ಸ್ ಧರಿಸಿ ಮಲಗುತ್ತೀರಾ? ಅಂದರೆ ನೀವು ಈ ಸಮಸ್ಯೆಗಳಿಗೆ ಹತ್ತಿರದಲ್ಲಿದ್ದೀರಿ!
ದಿನಕ್ಕೆ 500–2,000 ಮಿಲಿಗ್ರಾಂ ವರೆಗಿನ ಪ್ರಮಾಣದಲ್ಲಿ ಅರಿಶಿನವನ್ನು ಸೇವಿಸುವುದು ಉತ್ತಮ ಹಲವಾರು ಅಧ್ಯಯನಗಳು ಸೂಚಿಸುತ್ತವೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:53 am, Tue, 29 August 23