ಸಾಮಾನ್ಯವಾಗಿ, ಶಾಲೆ, ಕಾಲೇಜು, ಕಚೇರಿಗಳಿಗೆ ಅಥವಾ ಮನೆಯಿಂದ ಹೊರ ಹೋಗುವಾಗ ಸಾಮಾನ್ಯವಾಗಿ ಚಪ್ಪಲಿ ಅಥವಾ ಶೂ ಧರಿಸಿ ಹೋಗ್ತೀರಿ, ಕೆಲವರು ಮನೆಯಲ್ಲಿರುವಾಗಲೂ ಚಪ್ಪಲಿ ಧರಿಸುವ ಅಭ್ಯಾಸವಿರುತ್ತದೆ. ಹಾಗಾದರೆ ನೀವು ದಿನದಲ್ಲಿ ಎಷ್ಟು ಗಂಟೆ ಚಪ್ಪಲಿ ಅಥವಾ ಶೂ ಧರಿಸಿರುತ್ತೀರಾ ಅಷ್ಟು ಆರೋಗ್ಯ ಸಮಸ್ಯೆಗಳೂ ಕೂಡ ಹೆಚ್ಚಾಗುತ್ತವೆ. ನೀವು ಇಡೀ ದಿನ ಚಪ್ಪಲಿ ಧರಿಸುವುದನ್ನು ಕಡಿಮೆ ಮಾಡದಿದ್ದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು.
ಕೀಲು ನೋವು
ಸ್ಟೈಲಿಶ್ ಶೂ ಅಥವಾ ಚಪ್ಪಲಿ ಧರಿಸುವುದರಿಂದ ನೀವು ಚಿಕ್ಕ ವಯಸ್ಸಿನಲ್ಲೇ ಕೀಲು ನೋವಿನಿಂದ ಬಳಲಬಹುದು. ನಿಮ್ಮ ಬೂಟುಗಳು ಅಥವಾ ಚಪ್ಪಲಿಗಳು ಕಳಪೆ ಗುಣಮಟ್ಟದ್ದಾಗಿದ್ದರೆ, ನಿಮ್ಮ ಆರೋಗ್ಯವು ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ಹೀಲ್ಸ್ಗಳನ್ನು ಧರಿಸುವುದನ್ನು ಕಡಿಮೆ ಮಾಡಿ ಇದು ಹಿಮ್ಮಡಿ ನೋವಿಗೆ ಕಾರಣವಾಗುತ್ತದೆ.
ಮೂಳೆ ಸಮಸ್ಯೆ ಕಾಡಬಹುದು
ಬೂಟುಗಳನ್ನು ಧರಿಸುವುದರಿಂದ ಪಾದಗಳು ಶೂಗಳೊಳಗೆ ಬಿಗಿಯಾಗಿರುತ್ತದೆ. ಈ ಬಿಗಿತವು ನಿಮ್ಮ ಹೆಬ್ಬರಳಿನ ಪಕ್ಕದ ಬೆರಳಿಗೆ ಹಾನಿ ಮಾಡಿ ಮೂಳೆ ಮುರಿತದಂತಹ ಸಮಸ್ಯೆಯನ್ನೂ ತಂದೊಡ್ಡಬಹುದು. ನೀವು ನಿತ್ಯ ಶೂ ಧರಿಸಿದ್ದರೆ ಆ ಬೆರಳಿನ ಮೂಳೆಯು ವಕ್ರವಾಗಬಹುದು.ಆದ್ದರಿಂದ ಸಮಯಕ್ಕೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಸಂಧಿವಾತ
ಸಂಧಿವಾತದ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಬಯಸಿದರೆ, ಸದಾ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದನ್ನು ನಿಲ್ಲಿಸಿ.ನಿಮ್ಮ ಈ ಅಭ್ಯಾಸದಿಂದಾಗಿ, ನಿಮ್ಮ ಪಾದಗಳಲ್ಲಿ ಬ್ಯಾಕ್ಟೀರಿಯಾದ ಸೋಂಕು ಮತ್ತು ಶಿಲೀಂಧ್ರಗಳ ಬೆಳವಣಿಗೆಯ ಸಾಧ್ಯತೆಯೂ ಹೆಚ್ಚಿರುವುದು.
ದಿನವಿಡೀ ಶೂಗಳು ಮತ್ತು ಚಪ್ಪಲಿಗಳನ್ನು ಧರಿಸುವುದರಿಂದ ನಿಮ್ಮ ಪಾದಗಳು ನೈಸರ್ಗಿಕ ಗಾಳಿಯನ್ನು ಪಡೆಯುವುದನ್ನು ತಡೆಯುತ್ತದೆ. ನಿಮ್ಮ ದೇಹದೊಂದಿಗೆ, ನಿಮ್ಮ ಪಾದಗಳಿಗೆ ಸೂರ್ಯನ ಬೆಳಕು ಮತ್ತು ಗಾಳಿಯ ಅಗತ್ಯವಿರುತ್ತದೆ, ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಆಯುರ್ವೇದದ ಪ್ರಕಾರ ನಿತ್ಯ ಹುಲ್ಲಿನ ಮೇಲೆ ಸ್ವಲ್ಪ ಹೊತ್ತು ನಡೆಯಬೇಕು, ನೆಲದ ಮೇಲೆ ಬರಿಗಾಲಿನಲ್ಲಿ ನಡೆಯಬೇಕು. ಇದರಿಂದ ಒತ್ತಡವೂ ಕಡಿಮೆಯಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ