ಕಳ್ಳರ ಸುಳಿವು ತಿಳಿಯಲು, ಅಡಗಿಸಿಟ್ಟ ಬಾಂಬ್ ಪತ್ತೆಹಚ್ಚಲು ನಾಯಿಯನ್ನು ಬಳಸಿಕೊಳ್ಳುವುದು ಸಾಮಾನ್ಯ ಸಂಗತಿ. ಅದೆಷ್ಟೋ ರಹಸ್ಯ ಕಾರ್ಯಾಚರಣೆಯಲ್ಲಿ ನಾಯಿಯ ಸಹಾಯದಿಂದ ಕಳ್ಳರನ್ನು ಪತ್ತೆ ಹಚ್ಚಲಾಗಿರುವ ಸುದ್ದಿಯನ್ನು ಕೆಳಿಯೇ ಇರುತ್ತೀರಿ. ಆದರೀಗ ಹೊಸ ಅಧ್ಯಯನದ ಪ್ರಕಾರ ಕೊರೊನಾ ಸೋಂಕು ತಗುಲಿದ್ದ ಮಾನವನನ್ನು ಪತ್ತೆ ಹಚ್ಚಲು ನಾಯಿ ಸಹಾಯ ಮಾಡುತ್ತದೆ ಎಂಬ ಕುತೂಹಲ ವಿಷಯವೊಂದು ಹೊರ ಬಿದ್ದಿದೆ.
ಸಾಂಕ್ರಾಮಿಕ ರೋಗಿಗಳನ್ನು ಪತ್ತೆಹಚ್ಚುವ ಕಾರ್ಯದ ಪ್ರಯತ್ನದಲ್ಲಿ ಸ್ನಿಫಿಂಗ್ ಕೋರೆಹಲ್ಲುಗಳನ್ನು ಹೊಂದಿರುವ ನಾಯಿಗಳು ಸಹಾಯ ಮಾಡುತ್ತವೆ ಎಂಬುದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಫ್ರೆಂಚ್ ನಡೆಸಿದ ಅಧ್ಯಯನವು, ಸಕಾರಾತ್ಮಕ ವರದಿಯನ್ನು ನಾಯಿಗಳು ಶೇ.97ರಷ್ಟು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ ಎಂಬುದು ತಿಳಿಸಿದೆ. ಸೋಂಕು ತಗುಲಿರುವ ಮಾದರಿಗಿಂತ ನಕಾರಾತ್ಮಕ ಮಾದರಿಯನ್ನು ಬಹುಬೇಗ ಗುರುತಿಸಿದೆ.
ಮಾನವರಲ್ಲಿ ಕೊರೊನಾ ವೈರಸ್ಅನ್ನು ಗುರುತಿಸಲು ನಾಯಿಗಳು ಸಮರ್ಥವಾಗಿವೆ. ನಾಯಿಯಲ್ಲಿರುವ ಸ್ನಿಫಿಂಗ್ ಕೋರೆಹಲ್ಲುಗಳು ಕೊರೊನಾ ವೈರಸ್ ಸಕಾರಾತ್ಮಕ ಮಾದರಿಯನ್ನು ಗುರುತಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾದ್ದರಿಂದ ತಕ್ಷಣವೇ ವರದಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿ ಪ್ರಯೋಗಾಲಯಕ್ಕೆ ಸ್ಯಾಂಪಲ್ ಟೆಸ್ಟ್ ಕಳುಹಿಸಿದ ಬಳಿಗೆ ಪರೀಕ್ಷೆಯಾದ ನಂತರದಲ್ಲಿ ವರದಿ ದಾಖಲಾಗುತ್ತದೆ. ಇದಕ್ಕೆ ಖರ್ಚು ಕೂಡಾ ಇದೆ. ಹೀಗಾಗಿ ನಾಯಿಗಳ ಮೂಲಕ ಕೊರೊನಾ ವೈರಸ್ ಪತ್ತೆ ಹಚ್ಚಲು ತಜ್ಞರು ಮುಂದಾಗಿದ್ದಾರೆ.
ಪ್ಯಾರಿಸ್ ಬಳಿಯ ಮೈಸನ್ಸ್ ಆಲ್ಪೋರ್ಟ್ನಲ್ಲಿರುವ ಫ್ರಾನ್ಸ್ನ ರಾಷ್ಟ್ರೀಯ ಪಶುವೈದ್ಯಕೀಯ ಶಾಲೆಯ ಪ್ರಯೋಗಾಲಯದಲ್ಲಿ ಈ ಕುರಿತಂತೆ ಅಧ್ಯಯನ ನಡೆಸಲಾಯಿತು. ಸಂಶೋಧನೆಯ ಕಾರ್ಯಾಚರಣೆಯಲ್ಲಿ ಒಟ್ಟು 9 ನಾಯಿಗಳು ಭಾಗವಹಿಸಿದ್ದು, ಮಾನವರ ತೋಳುಗಳಲ್ಲಿನ ಬೆವರನ್ನು ಹತ್ತಿಯಲ್ಲಿ ಹಿಡಿದು, ನಾಯಿಗಳ ಸ್ನಿಫಿಂಗ್ ಕೋರೆಹಲ್ಲುಗಳಿಗೆ ಪರೀಕ್ಷೆಗೆಂದು ನೀಡಲಾಯಿತು. ಆ ನಾಯಿಗಳು ಮೊದಲಿನಂತೆಯೇ ಅವರೊಂದಿಗೆ ಸಂಪರ್ಕ ಹೊಂದಲಿಲ್ಲ. ಅಲ್ಲಿರುವ 350 ಜನರನ್ನು ಪರೀಕ್ಷೆ ಮಾಡಲಾಯಿತು. ಅದರಲ್ಲಿ 109 ಜನರು ಸಕಾರಾತ್ಮ ಪರೀಕ್ಷೆಗೆ ಒಳಗಾಗಿದ್ದವರಾಗಿದ್ದರು.
ಇತ್ತೀಚಿನ ಅಧ್ಯಯನವನ್ನು ಮಾರ್ಚ್ 16ರಿಂದ ಮತ್ತು ಏಪ್ರಿಲ್ 9ರ ನಡುವೆ ನಡೆಸಲಾಗಿದೆ. ಈ ಹಿಂದೆ ಜುಲೈನಲ್ಲಿ ಜರ್ಮನ್ ಸಂಶೋಧಕರು ತರಬೇತಿ ಪಡೆದ ನಾಯಿಗಳು, ಸೋಂಕಿತರ ಲಾಲಾರಸ ಮಾದರಿಯ ಮೂಲಕ ವೈರಸ್ಅನ್ನು ಪತ್ತೆಹಚ್ಚುತ್ತದೆ ಎಂಬುದನ್ನು ತೋರಿಸಿದ್ದರು.
ಇದನ್ನೂ ಓದಿ: ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಕೊವಿಡ್ ಗೈಡ್ಲೈನ್ಸ್; ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ
Published On - 4:27 pm, Thu, 20 May 21