ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಕೊವಿಡ್ ಗೈಡ್​ಲೈನ್ಸ್; ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ಸೋಂಕಿತರಿಗೆ ಆಸ್ಪತ್ರೆ ಅಗತ್ಯವಿಲ್ಲದಿದ್ರೆ ಐಸೋಲೇಷನ್ ಆಗಬೇಕು. ಹೋಂ ಐಸೋಲೇಷನ್ ಆಗದಿದ್ರೆ ಸಿಸಿಸಿಗೆ ದಾಖಲಾಗಬೇಕು. ಹತ್ತಿರದ ಕೊವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕು.

ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಕೊವಿಡ್ ಗೈಡ್​ಲೈನ್ಸ್; ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ
ಸಾಂದರ್ಭಿಕ ಚಿತ್ರ

ದೆಹಲಿ: ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಕೊವಿಡ್ ಗೈಡ್‌ಲೈನ್ಸ್ ನೀಡಿ ಕೇಂದ್ರ ಆರೋಗ್ಯ ಇಲಾಖೆಯಿಂದ ಗೈಡ್‌ಲೈನ್ಸ್ ಬಿಡುಗಡೆಗೊಳಿಸಲಾಗಿದೆ. ಕೊವಿಡ್ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ತಕ್ಷಣವೇ ಟೆಸ್ಟ್ ಮಾಡಿಸಬೇಕು ಎಂದು ಸೂಚಿಸಲಾಗಿದೆ. ಮನೆ ಮನೆಗೂ ತೆರಳಿ ಸರ್ವೆ ಮಾಡುವಂತೆಯೂ ಸೂಚನೆ ನೀಡಲಾಗಿದೆ.

ಸಮುದಾಯ ಆರೋಗ್ಯಾಧಿಕಾರಿಯಿಂದ ಚಿಕಿತ್ಸೆ ಮಾಹಿತಿ ನೀಡಲಾಗುತ್ತದೆ. ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಗ್ರಾಮ ಮಟ್ಟದಲ್ಲಿಯೇ ಟೆಲಿ ಕನ್ಸಲ್ಟೇಷನ್ ನಡೆಸಬೇಕು. ಸಹಾಯಕ ನರ್ಸ್‌ಗಳಿಗೆ ಕೊವಿಡ್ ಟೆಸ್ಟ್ ತರಬೇತಿ ನೀಡುತ್ತಾರೆ. ಕೊವಿಡ್ ಲಕ್ಷಣ ಇದ್ದರೆ ಕ್ವಾರಂಟೈನ್ ಆಗಬೇಕು. ಟೆಸ್ಟ್ ವರದಿ ಬರುವುದಕ್ಕೂ ಮುನ್ನವೇ ಕ್ವಾರಂಟೈನ್ ಆಗಬೇಕು ಎಂದು ತಿಳಿಸಲಾಗಿದೆ.

ಸೋಂಕಿತರಿಗೆ ಆಸ್ಪತ್ರೆ ಅಗತ್ಯವಿಲ್ಲದಿದ್ರೆ ಐಸೋಲೇಷನ್ ಆಗಬೇಕು. ಹೋಂ ಐಸೋಲೇಷನ್ ಆಗದಿದ್ರೆ ಸಿಸಿಸಿಗೆ ದಾಖಲಾಗಬೇಕು. ಹತ್ತಿರದ ಕೊವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕು. ಹೋಂ ಐಸೋಲೇಷನ್‌ನಲ್ಲಿರುವವರಿಗೆ ಕಿಟ್ ನೀಡಬೇಕು ಎಂದು ಮೆಡಿಕಲ್ ಕಿಟ್ ನೀಡುವಂತೆ ಸೂಚನೆ ನೀಡಲಾಗಿದೆ. ಪಲ್ಸ್ ರೇಟ್ 94ಕ್ಕಿಂತ ಕಡಿಮೆ ಇದ್ದರೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಗೈಡ್‌ಲೈನ್ಸ್ ಬಿಡುಗಡೆಗೊಳಿಸಲಾಗಿದೆ.

ದೇಶದಲ್ಲಿ ಕೊರೊನಾ ಪ್ರಕರಣಗಳ ವಿವರ
ಕಳೆದ 24 ಗಂಟೆಗಳಲ್ಲಿ 3,11,170 ಹೊಸ ಪ್ರಕರಣಗಳನ್ನು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2.46 ಕೋಟಿಗೆ ತಲಪಿದ. ದೇಶಾದ್ಯಂತ 4,077 ಸಾವುಗಳು ವರದಿಯಾಗಿವೆ. ಈಗ ಸಾವಿನ ಸಂಖ್ಯೆ 2,70,284 ಆಗಿದ್ದು ಸಕ್ರಿಯ ಪ್ರಕರಣಗಳು 26.18 ಲಕ್ಷದಷ್ಟಿವೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಕೊವಿಡ್ -19 ಪರಿಸ್ಥಿತಿಯನ್ನು ನಿಭಾಯಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೆಂಟಿಲೇಟರ್‌ಗಳು ಬಳಕೆಯಾಗದೆ ಇರುವ ವರದಿಗಳ ನಂತರ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಒದಗಿಸಿದವರ ಬಗ್ಗೆ ತಕ್ಷಣ ಆಡಿಟ್ ಮಾಡಬೇಕೆಂದು ಮೋದಿ ಕರೆ ನೀಡಿದರು. ರಾಜ್ಯಗಳು ತಮ್ಮ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಮಾಡುವಾಗ ಪಾರದರ್ಶಕವಾಗಿರಬೇಕು ಎಂದು ಅವರು ಹೇಳಿದ್ದಾರೆ.

ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಕುಸಿತ
ಕೊವಿಡ್ ದೈನಂದಿನ ಪ್ರಕರಣಗಳು ಕಳೆದ  ಏಳು ದಿನಗಳಿಂದ ಸತತವಾಗಿ ಕುಸಿದಿದೆ. ಕಳೆದ ವಾರದಲ್ಲಿ ಪಾಸಿಟಿವಿಟಿದರ ಶೇ 20ಕ್ಕಿಂತ ಕಡಿಮೆಯಾಗಿದೆ ಮತ್ತು ಈ ಅವಧಿಯಲ್ಲಿ ಸಕ್ರಿಯ ಪ್ರಕರಣಗಳು 1.5 ಲಕ್ಷಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಕೊರೊನಾ ಪ್ಯಾಕೇಜ್ ಘೋಷಣೆ; ಎಲ್ಲಾ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊವಿಡ್​ಗೆ ಉಚಿತ ಚಿಕಿತ್ಸೆ

ಬಾದಾಮಿ ಕ್ಷೇತ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳ; ನೆರವಿಗೆ ಧಾವಿಸಿದ ಸಿದ್ದರಾಮಯ್ಯ