ಶೇಂಗಾ, ಬದಾಮಿ, ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಅಗಸೆ ಬೀಜದಲ್ಲಿದೆ! ಇದರ ಆರೋಗ್ಯ ಪ್ರಯೋಜನ ಹೀಗಿದೆ

| Updated By: ಸಾಧು ಶ್ರೀನಾಥ್​

Updated on: Aug 26, 2022 | 6:06 AM

Flax Seeds health benefits:  ಒಂದು ದಿನಕ್ಕೆ ಎರಡರಿಂದ ಮೂರು ಟೀ ಚಮಚದಷ್ಟು ಹುರಿದ ಅಗಸೆ ಬೀಜಗಳನ್ನು ತಿನ್ನಬಹುದು. ಅಥವಾ ಪೌಡರ್ ಮಾಡಿ ನೀರಿನಲ್ಲಿ ಸೇವನೆ ಮಾಡಬಹುದು. ಬಹು ಉಪಯೋಗಿಯಾದ ಈ ಅಗಸೆ ಬೀಜ ಆಕಾರದಲ್ಲಿ ಚಿಕ್ಕದಾದರೂ ಗುಣಗಳ ರಾಜ.

ಶೇಂಗಾ, ಬದಾಮಿ, ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಅಗಸೆ ಬೀಜದಲ್ಲಿದೆ! ಇದರ ಆರೋಗ್ಯ ಪ್ರಯೋಜನ ಹೀಗಿದೆ
ಶೇಂಗಾ, ಬದಾಮಿ, ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಅಗಸೆ ಬೀಜದಲ್ಲಿದೆ! ಇದರ ಆರೋಗ್ಯ ಪ್ರಯೋಜನ ಹೀಗಿದೆ
Follow us on

ಕನ್ನಡ ಭಾಷೆಯಲ್ಲಿ ಅಗಸೆ ಬೀಜ, ಅಗಸಿ ಬೀಜ. ಸಂಸ್ಕೃತ ಭಾಷೆಯಲ್ಲಿ ನೀಲ ಪುಷ್ಟಿ, ಅತಸಿ. ಆಂಗ್ಲ ಭಾಷೆಯಲ್ಲಿ Flax seeds ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಅಲಸಿ ಎಂದು ಕರೆಯುತ್ತಾರೆ. ಈ ಅಗಸೆ ಬೀಜಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳದ ಜೊತೆಗೆ ಅಗಸಿಯನ್ನು ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು (Flax Seeds health benefits).

ಬಿಳಿಜೋಳದ ರಾಶಿಯ ಕೊನೆಯಲ್ಲಿ ಅಗಸೆ ಹಾಗೂ ಕುಸಿಬೆ ರಾಶಿ ಮಾಡುತ್ತಾರೆ. ಏಕೆಂದರೆ ಈ ಎರಡೂ ಬೆಳೆಗಳ ಹೊಟ್ಟು ದನ ಕರುಗಳಿಗೆ ಉಪಯೋಗವಿಲ್ಲ. ಈ ಅಗಸಿ ಹುಲ್ಲು ಜಿಗುಟಾಗಿದ್ದು ದನಗಳು ತಿಂದರೆ ಗಂಟಲಲ್ಲಿ ಸಿಕ್ಕು ಸಾಯುವ ಸಂಭವ ಹೆಚ್ಚು. ಅದಕ್ಕಾಗಿ ರಾಶಿಯ ನಂತರ ಸುಟ್ಟು ಬಿಡುತ್ತಾರೆ. ಈ ಅಗಸೆ ಬೀಜ ವಿಶ್ವದಲ್ಲಿಯೇ ಅತ್ಯಧಿಕ ಮೆಗ್ನೀಷಿಯಂ ಹೊಂದಿರುವ ಬೀಜವಾಗಿದೆ. ಮೊದಲೆಲ್ಲ ನಾವು ಹೊಲದಲ್ಲಿ ಕುಳಿತು ಊಟ ಮಾಡುವಾಗ ಅಗಸೆ ಗಿಡದ ಎಲೆ, ಹೂವು ಕಾಯಿಗ ಳನ್ನು ರೊಟ್ಟಿಯ ಜೊತೆಗೆ ತಿಂದಿದ್ದೇವೆ.

*ಶೇಂಗಾ, ಬದಾಮು ಹಾಗೂ ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಈ ಬೀಜಗಳಲ್ಲಿದ್ದು, ಇದರ ನಾರಿನಂಶ ದೇಹದ ಕೊಬ್ಬು ಕರಗಿಸಿ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಈ ಬೀಜಗಳ ಸೇವನೆ ಹೃದಯಾಘಾತ, ಪಾರ್ಶ್ವವಾಯು ತಡೆಯಲು ಸಹಕಾರಿಯಾಗುತ್ತದೆ.

* ಅಗಸೆ ಬೀಜಗಳಲ್ಲಿ ಒಮೆಗಾ -03 ಇದ್ದು ಕಣ್ಣಿನ ಆರೋಗ್ಯಕ್ಕೆ ಉತ್ತಮ.

* ಈ ಬೀಜಗಳ ಸೇವನೆ ಸುಕ್ಕುಗಳನ್ನು ತಡೆದು ಚರ್ಮಕ್ಕೆ ಕಾಂತಿ ನೀಡುತ್ತದೆ.

* ಮಲಬದ್ಧತೆ ನಿವಾರಣೆಗೆ ಬೀಜಗಳ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

* ಮೂಳೆಗಳ ಸವೆತ ತಡೆಗಟ್ಟುತ್ತದೆ ಮತ್ತು ವಾತ ನಿವಾರಕವಾಗಿ ಕೆಲಸ ಮಾಡುತ್ತದೆ.

* ಅಗಸೆ ಎಲೆ ಮತ್ತು ಹೂವುಗಳ ಪಲ್ಯ ಮಾಡಿ ತಿನ್ನು ವುದರಿಂದ ಇರುಳುಗಣ್ಣುರೋಗ ನಿವಾರಣೆಯಾಗುತ್ತದೆ.

* ಅಗಸಿ ಬೀಜಗಳನ್ನು ಹುರಿಯದೇ ಪೌಡರ್ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಶೋಧಿಸಿ ಕುದಿಸಿ ಆರಿಸಿದ ನಂತರ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಸೇರಿಸಿ ಕುಡಿದರೆ ಶ್ವಾಸ ರೋಗದಲ್ಲಿ ಲಾಭಕರ.

* ಸೊಂಟ ನೋವು,ಕಟಿಶೂಲೆಗೆ… ಅಗಸಿ ಎಣ್ಣೆಯಲ್ಲಿ ಒಣ ಶುಂಠಿ ಪುಡಿ ಹಾಕಿ ಕಾಯಿಸಿದ ಎಣ್ಣೆಯಿಂದ ಮಸಾಜ್ ಮಾಡಬೇಕು.

* ಉತ್ತರ ಕರ್ನಾಟಕದಲ್ಲಿ ಅಗಸಿ ಚಟ್ನಿ ಇಲ್ಲದೇ ಊಟವೇ ಇಲ್ಲ.ಅಗಸಿ ಚಟ್ನಿ ಉತ್ತರ ಕರ್ನಾಟಕದ ಫೇಮಸ್.

ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ಮಾಡಿದ ನಂತರ ಈ ಅಗಸೆ ಬೀಜಗಳನ್ನು ಹುರಿದು, Flax Seeds ಹೆಸರಿನಲ್ಲಿ ಆಕರ್ಷಕವಾಗಿ ಪ್ಯಾಕಿಂಗ್ ಮಾಡಿ 100 ಗ್ರಾಂ ಗೆ 70 ರಿಂದ 80 ರೂಪಾಯಿಗೆ ಮಾಲ್ ಗಳಲ್ಲಿ, ಮೆಡಿಕಲ್ ಸ್ಟೋರ್​ ಗಳಲ್ಲಿ ಮಾರುತ್ತಿದ್ದಾರೆ.

ಒಂದು ದಿನಕ್ಕೆ ಎರಡರಿಂದ ಮೂರು ಟೀ ಚಮಚದಷ್ಟು ಹುರಿದ ಅಗಸೆ ಬೀಜಗಳನ್ನು ತಿನ್ನಬಹುದು. ಅಥವಾ ಪೌಡರ್ ಮಾಡಿ ನೀರಿನಲ್ಲಿ ಸೇವನೆ ಮಾಡಬಹುದು.

ಅಗಸೆ ಬೀಜಗಳ ಎಣ್ಣಯನ್ನು ವಾರ್ನಿಶ್, ಪೇಂಟ್ ಗಳಲ್ಲಿ ಶೈನಿಂಗ್ ಬರಲು ಉಪಯೋಗಿಸುತ್ತಾರೆ. ಹೀಗೆ ಬಹು ಉಪಯೋಗಿಯಾದ ಈ ಅಗಸೆ ಬೀಜ ಆಕಾರದಲ್ಲಿ ಚಿಕ್ಕದಾದರೂ ಗುಣಗಳ ರಾಜ. (ಮಾಹಿತಿ ಲೇಖನ -ಎಸ್​ ಹೆಚ್​ ನದಾಫ್​)