ಮೂತ್ರವನ್ನು ತಡೆಹಿಡಿಯುವ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆ ಸೃಷ್ಟಿಸಬಹುದು

Urine Holding Side Effects: ಶಾಪಿಂಗ್ ಅಥವಾ ದೂರದ ಪ್ರಯಾಣ ಮಾಡುತ್ತಿರುವಾಗ ಸಾರ್ವಜನಿಕ ಶೌಚಾಲಯವನ್ನು ಕೆಲವರು ಬಳಕೆ ಮಾಡಲು ಇಷ್ಟಪಡುವುದಿಲ್ಲ, ಮೂತ್ರವನ್ನು ತಡೆಹಿಡಿದಿರುತ್ತಾರೆ.

ಮೂತ್ರವನ್ನು ತಡೆಹಿಡಿಯುವ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆ ಸೃಷ್ಟಿಸಬಹುದು
ಮೂತ್ರ ತಡೆಹಿಡಿಯುವುದು
Edited By:

Updated on: Mar 14, 2023 | 8:00 AM

ಶಾಪಿಂಗ್ ಅಥವಾ ದೂರದ ಪ್ರಯಾಣ ಮಾಡುತ್ತಿರುವಾಗ ಸಾರ್ವಜನಿಕ ಶೌಚಾಲಯವನ್ನು ಕೆಲವರು ಬಳಕೆ ಮಾಡಲು ಇಷ್ಟಪಡುವುದಿಲ್ಲ, ಮೂತ್ರವನ್ನು ತಡೆಹಿಡಿದಿರುತ್ತಾರೆ. ಇದು ಅನೇಕ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.ಆದರೆ ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ. ಕೆಲವರು ನೈರ್ಮಲ್ಯದ ಕಾರಣಗಳಿಗಾಗಿ ತಮ್ಮ ಮೂತ್ರವನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುತ್ತಾರೆ. ಪರಿಣಾಮವಾಗಿ, ಅವರು ಮನೆಗೆ ಬಂದಾಗ, ಶೌಚಾಲಯವನ್ನು ಬಳಸುವ ಉತ್ಸಾಹವು ದ್ವಿಗುಣಗೊಳ್ಳುತ್ತದೆ. ನೀವು ತುಂಬಾ ಸಮಯದವರೆಗೆ ಮೂತ್ರವನ್ನು ತಡೆಹಿಡಿದರೆ ಮೂತ್ರನಾಳದ ಸೋಂಕು, ಮೂತ್ರಕೋಶದ ಒತ್ತಡ, ಕಿಡ್ನಿ ಕಲ್ಲುಗಳಂತಹ ಸಮಸ್ಯೆಗಳು ಎದುರಾಗಬಹುದು.

ಮತ್ತಷ್ಟು ಓದಿ: Sleeping Pills Side Effects: ನಿತ್ಯ ನಿದ್ರೆ ಮಾತ್ರೆ ತಗೊಳ್ತಾ ಇದ್ರೆ ಜಾಗರೂಕರಾಗಿರಿ, ಈ ಅಭ್ಯಾಸ ನಿಮಗೆ ಮಾರಕವಾಗಬಹುದು

ಮೂತ್ರನಾಳದ ಸೋಂಕು
ಮೂತ್ರವನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವುದು ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾಗಳು ನಿಮ್ಮ ಮೂತ್ರನಾಳದ ಮೂಲಕ ಹರಡುವುದರಿಂದ ಇದು ಅಂತಿಮವಾಗಿ ಮೂತ್ರನಾಳದ ಸೋಂಕಿಗೆ ಕಾರಣವಾಗಬಹುದು. ಮೂತ್ರದಲ್ಲಿ ರಕ್ತ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವುದು, ಆಗಾಗ್ಗೆ ಮೂತ್ರ ವಿಸರ್ಜನೆಯ ಅಗತ್ಯತೆ, ಕಪ್ಪು ಮೂತ್ರ, ದುರ್ವಾಸನೆಯ ಮೂತ್ರ, ಹೊಟ್ಟೆಯ ಕೆಳಭಾಗದಲ್ಲಿ ಅಥವಾ ಶ್ರೋಣಿಯ ಪ್ರದೇಶದಲ್ಲಿ ನೋವು. ಮೂತ್ರವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದರಿಂದ ಉಂಟಾಗುವ ಸಮಸ್ಯೆಗಳಿವು.

ನೋವು
ಮೂತ್ರವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಂಡಾಗ ಜನರು ತಮ್ಮ ಮೂತ್ರಕೋಶ ಮತ್ತು ಮೂತ್ರಪಿಂಡಗಳಲ್ಲಿ ನೋವನ್ನು ಅನುಭವಿಸಬಹುದು. ಇದಲ್ಲದೆ, ಮೂತ್ರ ವಿಸರ್ಜನೆಯ ಸಮಯದಲ್ಲಿ ನೀವು ನೋವು ಅನುಭವಿಸಬಹುದು. ಏಕೆಂದರೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದರಿಂದ ನಿಮ್ಮ ಸ್ನಾಯುಗಳು ಹೆಚ್ಚು ಕಾಲ ಕೆಲಸ ಮಾಡಬೇಕಾಗಿರುವುದರಿಂದ ಅವುಗಳಿಗೆ ನೋವಾಗುತ್ತದೆ.

ಶ್ರೋಣಿಯ ಸ್ನಾಯು ದುರ್ಬಲ
ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಮತ್ತೊಂದು ಅಡ್ಡ ಪರಿಣಾಮವೆಂದರೆ ಅದು ನಿಮ್ಮ ಶ್ರೋಣಿಯ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಮೂತ್ರ ವಿಸರ್ಜನೆಯ ಪ್ರಕ್ರಿಯೆಯ ಮೇಲೆ ನೀವು ನಿಯಂತ್ರಣವನ್ನು ಕಳೆದುಕೊಳ್ಳುತ್ತೀರಿ. ಹಾಗಾಗಿ ಮೂತ್ರವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಬೇಡಿ.

ಮೂತ್ರಕೋಶವು ಕುಗ್ಗುತ್ತದೆ
ನಿಮ್ಮ ಮೂತ್ರಕೋಶವು ಕುಗ್ಗಬಹುದು, ಅದು ಹಿಂದಿನ ಗಾತ್ರಕ್ಕೆ ಮರಳಲು ಕಷ್ಟವಾಗಬಹುದು. ಇದು ಬಹಳ ಅಪರೂಪವಾದದ್ದಾದರೂ ದೀರ್ಘಕಾಲದವರೆಗೆ ಮಾತ್ರ ಹಿಡಿದಿಟ್ಟುಕೊಳ್ಳುವುದು ಮೂತ್ರಕೋಶದ ಕುಗ್ಗುವಿಕೆಗೆ ಕಾರಣವಾಗುತ್ತದೆ.

ಕಿಡ್ನಿ ಸ್ಟೋನ್
ಮೂತ್ರಪಿಂಡದ ಕಲ್ಲು
ನೀವು ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವಾಗ ನೀವು ಮೂತ್ರಪಿಂಡದ ಕಲ್ಲುಗಳನ್ನು ಸಹ ಅಭಿವೃದ್ಧಿಪಡಿಸಬಹುದು. ಇದು ನೋವನ್ನು ಉಂಟುಮಾಡಬಹುದು ಮತ್ತು ಕಲ್ಲನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಕಡಿಮೆ ನೀರು ಕುಡಿಯುವವರಲ್ಲಿ ಕಲ್ಲುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us