ನೀರು ಹೇಗೆ ಕುಡಿಯುತ್ತೀರಿ ಎಂಬುದರ ಮೇಲೆಯೇ ನಿಮ್ಮ ಆರೋಗ್ಯ ನಿಂತಿದೆ? ನೀರು ಕುಡಿಯುವ ಸರಿಯಾದ ಮಾರ್ಗ ತಿಳಿಯಿರಿ

| Updated By: ನಯನಾ ರಾಜೀವ್

Updated on: Dec 12, 2022 | 4:00 PM

ಆಹಾರಕ್ಕಿಂತಲೂ ನಮ್ಮ ದೇಹಕ್ಕೆ ನೀರು(Water)  ಹೆಚ್ಚು ಅತ್ಯಗತ್ಯ. ನೀರಿಲ್ಲದೆ ದೇಹ ಮತ್ತು ಅದರ ಪ್ರಮುಖ ಅಂಗಗಳ ಕಾರ್ಯನಿರ್ವಹಣೆಗೆ ತುಂಬಾ ಪ್ರಯೋಜನಕಾರಿ. ಜೀರ್ಣಕ್ರಿಯೆ, ಚಯಾಪಚಯ ಮತ್ತು ತೂಕ ನಷ್ಟ ಮತ್ತು ನಿರ್ವಹಣೆಯಂತಹ ದೇಹದ ಅಗತ್ಯ ಕಾರ್ಯಗಳಲ್ಲಿ ನೀರು ಕೂಡ ಒಂದು ಪಾತ್ರವಹಿಸುತ್ತದೆ.

ನೀರು ಹೇಗೆ ಕುಡಿಯುತ್ತೀರಿ ಎಂಬುದರ ಮೇಲೆಯೇ ನಿಮ್ಮ ಆರೋಗ್ಯ ನಿಂತಿದೆ? ನೀರು ಕುಡಿಯುವ ಸರಿಯಾದ ಮಾರ್ಗ ತಿಳಿಯಿರಿ
Water
Follow us on

ಆಹಾರಕ್ಕಿಂತಲೂ ನಮ್ಮ ದೇಹಕ್ಕೆ ನೀರು(Water)  ಹೆಚ್ಚು ಅತ್ಯಗತ್ಯ. ನೀರಿಲ್ಲದೆ ದೇಹ ಮತ್ತು ಅದರ ಪ್ರಮುಖ ಅಂಗಗಳ ಕಾರ್ಯನಿರ್ವಹಣೆಗೆ ತುಂಬಾ ಪ್ರಯೋಜನಕಾರಿ. ಜೀರ್ಣಕ್ರಿಯೆ, ಚಯಾಪಚಯ ಮತ್ತು ತೂಕ ನಷ್ಟ ಮತ್ತು ನಿರ್ವಹಣೆಯಂತಹ ದೇಹದ ಅಗತ್ಯ ಕಾರ್ಯಗಳಲ್ಲಿ ನೀರು ಕೂಡ ಒಂದು ಪಾತ್ರವಹಿಸುತ್ತದೆ. ದೇಹದಿಂದ ಬೆವರು, ಮೂತ್ರದ ರೂಪದಲ್ಲಿ ಹೊರಹೋಗುವ ನೀರನ್ನು ಮತ್ತೆ ದೇಹದೊಳಗೆ ತುಂಬಿಸಲು ಹೆಚ್ಚು ನೀರು ಕುಡಿಯಲೇಬೇಕು.

ನೀರು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣ, ಮಲಬದ್ಧತೆ, ಆಯಾಸ ಇತ್ಯಾದಿ ಸಮಸ್ಯೆಗಳು ಉದ್ಭವವಾಗಬಹುದು, ಕೆಲವು ಸಂದರ್ಭಗಳಲ್ಲಿ ಇದು ಮಾರಕವಾಗಬಹುದು. ದೇಹದ ವಿವಿಧ ಭಾಗಗಳನ್ನು ಹೈಡ್ರೇಟ್ ಆಗಿರಿಸಿಕೊಳ್ಳುವುದರ ಹೊರತಾಗಿ ನೀರು ಎಲೆಕ್ಟ್ರೋಲೈಟ್ ಸಮತೋಲನವನ್ನು ನಿರ್ವಹಿಸುತ್ತದೆ ಹಾಗೂ ರಕ್ತದೊತ್ತಡವು ಕೀಲುಗಳನ್ನು ನಯಗೊಳಿಸುತ್ತದೆ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಜೀವನಕೋಶದ ಆರೋಗ್ಯವನ್ನು ಉತ್ತೇಜಿಸುತ್ತದೆ.

ಮತ್ತಷ್ಟು ಓದಿ: Copper Utensils: ಚಳಿಗಾಲದಲ್ಲಿ ತಾಮ್ರದ ಪಾತ್ರೆಗಳನ್ನು ಬಳಸುವುದು ಒಳ್ಳೆಯದೋ? ಕೆಟ್ಟದ್ದೋ ತಿಳಿಯಿರಿ

ಸಾಕಷ್ಟು ನೀರು ಕುಡಿಯದಿರುವುದರಿಂದ ಕೆಲವು ಅಡ್ಡಪರಿಣಾಮ ಉಂಟಾಗಬಹುದು. ಹಾಗಾಗಿ ನಾವು ಹೇಗೆ ನೀರನ್ನು ಕುಡಿಯುತ್ತೇಬೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಆಯುರ್ವೇದವು ನೀರನ್ನು ಕುಡಿಯಲು ಹಲವಾರು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಹಲವು ಸಿದ್ಧಾಂತಗಳನ್ನು ಹೊಂದಿದೆ.

ಒಂದು ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು, ಮತ್ತೊಂದು ನೀರು ಕುಡಿಯುವಾಗ ಹೇಗೆ ಕುಳಿತುಕೊಳ್ಳುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ನಿಂತಿರುವಾಗ ಎಂದೂ ನೀರು ಕುಡಿಯಬೇಡಿ ಇದು ಅಜೀರ್ಣದಂತಹ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದು ಸಂಧಿವಾತವನ್ನು ಪ್ರಚೋದಿಸುತ್ತದೆ.

ಮತ್ತಷ್ಟು ಓದಿ: Tomato Benefits: ನಿತ್ಯ ಖಾಲಿ ಹೊಟ್ಟೆಯಲ್ಲಿ ಟೊಮೆಟೋ ತಿನ್ನಿ, ಈ ಅದ್ಭುತ ಆರೋಗ್ಯ ಪ್ರಯೋಜನಗಳ ಪಡೆಯಿರಿ

ಎದೆಯುರಿಯೂ ಉಂಟಾಗುತ್ತದೆ. ನೀರು ಚಲಿಸುವ ವೇಗ ಹೆಚ್ಚಾದರೆ ಶ್ವಾಸಕೋಶಕ್ಕೂ ಹಾನಿಯಾಗುತ್ತದೆ. ನೀರನ್ನು ಕುಳಿತುಕೊಂಡೇ ಕುಡಿಯಬೇಕು, ಬೆನ್ನನ್ನು ನೇರವಾಗಿಟ್ಟುಕೊಂಡಿರಬೇಕು, ಈ ರೀತಿ ಕುಡಿದರೆ ಮೆದುಳು ಚಟುವಟಿಕೆಗಳು ಹೆಚ್ಚಾಗುತ್ತದೆ. ಜೀರ್ಣಕ್ರಿಯೆಗೂ ಸಹಕಾರಿ. ಹೊಟ್ಟೆ ಉಬ್ಬಸವನ್ನು ತಡೆಯುತ್ತದೆ.

ಒಂದೇ ಸಲಕ್ಕೆ ನೀರು ಕುಡಿಯಬೇಡಿ
ಒಂದೊಂದೇ ಗುಟುಕು ನೀರನ್ನು ಕುಡಿಯಿರಿ, ಒಂದೇ ಸಲಕ್ಕೆ ನೀರು ಕುಡಿಯಬೇಡಿ. ಕುಳಿತಿರುವ ಭಂಗಿಯಲ್ಲಿ ನೀರು ಕುಡಿಯುವುದರಿಂದ ಸ್ನಾಯುಗಳು, ನರಮಂಡಲಗಳು ಶಾಂತಗೊಳ್ಳುತ್ತವೆ, ಮೂತ್ರಪಿಂಡದ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಉಂಟಾಗುವುದಿಲ್ಲ. ಒಂದೇ ಸಲಕ್ಕೆ ನೀರು ಕುಡಿಯುವುದು ಉಸಿರಾಟ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತದೆ.

ತಣ್ಣನೆಯ ನೀರು ಕುಡಿಯಬೇಡಿ
ಬೇಸಿಗೆಯಿರಲಿ ಯಾವುದೇ ಕಾಲವಿರಲಿ ಸಾಧ್ಯವಾದಷ್ಟು ಮಟ್ಟಿಗೆ ಬೆಚ್ಚನೆಯ ನೀರನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ, ತಣ್ಣನೆಯ ನೀರು ಸೇವನೆ ಮಾಡಬೇಡಿ. ತಣ್ಣೀರು ಮಲಬದ್ಧತೆಗೆ ಕಾರಣವಾಗುತ್ತದೆ. ದೇಹದ ವಿವಿಧ ಅಂಗಗಳಿಗೆ ರಕ್ತಪೂರೈಕೆಗೂ ಅಡೆತಡೆಯನ್ನುಂಟು ಮಾಡುತ್ತದೆ.

ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ
ತಜ್ಞರ ಪ್ರಕಾರ, ನೀವು ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ, ದೇಹವು ಹೆಚ್ಚು ನೀರಿನ ಸೇವನೆಯನ್ನು ಹೀರಿಕೊಳ್ಳುವುದಿಲ್ಲ, ಆದ್ದರಿಂದ ನಿಮ್ಮ ದೇಹವು ನಿಮಗೆ ಬಾಯಾರಿಕೆ ಸಂಕೇತವನ್ನು ನೀಡಿದರೆ ಮಾತ್ರ ನೀವು ನೀರು ಕುಡಿಯಿರಿ.

ತಾಮ್ರ ಅಥವಾ ಬೆಳ್ಳಿಯ ಲೋಟದಲ್ಲಿ ನೀರು ಕುಡಿಯಿರಿ
ಹಿಂದಿನ ಕಾಲದಲ್ಲಿ ತಾಮ್ರ ಅಥವಾ ಬೆಳ್ಳಿ ಲೋಟದಿಂದ ನೀರನ್ನು ಕುಡಿಯುತ್ತಿದ್ದರು, ಅದರಿಂದ ದೇಹಕ್ಕೆ ಅಗತ್ಯವಿರುವ ಖನಿಜಗಳು ಸಿಗುತ್ತದೆ ಎಂದು, ಹಾಗೆಯೇ ಹಲವು ರೋಗಗಳನ್ನು ತಡೆಯುವ ಸಾಮರ್ಥ್ಯವೂ ಅದಕ್ಕಿದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ