
ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನ ಎನ್ನುವುದು ಒಂದು ವಿಶೇಷ ಭಾವನೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ತಾಯಿಯಾಗುವುದು ಸುಲಭವಲ್ಲ. ಒತ್ತಡದ ಜೀವನಶೈಲಿ, ಬೇಗನೆ ತಾಯಂದಿರಾಗಲು ಇಷ್ಟಪಡದಿರುವುದು ಸೇರಿದಂತೆ ನಾನಾ ಕಾರಣಗಳು ಕೆಲವೊಂದು ಬಾರಿ ಗರ್ಭಪಾತಕ್ಕೆ (Abortion) ಕಾರಣವಾಗುತ್ತದೆ. ಆದರೆ ಒಮ್ಮೆ ಗರ್ಭಪಾತವಾದರೆ ಸಾಧ್ಯವಾದಷ್ಟು ಆರೈಕೆ ಮಾಡಬೇಕಾಗುತ್ತದೆ. ಹಾಗೆಯೇ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರಗಳ ಸೇವನೆ ಮಾಡಬೇಕಾಗುತ್ತದೆ. ಇದು ತ್ವರಿತ ಪರಿಹಾರ ನೀಡುವುದರ ಜೊತೆಗೆ ಒತ್ತಡವನ್ನು ಕೂಡ ನಿವಾರಣೆ ಮಾಡುತ್ತದೆ. ಹಾಗಾದರೆ ಯಾವ ರೀತಿಯ ಆಹಾರ ಒಳ್ಳೆಯದು, ಅವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.
ಗರ್ಭಪಾತದ ನಂತರ, ರಕ್ತಸ್ರಾವವಾಗುವುದರಿಂದ ದೇಹ ತುಂಬಾ ದುರ್ಬಲಗೊಳ್ಳುತ್ತದೆ. ಇದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ. ಅಷ್ಟೇ ಅಲ್ಲ, ವಾಕರಿಕೆ, ವಾಂತಿ ಮತ್ತು ಆಯಾಸದಂತಹ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತವೆ. ಗರ್ಭಪಾತದ ನಂತರ, ವೈದ್ಯರು ದೇಹ ಚೇತರಿಸಿಕೊಳ್ಳಲು ಸಹಾಯ ಮಾಡುವ ಔಷಧಿಗಳನ್ನು ಮಾತ್ರ ನೀಡುತ್ತಾರೆ. ಆದರೆ ಆ ಪರಿಸ್ಥಿತಿಯಲ್ಲಿ, ದೇಹ ಮತ್ತು ಮನಸ್ಸು ಎರಡನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿರುತ್ತದೆ. ಔಷಧಿಯ ಜೊತೆಗೆ, ಸರಿಯಾದ ರೀತಿಯ ಆಹಾರ ಸೇವನೇ ಮಾಡುವುದರಿಂದ ಸಾಮಾನ್ಯ ಜೀವನಕ್ಕೆ ಮರಳಲು ಸಹಾಯವಾಗುತ್ತದೆ.
ಸಾಮಾನ್ಯವಾಗಿ ಗರ್ಭಪಾತದ ನಂತರ ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಉಂಟಾಗುತ್ತದೆ. ಈ ಸಮಯದಲ್ಲಿ, ನೀವು ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ಖಿನ್ನತೆಯಿಂದ ಚೇತರಿಸಿಕೊಳ್ಳಲು ಮತ್ತು ಕೆಂಪು ರಕ್ತ ಕಣಗಳ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಈ ಸಮಯದಲ್ಲಿ, ನೀವು ಹೆಚ್ಚು ಬಾದಾಮಿ ಮತ್ತು ವಾಲ್ನಟ್ಗಳನ್ನು ತಿನ್ನಬೇಕು.
ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲಿ ಕಾಡುವ ಒತ್ತಡ ಕಡಿಮೆ ಮಾಡಲು ಆಯುರ್ವೇದದಲ್ಲಿ ತಿಳಿಸಿದ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ
ಅಲ್ಲದೆ, ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸಬೇಕು. ಅಂದರೆ ಹಾಲು, ಒಣ ಹಣ್ಣುಗಳು, ಸೊಪ್ಪು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಗರ್ಭಪಾತದ ನಂತರ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು, ಧಾನ್ಯಗಳು, ಓಟ್ಸ್, ಬ್ರೌನ್ ರೈಸ್ ಮತ್ತು ಕ್ವಿನೋವಾದಂತಹ ಆಹಾರಗಳನ್ನು ಸೇವನೆ ಮಾಡಬೇಕು. ಇದರ ಜೊತೆಗೆ ಕೋಳಿ ಮತ್ತು ಮೀನುಗಳನ್ನು ಕೂಡ ಸೇವಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Mon, 1 December 25