ಮಾನಸಿಕ ಒತ್ತಡ ಪ್ರತಿಯೊಬ್ಬರ ಜೀವನದಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ದೀರ್ಘಕಾಲದ ಒತ್ತಡವು ತೀವ್ರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತಲೆನೋವು ಮತ್ತು ಗ್ಯಾಸ್ಟ್ರಿಕ್ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಅನುಭವಿಸುತ್ತಾರೆ. ನೋವು, ಮೊಡವೆ, ತಲೆನೋವು, ಹೊಟ್ಟೆನೋವು, ನಿದ್ರಾಹೀನತೆ, ಅತಿಯಾಗಿ ತಿನ್ನುವುದು, ಅನೋರೆಕ್ಸಿಯಾ ಮತ್ತು ಕಡಿಮೆ ಲೈಂಗಿಕ ಬಯಕೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಒತ್ತಡ ಮುಖ್ಯ ಕಾರಣವಾಗಿದೆ.
ಒತ್ತಡವು ಹೆಚ್ಚಿದ ರಕ್ತದೊತ್ತಡ, ಹೃದಯ ಬಡಿತ ಮತ್ತು ಹೃದ್ರೋಗದ ಅಪಾಯವನ್ನು ಉಂಟುಮಾಡುತ್ತದೆ. ದೀರ್ಘಕಾಲದ ಒತ್ತಡವು ಮೂಡ್ ಡಿಸಾರ್ಡರ್‌ಗಳನ್ನು ಉಲ್ಬಣಗೊಳಿಸುತ್ತದೆ, ಮಾನಸಿಕ ಆರೋಗ್ಯ ಮತ್ತು ಮಹಿಳೆಯರ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಹಾಗೇ, ಒತ್ತಡವು ಬಂಜೆತನಕ್ಕೆ ಕೂಡ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸುತ್ತದೆ. ಒತ್ತಡವು ಕಾರ್ಟಿಸೋಲ್ ಬಿಡುಗಡೆಯ ಮೇಲೆ ಪರಿಣಾಮ ಬೀರುತ್ತದೆ, ಸ್ತ್ರೀ ಲೈಂಗಿಕ ಹಾರ್ಮೋನ್ ಆಗಿರುವ ಎಸ್ಟ್ರಾಡಿಯೋಲ್ ಉತ್ಪಾದನೆಯ ಮೇಲೆ ಕೂಡ ಪ್ರಭಾವ ಬೀರುತ್ತದೆ. ಇದಿಷ್ಟೇ ಅಲ್ಲದೆ, ಒತ್ತಡ ಹೆಚ್ಚಾದರೆ ಎದೆಹಾಲುಣಿಸುವ ತಾಯಂದಿರಲ್ಲಿ ಎದೆಹಾಲು ಕೂಡ ಉತ್ಪಾದನೆಯಾಗುವುದಿಲ್ಲ.
ಇದನ್ನೂ ಓದಿ: ಒತ್ತಡವೇ ನಿಮ್ಮ ಹೃದಯದ ಅತಿದೊಡ್ಡ ಶತ್ರು; ಯಾಕೆ ಗೊತ್ತಾ?
ಕೆಲಸ, ಕುಟುಂಬ, ಸಂಬಂಧಗಳು, ಹಣ ಅಥವಾ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದರಿಂದ ನಿಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಗುರುತಿಸುವುದು ಒತ್ತಡವನ್ನು ಕಡಿಮೆ ಮಾಡುವ ಮೊದಲ ಹಂತವಾಗಿದೆ. ಆರೋಗ್ಯಕರ ಒತ್ತಡ-ಬಸ್ಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಅನಾರೋಗ್ಯಕರ ನಿಭಾಯಿಸುವ ಕಾರ್ಯವಿಧಾನಗಳನ್ನು ತಪ್ಪಿಸುವುದು ಮತ್ತು ನಕಾರಾತ್ಮಕ ಸಂದರ್ಭಗಳು ಅಥವಾ ವ್ಯಕ್ತಿಗಳಿಂದ ದೂರವಿರುವುದರಿಂದ ಒತ್ತಡವನ್ನು ಕೊಂಚ ಕಡಿಮೆ ಮಾಡಿಕೊಳ್ಳಬಹುದು.
ಸಂಗೀತವನ್ನು ಆಲಿಸುವುದು, ಓದುವುದು ಅಥವಾ ಹವ್ಯಾಸಗಳನ್ನು ಅನುಸರಿಸುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ನಕಾರಾತ್ಮಕ ಆಲೋಚನೆಗಳಿಂದ ಗಮನವನ್ನು ಮರುನಿರ್ದೇಶಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ. ದೀರ್ಘ ಉಸಿರಾಟ, ಧ್ಯಾನ, ಯೋಗ ಮುಂತಾದ ವಿಶ್ರಾಂತಿ ತಂತ್ರಗಳು ಒತ್ತಡದ ಮಟ್ಟದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: World Mental Health Day 2023: ಇಂದು ವಿಶ್ವ ಮಾನಸಿಕ ಆರೋಗ್ಯ ದಿನ; ಇದರ ಇತಿಹಾಸ, ಈ ಬಾರಿಯ ಥೀಮ್ ಏನು?
ಸಾಕಷ್ಟು ನಿದ್ರೆ, ಸಮತೋಲಿತ ಆಹಾರ, ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸುವುದು ಮತ್ತು ಅಗತ್ಯವಿದ್ದಾಗ ಬೇಡವೆಂದು ಹೇಳಲು ಕಲಿಯುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಹೀಗಾಗಿ, ಒತ್ತಡವನ್ನು ನಿಯಂತ್ರಿಸುವುದು ಹೇಗೆಂಬುದನ್ನು ಕೂಡ ನಾವು ಕಲಿಯಬೇಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ