Control High BP: ಬಿಪಿ ಹೆಚ್ಚಾದರೆ, ತಕ್ಷಣವೇ ನಿಯಂತ್ರಣಕ್ಕೆ ಬರಲು ಈ ಸಲಹೆ ಪಾಲಿಸಿ

ಏಕಾಏಕಿ ಬಿಪಿ ಹೆಚ್ಚಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಬಿಪಿ ಹೆಚ್ಚಾದರೆ ಹೃದಯಾಘಾತ, ಬ್ರೈನ್ ಸ್ಟ್ರೋಕ್ ನಂತಹ ಅಪಾಯಕಾರಿ ಸ್ಥಿತಿಗಳು ಬರಬಹುದು ಎನ್ನುತ್ತಾರೆ ತಜ್ಞರು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತಕ್ಷಣವೇ ಎಚ್ಚರಿಸದಿದ್ದರೆ, ಪರಿಸ್ಥಿತಿ ಕೈ ಮೀರುವ ಅಪಾಯವಿದೆ. ಅದಕ್ಕಾಗಿಯೇ ಬಿಪಿ ಹೆಚ್ಚಾದ ತಕ್ಷಣ ಕೆಲವು ಸಲಹೆಗಳನ್ನು ಪಾಲಿಸುವುದು ಅಗತ್ಯ.

Control High BP: ಬಿಪಿ ಹೆಚ್ಚಾದರೆ, ತಕ್ಷಣವೇ ನಿಯಂತ್ರಣಕ್ಕೆ ಬರಲು ಈ ಸಲಹೆ ಪಾಲಿಸಿ

Updated on: Dec 05, 2023 | 7:15 PM

ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಸೇವನೆಯಲ್ಲಿನ ಬದಲಾವಣೆಯಿಂದ ರಕ್ತದೊತ್ತಡದ ಸಮಸ್ಯೆ ಹೆಚ್ಚುತ್ತಿದೆ. ಒಂದು ಕಾಲದಲ್ಲಿ 50 ವರ್ಷ ದಾಟಿದವರಲ್ಲಿ ಮಾತ್ರ ಬಿಪಿ ಸಮಸ್ಯೆ ಇತ್ತು. ಆದರೆ ಬದಲಾದ ಜೀವನಶೈಲಿಯಿಂದಾಗಿ ಈಗ 30 ವರ್ಷದವರೂ ಬಿಪಿಯಿಂದ ಬಳಲುತ್ತಿದ್ದಾರೆ. ಅಧಿಕ ಉಪ್ಪು ಸೇವನೆ ಮತ್ತು ಒತ್ತಡದ ಜೀವನವು ಹೆಚ್ಚುತ್ತಿರುವ ಬಿಪಿಗೆ ಕಾರಣವಾಗುತ್ತದೆ. ಆದರೆ ಏಕಾಏಕಿ ಬಿಪಿ ಹೆಚ್ಚಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಬಿಪಿ ಹೆಚ್ಚಾದರೆ ಹೃದಯಾಘಾತ, ಬ್ರೈನ್ ಸ್ಟ್ರೋಕ್ ನಂತಹ ಅಪಾಯಕಾರಿ ಸ್ಥಿತಿಗಳು ಬರಬಹುದು ಎನ್ನುತ್ತಾರೆ ತಜ್ಞರು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತಕ್ಷಣವೇ ಎಚ್ಚರಿಸದಿದ್ದರೆ, ಪರಿಸ್ಥಿತಿ ಕೈ ಮೀರುವ ಅಪಾಯವಿದೆ. ಅದಕ್ಕಾಗಿಯೇ ಬಿಪಿ ಹೆಚ್ಚಾದ ತಕ್ಷಣ ಕೆಲವು ಸಲಹೆಗಳನ್ನು ಪಾಲಿಸಿದರೆ ಬಿಪಿ ಬೇಗ ಕಂಟ್ರೋಲ್ ಆಗುತ್ತದೆ.

ದೀರ್ಘ ಉಸಿರು ತೆಗೆದುಕೊಳ್ಳಿ: 

ಬಿಪಿ ಹೆಚ್ಚುತ್ತಿದೆ ಎಂದು ಅನಿಸಿದ ತಕ್ಷಣ ದೀರ್ಘ ಉಸಿರು ತೆಗೆದುಕೊಳ್ಳಬೇಕು. ಈ ಉಸಿರನ್ನು ತೆಗೆದುಕೊಂಡು ಎರಡು ಸೆಕೆಂಡುಗಳ ಕಾಲ ಉಸಿರನ್ನು ಹಿಡಿದುಕೊಳ್ಳಿ. ನಿಧಾನವಾಗಿ ಉಸಿರಾಡಿ ಮತ್ತು ನಿಧಾನವಾಗಿ ಬಿಡಿ. ಎರಡು ಮೂರು ಬಾರಿ ಹೀಗೆ ಮಾಡುವುದರಿಂದ ಬಿಪಿ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ.

ವಿಶ್ರಾಂತಿ ಅಗತ್ಯ: 

ಯಾವುದೇ ಟೆನ್ಷನ್ ಆದ ತಕ್ಷಣ ಬಿಪಿ ಹೆಚ್ಚಾದರೆ ತಕ್ಷಣ ವಿಶ್ರಾಂತಿ ಪಡೆಯಬೇಕು. ನಿಮಗೆ ಬೆವರು ಬಂದರೂ ಅಥವಾ ತಲೆನೋವು ಬಂದರೂ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಇದಕ್ಕಾಗಿ ಹಾಸಿಗೆಯ ಮೇಲೆ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆಯಬೇಕು. ಮನಸ್ಸನ್ನು ಶಾಂತವಾಗಿಡಲು, ಸಂಗೀತವನ್ನು ಆಲಿಸಿ ಮತ್ತು ಪುಸ್ತಕವನ್ನು ಓದಿ.

ಇದನ್ನೂ ಓದಿ: ನಿಮ್ಮ ಮಗುವಿನ ಹಸಿವನ್ನು ಹೆಚ್ಚಿಸಲು ಇಲ್ಲಿವೆ 9 ಸಲಹೆಗಳು

ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ:

ಬಿಪಿ ಹೆಚ್ಚಿದೆ ಎಂದು ಅನಿಸಿದರೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಎಂದು ತಜ್ಞರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಸ್ನಾಯುಗಳು ಮತ್ತು ರಕ್ತನಾಳಗಳಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ರಕ್ತ ಸಂಚಾರ ನಿಧಾನವಾಗುತ್ತದೆ ಮತ್ತು ಬಿಪಿ ನಿಯಂತ್ರಣಕ್ಕೆ ಬರುತ್ತದೆ.

ಧೂಮಪಾನ ತ್ಯಜಿಸಿ: 

ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ತಕ್ಷಣ ಧೂಮಪಾನವನ್ನು ನಿಲ್ಲಿಸಬೇಕು. ಆಲ್ಕೋಹಾಲ್ ಮತ್ತು ಕೆಫೀನ್ ಅನ್ನು ತ್ಯಜಿಸಬೇಕು. ಒತ್ತಡವನ್ನು ಕಡಿಮೆ ಮಾಡಲು ವಿಶ್ರಾಂತಿ, ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us