Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ

| Updated By: ಆಯೇಷಾ ಬಾನು

Updated on: May 31, 2021 | 8:14 AM

ಬೆಳಿಗ್ಗೆ ಎದ್ದಾಗಿನಿಂದ ಮನೆಗೆಲಸ ಮಾಡಲು ಪ್ರಾರಂಭಿಸಿದ ಮಹಿಳೆಯ ಕೆಲಸ ರಾತ್ರಿಯಾದರೂ ಮುಗಿಯುವುದಿಲ್ಲ. ಹಾಗಿದ್ದಾಗ ದೇಹಕ್ಕೆ ಆಯಾಸ, ಬೇಡದ ಚಿಂತೆ ಕಾಡುವುದು ಸಹಜ. ನಿಮಗಾಗಿಯೇ ಒಂದಿಷ್ಟು ಸಮಯವನ್ನು ಕಾಯ್ದಿರಿಸಿಕೊಳ್ಳಿ. ಒಂದಿಷ್ಟು ಸಲಹೆಗಳು ಇಲ್ಲಿವೆ.

Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ
ಸಾಂದರ್ಭಿಕ ಚಿತ್ರ
Follow us on

ಮಹಿಳೆಯರಿಗೆ ಮನೆಯಲ್ಲಿ ದಿನಪೂರ್ತಿ ಕೆಲಸ. ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮಯವೇ ಇಲ್ಲ. ಅವರಿಗಾಗಿಯೇ ಒಂದಷ್ಟು ಸಮಯ ಬೇಕು. ಜತೆಗೆ ಸಲಹೆಗಳೂ ಬೇಕು. ಬೆಳಿಗ್ಗೆ ಎದ್ದಾಗಿನಿಂದ ಮನೆಗೆಲಸ ಮಾಡಲು ಪ್ರಾರಂಭಿಸಿದ ಮಹಿಳೆಯ ಕೆಲಸ ರಾತ್ರಿಯಾದರೂ ಮುಗಿಯುವುದಿಲ್ಲ. ಹಾಗಿದ್ದಾಗ ದೇಹಕ್ಕೆ ಆಯಾಸ, ಬೇಡದ ಚಿಂತೆ ಕಾಡುವುದು ಸಹಜ. ನಿಮಗಾಗಿಯೇ ಒಂದಿಷ್ಟು ಸಮಯವನ್ನು ಕಾಯ್ದಿರಿಸಿಕೊಳ್ಳಿ. ಒಂದಿಷ್ಟು ಸಲಹೆಗಳು ಇಲ್ಲಿವೆ.

ಯಾವ ರೀತಿಯ ಆಹಾರ ಪದಾರ್ಥ ದೇಹಕ್ಕೆ ಒಗ್ಗುತ್ತದೆ ಎಂಬುದನ್ನು ತಿಳಿಯಿರಿ
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಂತೂ ಆರೋಗ್ಯದ ಸುರಕ್ಷತೆ ತುಂಬಾ ಮುಖ್ಯ. ಯಾವ ಪದ್ಧತಿಯ ಆಹಾರ ವ್ಯವಸ್ಥೆ ಒಗ್ಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಪ್ರೋಟೀನ್​ಯುಕ್ತ ಆಹಾರ, ಜೀವಸತ್ವಗಳು, ಖನಿಜಗಳು, ಫೈಬರ್ ಅಂಶ ಹೊಂದಿರುವ ಆಹಾರ ವ್ಯವಸ್ಥೆಯನ್ನು ರೂಢಿಯಲ್ಲಿಟ್ಟುಕೊಳ್ಳಿ. ದ್ವಿದಳ ಧಾನ್ಯ, ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಇದರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ಮತ್ತು ಮನಸ್ಸನ್ನು ಸದೃಢವಾಗಿರಿಸಿಕೊಳ್ಳಲು ಸಹಾಯಕವಾಗುತ್ತದೆ.

ಪ್ರತಿನಿತ್ಯ ವ್ಯಾಯಾಮ ಮಾಡಿ
ಪ್ರತಿನಿತ್ಯ ಕೆಲಸ ಮಾಡುವ ಮಹಿಳೆಯರಿಗೆ ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಬಹುದು. ಆದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ 1 ಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ದೇಹದ ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದಿನನಿತ್ಯ ಕೆಲಸ ಮಾಡುವುದು ದೇಹದ ಅಸ್ವಸ್ಥತೆಗೆ ಕಾರಣವಾಗಬಹುದು. ಇದರಿಂದ ಮುಕ್ತಿ ಹೊಂದಲು ಉತ್ತಮ ಮಾರ್ಗವೆಂದರೆ ವ್ಯಾಯಾಮ. ಜಾಗಿಂಗ್​ ಮಾಡುವುದು, ಜೋರಾಗಿ ನಡೆಯುವುದು, ವಾಕಿಂಗ್​, ಪ್ರಾಣಾಯಾಮ, ಧ್ಯಾನದಂತಹ ಯೋಗ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡಿಕೊಳ್ಳುವುದರ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು. ಜತೆಗೆ ಅನಗತ್ಯ ಚಿಂತೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಮಾನಸಿಕ ಆರೋಗ್ಯದತ್ತ ಗಮನಹರಿಸಿ
ಸಾಂಕ್ರಾಮಿಕ ರೋಗದ ಪ್ರಸ್ತುತ ಸಮಯ ಪ್ರತಿ ನಿಮಿಷವನ್ನೂ ಚಿಂತೆಗೀಡು ಮಾಡುತ್ತಿದೆ. ಈ ಸಮಯದಲ್ಲಿ ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನೆ ಮನಸ್ಸಿಗೆ ಘಾಸಿ ಮಾಡುತ್ತಿರಬಹುದು. ಈ ಸಮಯದಲ್ಲಿ ಅನಗತ್ಯ ಚಿಂತೆಗಳನ್ನು ಬಿಟ್ಟು ಧೈರ್ಯದಿಂದ ಇರುವುದು ಮುಖ್ಯ. ಇದಕ್ಕೆ ಮಾನಸಿಕ ಸದೃಢತೆ ಅತ್ಯವಶ್ಯಕ. ಹಾಗಿರುವಾಗ ಬೇಡದ ಚಿಂತೆಗಳಿಂದ ಹೊರಬರಲು ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಚಿತ್ರ ಬಿಡಿಸುವುದು ನಿಮಗಿಷ್ಟವಾದ ರಂಗೋಲಿ ಬಿಡಿಸುವುದರತ್ತ ಹೆಚ್ಚು ಸಮಯ ಕಳೆಯಿರಿ. ಇಲ್ಲವೇ ನಿಮಗಿಷ್ಟವಾದ ವ್ಯಕ್ತಿಯೊಡನೆ ಸಮಯ ಕಳೆಯಿರಿ. ಮನಸ್ಸು ಖುಷಿಯಾದಷ್ಟು ಮಾನಸಿಕ ನೆಮ್ಮದಿ ಹೆಚ್ಚಾಗುವುದು. ಇದರಿಂಗ ಅನಗತ್ಯ ಚಿಂತೆ ದೂರವಾಗುವುದು.

ಇದನ್ನೂ ಓದಿ: 

Health Tips: ಕೊರೊನಾ ಸೋಂಕು​ ಕರುಳಿಗೆ ಪರಿಣಾಮ ಬೀರುತ್ತದೆಯೇ? ಹೀಗಿದೆ ತಜ್ಞರ ಸಲಹೆಗಳು

Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?