ಕೊರೊನಾ ಸೋಂಕು ಇರುವಾಗ ಬೇರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದೆ? ಸೋಂಕು ತಜ್ಞರು ಹೇಳೋದೇನು?

|

Updated on: May 31, 2021 | 10:22 AM

Surgery for Covid patients: ಸೋಂಕು ಇದ್ದಾಗಲೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಕೊರೊನಾದಿಂದ ಶೀಘ್ರವೇ ಗುಣಮುಖವಾಗಬಹುದು. ಆದರೆ ಶಸ್ತ್ರ ಚಿಕಿತ್ಸೆ ಅನಿವಾರ್ಯ, ಜೀವಕ್ಕೆ ಅಪಾಯವಿದೆ ಅನ್ನಿಸಿದರೆ ಸೋಂಕು ತಜ್ಞ ವೈದ್ಯರ ನಿಗಾದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.

ಕೊರೊನಾ ಸೋಂಕು ಇರುವಾಗ ಬೇರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದೆ? ಸೋಂಕು ತಜ್ಞರು ಹೇಳೋದೇನು?
ಕೊರೊನಾ ಸೋಂಕು ಇರುವಾಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬಹುದೆ? ಸಾಂಕ್ರಾಮಿಕ ಸೋಂಕು ತಜ್ಞರು ಹೇಳೋದೇನು?
Follow us on

ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖ ಆದ ಬಳಿಕ ಸೋಂಕಿತರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಬಗ್ಗೆ ಐಸಿಎಂಆರ್‌ ಉಚಿತ ಸಲಹೆ ನೀಡಿದೆ. ಕೊರೊನಾ ಸೋಂಕಿನಿಂದ ಗುಣಮುಖ ಆದ ಬಳಿಕ ಸೋಂಕಿತರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು 6 ವಾರ ಕಾಯುವುದು ಉತ್ತಮ ಎಂದು ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯ, ಸಾಂಕ್ರಾಮಿಕ ಸೋಂಕು ತಜ್ಞ ವೈದ್ಯ ಸಂಜಯ್ ಪೂಜಾರಿ ಉಚಿತ ಸಲಹೆ ನೀಡಿದ್ದಾರೆ. ಸರ್ಜರಿ ಮಾಡಿಸಿಕೊಳ್ಳುವವರಿಗೆ ಐಸಿಎಂಆರ್‌ (Indian Council of Medical Research) ವತಿಯಿಂದ ಈ ಸಲಹೆ ಕೇಳಿಬಂದಿದೆ.

ತುರ್ತಾಗಿ ಸರ್ಜರಿ ಆಗುವುದು ಬೇಡ ಎಂಬ ಪರಿಸ್ಥಿತಿಯಿದ್ದರೆ ಶಸ್ತ್ರ ಚಿಕಿತ್ಸೆಯನ್ನು ಮುಂದೂಡಿ ಕೊರೊನಾದಿಂದ ಗುಣಮುಖ ಆದ 102 ದಿನದೊಳಗೆ ಪದೇ ಪದೇ ಆರ್.ಟಿ ಪಿಸಿಆರ್ ಪರೀಕ್ಷೆ ಬೇಡ (RT-PCR/antigen tests). ಕೊರೊನಾ ಗುಣಮುಖ ಬಳಿಕವೂ ದೇಹದಲ್ಲಿ ಸತ್ತ ವೈರಸ್ ಕಣಗಳಿರುತ್ತವೆ. ವೈದ್ಯರು ಕೊರೊನಾ ಗುಣಮುಖ ಆದವರಿಗೆ 6 ವಾರದ ಬಳಿಕ ಸರ್ಜರಿ ಮಾಡುವುದನ್ನ ಪರಿಗಣಿಸಬೇಕು. ಕೊರೊನಾ ಸೋಂಕು ಮತ್ತೆ ತಗುಲುವುದು 102 ದಿನದ ಬಳಿಕ ಖಚಿತವಾಗುತ್ತೆ. ಹೀಗಾಗಿ 102 ದಿನದೊಳಗೆ ಮತ್ತೆ ಮತ್ತೆ ಕೊರೊನಾ ಪರೀಕ್ಷೆ ಸೂಕ್ತವಲ್ಲ ಎಂದು ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯ, ಸಾಂಕ್ರಾಮಿಕ ಸೋಂಕು ತಜ್ಞ ವೈದ್ಯ ಸಂಜಯ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ದೇಹದಲ್ಲಿ ಉಳಿದುಹೋಗುವ ಸತ್ತ ವೈರಸ್ ಕಣಗಳು ಸೋಂಕನ್ನು ಮತ್ತೆ ಪಸರಿಸುತ್ತದೆ ಅಂತಲ್ಲ; ಆದರೆ ಅದರಿಂದ ತಪ್ಪಾಗಿ ಪಾಸಿಟೀವ್ ಬರದಿ ಬರುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಈ ಮುನ್ನೆಚ್ಚರಿಕೆ ಎಂದು ಸಾಂಕ್ರಾಮಿಕ ಸೋಂಕು ತಜ್ಞ ವೈದ್ಯ ಸಂಜಯ್ ಪೂಜಾರಿ ವಿಶ್ಲೇಷಿಸಿದ್ದಾರೆ. ಜೊತೆಗೆ ಹೀಗೆ ಮಾಡುವುದರಿಂದ ಅಂದ್ರೆ ಸೋಂಕು ಇದ್ದಾಗಲೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಕೊರೊನಾದಿಂದ ಶೀಘ್ರವೇ ಗುಣಮುಖವಾಗಬಹುದು. ಆದರೆ ಶಸ್ತ್ರ ಚಿಕಿತ್ಸೆ ಅನಿವಾರ್ಯ, ಜೀವಕ್ಕೆ ಅಪಾಯವಿದೆ ಅನ್ನಿಸಿದರೆ ಸೋಂಕು ತಜ್ಞ ವೈದ್ಯರ ನಿಗಾದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.

(dont go for immediate surgery for Covid 19 patients wait for 6 weeks says ICMR and infectious diseases expert Sanjay Pujari)