Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?

ಕಲ್ಲು ಸಕ್ಕರೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಕಲ್ಲು ಸಕ್ಕರೆಗೆ ಸಂಬಂಧಿಸಿದಂತೆಯೇ ಗುಜರಾತ್​ನ ಆಯುರ್ವೇದ ತಜ್ಞೆ ಡಾ.ದೀಕ್ಷಾ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?
ಕಲ್ಲುಸಕ್ಕರೆ
Follow us
shruti hegde
|

Updated on:May 26, 2021 | 12:55 PM

ದೇವಾಲಯಗಳಲ್ಲಿ ದೇವರಿಗೆ ಅರ್ಪಿಸಲು ಸಾಮಾನ್ಯವಾಗಿ ಕಲ್ಲುಸಕ್ಕರೆಯನ್ನು ಬಳಸುತ್ತಾರೆ. ಸದಾಕಾಲ ಮೌತ್​ ಫ್ರೆಶ್​ ಆಗಿರಲು ಮನೆಗಳಲ್ಲಿ ಹೆಚ್ಚಾಗಿ ಕಲ್ಲುಸಕ್ಕರೆಯನ್ನು ಸೇವಿಸುತ್ತಾರೆ. ಇಷ್ಟೇ ಅಲ್ಲದೇ ಕಲ್ಲು ಸಕ್ಕರೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಕಲ್ಲು ಸಕ್ಕರೆಗೆ ಸಂಬಂಧಿಸಿದಂತೆಯೇ ಗುಜರಾತ್​ನ ಆಯುರ್ವೇದ ತಜ್ಞೆ ಡಾ.ದೀಕ್ಷಾ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ಕಲ್ಲುಸಕ್ಕರೆ ಕಬ್ಬಿಣದ ಅಂಶ ಹೊಂದಿರುವ ಸಿಹಿ ಪದಾರ್ಥವಾಗಿದೆ. ರಾಸಾಯನಿಕದಿಂದ ಕಲಬೆರಿಕೆ ಆಗದೇ ಶುದ್ಧ ಸಿಹಿ ಅಂಶ ಹೊಂದಿರುವ ಸಕ್ಕರೆಯ ರೂಪವಿದು. ಆಯುರ್ವೇದದ ಪ್ರಕಾರ, ಇದು ಔಷಧೀಯ ಗುಣಗಳನ್ನು ಹೊಂದಿದೆ’ ಎಂದು ಡಾ.ದೀಕ್ಷಾ ತನ್ನ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದೃಷ್ಟಿ: ಕಣ್ಣುಗಳಿಗೆ ಒಳ್ಳೆಯದು ಆಯಾಸ ಅಥವಾ ದಣಿವಾರಿಸಿಕೊಳ್ಳಬಹುದು ರಕ್ತದಲ್ಲಿ ಆಮ್ಲ ಮಟ್ಟವನ್ನು ಸಮತೋನಗೊಳಿಸುತ್ತದೆ ವಾಂತಿ ಅಥವಾ ವಾಕರಿಕೆ ಲಕ್ಷಣಗಳಿದ್ದಾಗ ಕಲ್ಲುಸಕ್ಕರೆಯನ್ನು ಸೇವಿಸಬಹುದು

‘ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಮಿತವಾಗಿ ಬಳಸಿ. ದೇಹಕ್ಕೆ ಸಿಹಿ ಅಂಶ ಅತಿಯಾದರೂ ಅನಾರೋಗ್ಯ ಉಂಟಾಗುತ್ತದೆ’ ಎಂದು ವೈದ್ಯರು ಸೂಚನೆ ನೀಡಿದ್ದಾರೆ.

ಮಿಶ್ರಿತವಾಗಿ ಕಲ್ಲು ಸಕ್ಕರೆಯನ್ನು ಬಳಸಬಹುದೇ? ಕಲ್ಲು ಸಕ್ಕರೆಯನ್ನು ಪಾನಕದಲ್ಲಿ ಬೆರೆಸಿ ಸೇವಿಸುವುದರ ಮೂಲಕ, ಜ್ಯೂಸ್​ ಮಾಡಿ ಕುಡಿಯುವ ಮೂಲಕ ಇದರಿಂದ ಪ್ರಯೋಜನವನ್ನು ಪಡೆಯಬಹುದು. ಹಾಗೂ ಕೆಮ್ಮು, ಗಂಟಲು ನೋವು ನಿವಾರಣೆಗೆ ಕಲ್ಲು ಸಕ್ಕರೆ ಸೇವನೆ ಉತ್ತಮ ಮಾರ್ಗ. ಅದಲ್ಲದೇ ಹಾಲುಣಿಸುವ ತಾಯಂದಿರಿಗೆ ಕಲ್ಲುಸಕ್ಕರೆ ಒಳ್ಳೆಯದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಆದರೆ ಮುಖ್ಯವಾದ ಅಂಶವೆಂದರೆ, ಮಧುಮೇಹ, ಹಾರ್ಮೋನುಗಳ ತೊಂದರೆ, ಹೆಚ್ಚು ಕೊಲೆಸ್ಟ್ರಾಲ್​, ಅಸ್ವಸ್ಥತೆಯಿಂದ ಬಳಲುತ್ತಿರುವವರು ಸಕ್ಕರೆ ಅಂಶ ಹೊಂದಿರುವ ಆಹಾರ ಪದಾರ್ಥವನ್ನು ಸೇವಿರಬಾರದು ಎಂದು ಸೂಚನೆ ನೀಡಿದ್ದಾರೆ.

ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ ಮಿತವಾಗಿರುತ್ತದೆ. ಸಕ್ಕರೆ ಮಟ್ಟ ಸಾಮಾನ್ಯವಾಗಿದ್ದರೆ ಮಾತ್ರ ಜೇನುತುಪ್ಪ ಮತ್ತು ಕಲ್ಲು ಸಕ್ಕರೆಯನ್ನು ಸೇವಿಸಿ. ಇಲ್ಲವಾದಲ್ಲಿ ಅತಿ ಸಿಹಿಯಾದ ಆಹಾರ ಪದಾರ್ಥ ಸೇವನೆಯನ್ನು ಆದಷ್ಟು ತಪ್ಪಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಮೂರು ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ದೂರ ಮಾಡುವ ಕಾಮಕಸ್ತೂರಿ ಬೀಜಗಳ ಬಳಕೆ ಹೇಗೆ?

Published On - 12:52 pm, Wed, 26 May 21