ಬೇಸಿಗೆಯಲ್ಲಿ ದೇಹದ ಉಷ್ಣಾಂಶ ದೂರ ಮಾಡುವ ಕಾಮಕಸ್ತೂರಿ ಬೀಜಗಳ ಬಳಕೆ ಹೇಗೆ?

Kamakakasturi is a magical seed which reduces body temperature during summer and keep your body cool, healthy. ಎರಡು ಚಮಚೆ ಕಾಮಕಸ್ತೂರಿಯನ್ನು ನೀರಿನಲ್ಲಿ 15 ನಿಮಿಷ ನೆನಸಿ ಕುಡಿಯುವುದರಿಂದ ದೇಹದ ಬೊಜ್ಜು ಕಡಿಮೆಯಾಗುತ್ತದೆ. ಇನ್ನು ನಿತ್ಯವು ಇದನ್ನು ಸೇವಿಸುವುದರಿಂದ ಉಷ್ಣಾಂಶದಿಂದ ಉಂಟಾಗುವಂತಹ ನಾನಾ ಕಾಯಿಲೆಗಳು ದೂರವಾಗುತ್ತದೆ.

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ದೂರ ಮಾಡುವ ಕಾಮಕಸ್ತೂರಿ ಬೀಜಗಳ ಬಳಕೆ ಹೇಗೆ?
ಕಾಮಕಸ್ತೂರಿ ಬೀಜ
Follow us
preethi shettigar
| Updated By: Skanda

Updated on: Mar 13, 2021 | 9:42 AM

ಕಸಕಸೆ ಬೀಜ ಎಂದರೆ ಅದರ ಉಪಯೋಗ ಏನು ಎಂದು ಹೇಳುವ ಮೊದಲು ಹಲವರಲ್ಲಿ ಹಾಗೆಂದರೆ ಏನು ಎನ್ನುವ ಮಾತು ಹೊರಬರುತ್ತದೆ ಇದಕ್ಕೆ ಕಾರಣ ಇದರ ವಿಶೇಷತೆಯ ಬಗ್ಗೆ ತಿಳಿದವರ ಸಂಖ್ಯೆ ಕಡಿಮೆ. ಸಾಮಾನ್ಯವಾಗಿ ಕಸಕಸೆಯನ್ನು ಕಾಮಕಸ್ತೂರಿ, ಸಬ್ಚ, ಫಲೋಡಾ ಸೀಡ್ಸ್ ಎಂದು ಕರೆಯಲಾಗುತ್ತದೆ. ಈ ಬೀಜವನ್ನು ಹೀಗೆ ತಿನ್ನುವುದಕ್ಕಿಂತ ಇದನ್ನು ನೀರಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ನೆನೆಸಿ ತಿನ್ನುವುದು ವಾಡಿಕೆ. ಕಸಕಸೆಯನ್ನು ಆಯುರ್ವೇದಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲೂ ಇದನ್ನು ಬಳಸಿ ಜ್ಯೂಸ್ ಮತ್ತು ಐಸ್‌ಕ್ರೀಮ್‌ಗಳನ್ನು ಮಾಡುತ್ತಾರೆ ಎನ್ನುವುದು ವಿಶೇಷ. ಹೀಗಾಗಿ ಆರೋಗ್ಯದ ನೆಲೆಗಟ್ಟಿನಲ್ಲಿ ಕಸಕಸೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.

ಕಸಕಸೆ ಆರೋಗ್ಯಕ್ಕೆ ಸತ್ವಯುತವಾದ ಪದಾರ್ಥ: ಸಾಮಾನ್ಯವಾಗಿ ಕಸಕಸೆ ದೇಹಕ್ಕೆ ತಂಪು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ರೀತಿ ನೀರಿನಲ್ಲಿ ಹಾಕಿ ಕುಡಿಯುವ ಕಸಕಸೆಯಿಂದ ಹಲವಾರು ಲಾಭಗಳಿವೆ ಎನ್ನುವುದನ್ನು ತಿಳಿಯುವುದು ಅಗತ್ಯ. ಎರಡು ಚಮಚ ಕಾಮಕಸ್ತೂರಿಯನ್ನು ನೀರಿನಲ್ಲಿ 15 ನಿಮಿಷ ನೆನಸಿ ಕುಡಿಯುವುದರಿಂದ ದೇಹದ ಬೊಜ್ಜು ಕಡಿಮೆಯಾಗುತ್ತದೆ. ಇನ್ನು ನಿತ್ಯವು ಇದನ್ನು ಸೇವಿಸುವುದರಿಂದ ಉಷ್ಣಾಂಶದಿಂದ ಉಂಟಾಗುವಂತಹ ನಾನಾ ಕಾಯಿಲೆಗಳು ದೂರವಾಗುತ್ತದೆ.

ಮಲಬದ್ಧತೆ, ಹೊಟ್ಟೆ ಉಬ್ಬರ, ಹೊಟ್ಟೆ ಉರಿಯಂತಹ ಸಮಸ್ಯೆಗಳು ದೂರವಾಗುತ್ತದೆ. ಕಸಕಸೆ ಬೀಜವು ದೇಹದಲ್ಲಿ ಇರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಕಾರಣದಿಂದಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ. ಇನ್ನು ನಿತ್ಯವೂ ಇದನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಮಹಾ ಮಾರಿ ಕಾಯಿಲೆಗಳಿಂದಲೂ ಮುಕ್ತಿ ದೊರೆಯುತ್ತದೆ. ಈ ಬೀಜದಲ್ಲಿ ಒಮೇಗಾ 3 ಫ್ಯಾಟ್ ಮತ್ತು ನಾರಿನಂಶ ಇರುತ್ತದೆ. ಈ ಕಾರಣದಿಂದಲೇ ಈ ಬೀಜವನ್ನು ತಿಂದಲ್ಲಿ ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಹೇರಳವಾಗಿ ಸಿಗುತ್ತದೆ. ಸಕ್ಕರೆ ಕಾಯಿಲೆಯನ್ನು ಸಹ ಕಸಕಸೆ ಹಿಡಿತಕ್ಕೆ ತರುತ್ತದೆ. ಇನ್ನೂ ಬಿಪಿ ಮತ್ತು ರಕ್ತದ ಒತ್ತಡ ಜಾಸ್ತಿ ಇರುವವರು ಇದನ್ನು ಕುಡಿಯುವುದು ಒಳಿತು. ಆದರೆ ರಕ್ತದ ಒತ್ತಡ ಕಡಿಮೆ ಇರುವವರು ಇದನ್ನು ಸೇವಿಸಬಾರದು.

ಕಾಮಕಸ್ತೂರಿ ಹೂವು ಮತ್ತು ಎಲೆ: ಕಾಮಕಸ್ತೂರಿ ಬೀಜ ಎಷ್ಟು ಉಪಯುಕ್ತವೋ ಅಷ್ಟೇ ಹೂವು ಕೂಡ ಉಪಕಾರಿಯಾಗಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಅಲಂಕಾರ ಮಾಡಲು ಹೂವಿನ ಮಧ್ಯದಲ್ಲಿ ಇಟ್ಟು ಇದನ್ನು ಕಟ್ಟುತ್ತಾರೆ. ಈ ಹೂವು ಹೆಚ್ಚು ಸುವಾಸನೆ ಭರಿತವಾಗಿರುತ್ತದೆ. ಇನ್ನು ಕಾಮಕಸ್ತೂರಿಯು ಹೆಚ್ಚಾಗಿ ತುಳಸಿ ಗಿಡವನ್ನು ಹೋಲುತ್ತದೆ. ಇದರ ಎಲೆಗಳು ತುಳಸಿಯ ಎಲೆಗಳಂತೆಯೇ ಇರುತ್ತದೆ. ಸ್ವಲ್ಪ ಅಗಲವಾದ ಎಲೆಗಳನ್ನು ಹೊಂದಿದ್ದು, ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ.

ಕಸಕಸೆ ಹೂವನ್ನು ಚೆನ್ನಾಗಿ ಕುದಿಸಿ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಅಜೀರ್ಣತೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುತ್ತದೆ. ಇನ್ನೂ ಕಸಕಸೆಯ ಎಲೆಯನ್ನು ಚೆನ್ನಾಗಿ ಜಜ್ಜಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಗಂಟಲು ನೋವು ಮತ್ತು ಕೆಮ್ಮು ದೂರವಾಗುತ್ತದೆ. ಕಸಕಸೆಯ ನಾಲ್ಕೈದು ಎಲೆಯನ್ನು ನೀರಿನಲ್ಲಿ ಕುದಿಸಿ ಜೇನುತುಪ್ಪ ಹಾಕಿ ಕುಡಿಯುವುದರಿಂದ ಜ್ವರ ಕೂಡ ಕಡಿಮೆಯಾಗುತ್ತದೆ.

ಕಸಕಸೆ ಸ್ವೀಕರಿಸುವುದು ಹೇಗೆ? ಒಂದು ಚಮಚ ಕಸಕಸೆ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಹಾಕಿದರೆ ಬೆಳಿಗ್ಗೆ ಕಸಕಸೆ ಬೀಜಗಳು ಚೆನ್ನಾಗಿ ನೆನೆದು ಅಂಟಂಟಾಗುತ್ತದೆ. ಇದಕ್ಕೆ ಪುಡಿ ಮಾಡಿದ ಕಲ್ಲು ಸಕ್ಕರೆಯನ್ನು ಹಾಕಿ ಕುಡಿಯುವುದರಿಂದ ಮಲಬದ್ಧತೆ ಹಾಗೂ ಮೂಲವ್ಯಾಧಿ ಕಡಿಮೆಯಾಗುತ್ತದೆ. ಇನ್ನು ಲಿಂಬೆಹಣ್ಣಿನ ಜ್ಯೂಸ್ ಜೊತೆಗೂ ಸ್ವೀಕರಿಸುವುದರಿಂದ ದೇಹಕ್ಕೆ ಒಳಿತು. ಬಿಸಿಲ ಧಗೆ ಏರುತ್ತಿದ್ದಂತೆ ದೇಹದಲ್ಲಿ ಸಹಜವಾಗಿ ನೀರಿನ ಅಂಶ ಕಡಿಮೆಯಾಗಿ ಸುಸ್ತು, ನಿರ್ಜಲೀಕರಣ, ವಿಪರೀತ ದಾಹ, ಎಸಿಡಿಟಿ, ಉರಿಮೂತ್ರ ಇತ್ಯಾದಿ ಸಮಸ್ಯೆಗಳು ಉಂಟಾಗುತ್ತದೆ ಇವುಗಳಿಗೂ ಕೂಡ ಕಸಕಸೆ ರಾಮಬಾಣವಾಗಿದೆ.

ಇದನ್ನೂ ಓದಿ: ಮುಖದ ಮೇಲೆ ಮೊಡವೆ ಏಳದಂತೆ ನೋಡಿಕೊಳ್ಳಲು ಇಲ್ಲಿದೆ ಸುಲಭ ಟಿಪ್ಸ್​

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್