ಮುಖದ ಮೇಲೆ ಮೊಡವೆ ಏಳದಂತೆ ನೋಡಿಕೊಳ್ಳಲು ಇಲ್ಲಿದೆ ಸುಲಭ ಟಿಪ್ಸ್
ಮೊಡವೆ ಆಗದಂತೆ ನೋಡಿಕೊಳ್ಳಲು ಅನೇಕರು ನಾನಾ ಕ್ರೀಮ್ಗಳನ್ನು ಬಳಕೆ ಮಾಡುತ್ತಾರೆ. ಕೆಲ ಕ್ರೀಮ್ಗಳು ನಿಮ್ಮ ದೇಹಕ್ಕೆ ತೊಂದರೆ ಕೂಡ ಉಂಟು ಮಾಡಬಹುದು. ಅಲರ್ಜಿ ಕೂಡ ಉಂಟಾಗಬಹುದು. ಹಾಗಾದರೆ, ನೈಸರ್ಗಿಕವಾಗಿ ಮೊಡವೆ ಹೋಗಿಸೋದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಯಾವುದೋ ವಿಶೇಷ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳಬೇಕಿರುತ್ತದೆ. ಈ ಸಂದರ್ಭದಲ್ಲೇ ನಿಮ್ಮ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ಇದಕ್ಕಿಂತಲೂ ಬೇಸರ ಹಾಗೂ ಸಿಟ್ಟು ಬರುವ ವಿಚಾರ ಮತ್ತೊಂದಿರಲಿದೆಯೇ? ಹೀಗಾಗಿ, ಮೊಡವೆ ಆಗದಂತೆ ನೋಡಿಕೊಳ್ಳಲು ಅನೇಕರು ನಾನಾ ಕ್ರೀಮ್ಗಳನ್ನು ಬಳಕೆ ಮಾಡುತ್ತಾರೆ. ಕೆಲ ಕ್ರೀಮ್ಗಳು ನಿಮ್ಮ ದೇಹಕ್ಕೆ ತೊಂದರೆ ಉಂಟು ಮಾಡಬಹುದು. ಅಲರ್ಜಿ ಕೂಡ ಆಗಬಹುದು. ಹಾಗಾದರೆ, ನೈಸರ್ಗಿಕವಾಗಿ ಮೊಡವೆಗೆ ಕಡಿವಾಣ ಹಾಕುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹೆಚ್ಚು ನೀರು ಕುಡಿಯಿರಿ: ಹೆಚ್ಚು ಹೆಚ್ಚು ನೀರು ಕುಡಿಯವುದರಿಂದಲೂ ನೀವು ಮೊಡವೆಯನ್ನು ನಿಯಂತ್ರಿಸಬಹುದು. ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಪೋಷಣೆ ಹಾಗೂ ಆಮ್ಲಜನಕ ಸಿಗುತ್ತದೆ. ಇವು ಮೊಡವೆಕಾರಕಗಳನ್ನು ನಿಯಂತ್ರಿಸುತ್ತವೆ.
ಆಲಿವ್ ಆಯಿಲ್ ಲೋಷನ್: ಆಲಿವ್ ಆಯಿಲ್ ಲೋಷನ್ ಬಳಕೆಯಿಂದಲೂ ಮೊಡವೆ ಕಡಿಮೆ ಆಗಲಿದೆ ಎನ್ನುತ್ತಾರೆ ತಜ್ಞರು. ಈ ಲೋಷನ್ ರಂಧ್ರಗಳನ್ನು ಮುಚ್ಚದೆ ಚರ್ಮದೊಳಗೆ ಇಳಿಯುತ್ತದೆ. ಇದರಿಂದ ಚರ್ಮವು ಉಸಿರಾಡಲು ಅನುವಾಗುತ್ತದೆ ಮತ್ತು ಇದು ಮೊಡವೆಗಳು ಏಳದಂತೆ ತಡೆಯಲು ಸಹಾಯ ಮಾಡುತ್ತದೆ.
ನಿಂಬೆ ಜ್ಯೂಸ್: ನಿಂಬೆ ರಸದಿಂದ ಮಾಡಿದ ಜ್ಯೂಸ್ ದೇಹದಲ್ಲಿರುವ ಆಮ್ಲೀಯ ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಸಿಟ್ರಿಕ್ ಆಮ್ಲದೊಂದಿಗೆ ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ಇದರಿಂದ ಚರ್ಮದ ಮೇಲಾಗುವ ಮೊಡವೆ ಕಡಿಮೆ ಆಗುತ್ತದೆ.
ಕಲ್ಲಂಗಡಿ: ಕಲ್ಲಂಗಡಿ ಹಣ್ಣನ್ನು ಅನೇಕರು ಇಷ್ಟಪಡುತ್ತಾರೆ. ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಕಲ್ಲಂಗಡಿ ತುಂಬಾ ಉಪಯುಕ್ತವಾಗಿದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಇದು ಚರ್ಮವನ್ನು ಕಾಂತಿಯುತವಾಗಿರಿಸುವುದಲ್ಲದೆ, ವಿಕಿರಣಗಳಿಂದ ತಡೆಯುತ್ತದೆ.
ಹಾಲಿನ ಉತ್ಪನ್ನ: ಸಮತೋಲಿತ ಆಹಾರವನ್ನು ಸೇವಿಸುವುದು ಆರೋಗ್ಯಕರ ಚರ್ಮವನ್ನು ಹೊಂದಲು ಉತ್ತಮ ಮಾರ್ಗ. ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳು ವಿಟಮಿನ್ ಎ ಹೊಂದಿರುತ್ತದೆ. ವಿಟಾಮಿನ್ ಎ ಬಳಕೆಯಿಂದ ಚರ್ಮದ ಆರೋಗ್ಯ ಉತ್ತಮವಾಗುತ್ತದೆ.
ಮೊಸರು: ಮೊಸರಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಹೀಗಾಗಿ, ಮೊಡವೆಕಾರಕಗಳನ್ನು ಮೊಸರು ಸೇವನೆಯಿಂದ ನಾಶಮಾಡಬಹುದು.
ವಾಲ್ನಟ್ಸ್: ಇದನ್ನು ನಿಯಮಿತವಾಗಿ ತಿನ್ನುವುದರಿಂದ ಚರ್ಮದ ಮೃದುತ್ವ ಹೆಚ್ಚುತ್ತದೆ. ವಾಲ್ನಟ್ ಎಣ್ಣೆ ಲಿನೋಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಚರ್ಮದ ರಚನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸೇಬು: ಸೇಬುಗಳು ಸಾಕಷ್ಟು ಪೆಕ್ಟಿನ್ ಹೊಂದಿರುತ್ತವೆ. ಪೆಕ್ಟಿನ್ ಮೊಡವೆಗಳ ಶತ್ರು. ಆದ್ದರಿಂದ, ಪೆಕ್ಟಿನ್ ಅಂಶ ಹೆಚ್ಚಿದ್ದರೆ ಮೊಡವೆಗಳು ಏಳುವುದಿಲ್ಲ.