Horoscope ದಿನ ಭವಿಷ್ಯ | ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು, ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ

Today Horoscope ಮಾರ್ಚ್ 13, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope ದಿನ ಭವಿಷ್ಯ | ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು, ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ
ದಿನ ಭವಿಷ್ಯ
Follow us
TV9 Web
| Updated By: ganapathi bhat

Updated on:Apr 06, 2022 | 7:11 PM

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಅಮವಾಸ್ಯೆ ತಿಥಿ, ಶನಿವಾರ, ಮಾರ್ಚ್ 13, 2021. ಪೂರ್ವಾಭಾದ್ರೆ ನಕ್ಷತ್ರ, ರಾಹುಕಾಲ : ಇಂದು ಬೆಳಿಗ್ಗೆ 9.25 ರಿಂದ ಇಂದು ಬೆಳಿಗ್ಗೆ 10.55ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.25 ನಿಮಿಷ. ಸೂರ್ಯಾಸ್ತ: ಸಂಜೆ 6.25 ನಿಮಿಷ.

ತಾ.13-03-2021 ರ ಶನಿವಾರದ, ರಾಶಿಭವಿಷ್ಯ

ಮೇಷ: ಸವಾಲುಗಳನ್ನು ಹೊಸ ರೀತಿಯಲ್ಲಿ ಎದುರಿಸಲು ಸಜ್ಜಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾತ್ಮಕತೆಯಿಂದ ಎಲ್ಲರ ಮನಗೆಲ್ಲಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಚಿಂತೆ ಬೇಡ. ಶುಭಸಂಖ್ಯೆ 6

ವೃಷಭ: ಇನ್ನೊಬ್ಬರನ್ನು ಮೆಚ್ಚಿಸಲು ನಿಮ್ಮತನವನ್ನು ಮರೆಯಬೇಕಿಲ್ಲ. ಮನಸ್ಸಿಗೆ ಹಿಡಿಸಿದ ಕೆಲಸ ಮಾಡಲಿದ್ದೀರಿ. ಸರಕಾರಿ ನೌಕರರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಅತಿಯಾದ ವಿಶ್ವಾಸವೂ ವಂಚನೆಗೆ ಕಾರಣವಾದೀತು, ಎಚ್ಚರ. ಶುಭಸಂಖ್ಯೆ 8

ಮಿಥುನ: ಬಹುದಿನಗಳಿಂದ ಕುಟುಂಬ ಸದಸ್ಯರು ಮಾಡುತ್ತಿದ್ದ ಬೇಡಿಕೆ ಪೂರ್ತಿ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಿಲ್ಲದಿದ್ದರೂ ನಷ್ಟವಾಗದು. ಶುಭಸಂಖ್ಯೆ 1

ಕಟಕ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು. ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಶುಭಸಂಖ್ಯೆ 9

ಸಿಂಹ: ಅನಿವಾರ್ಯ ಸಂದರ್ಭಗಳಲ್ಲಿ ಕೆಲವೊಂದು ಹೊಂದಾಣಿಕೆ ಮಾಡುವುದು ಅನಿವಾರ್ಯವೆನಿಸಲಿದೆ. ಇಷ್ಟ ಮಿತ್ರರ ಭೇಟಿಯಾಗಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಚಿಂತೆ ಬೇಡ. ಶುಭಸಂಖ್ಯೆ 2

ಕನ್ಯಾ: ಉದ್ಯೋಗ ನಿಮಿತ್ತ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ದೇವತಾ ಪ್ರಾರ್ಥನೆ ಮಾಡಿ. ಶುಭಸಂಖ್ಯೆ 7

ತುಲಾ: ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಗುರಿಯಾದೀತು. ಹಾಗಿದ್ದರೂ ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವ ಪ್ರಯತ್ನ ಬೇಡ. ಸ್ವಯಂ ವ್ಯಾಪಾರಿಗಳಿಗೆ ಶತ್ರುಬಾಧೆ ಕಂಡುಬಂದೀತು. ತಾಳ್ಮೆಯಿರಲಿ. ಶುಭಸಂಖ್ಯೆ 4

ವೃಶ್ಚಿಕ: ಇಷ್ಟಮಿತ್ರರೊಂದಿಗೆ ಸದ್ಯದಲ್ಲೇ ಪ್ರವಾಸ ಕೈಗೊಳ್ಳುವ ಯೋಗ ಕೂಡಿಬರಲಿದೆ. ಸಂಗಾತಿಯ ಬಹುದಿನಗಳ ಬೇಡಿಕೆ ಪೂರೈಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ಪೂರ್ತಿಯಾಗಲಿವೆ. ಕಿರು ಓಡಾಟ ನಡೆಸಲಿದ್ದೀರಿ. ಶುಭಸಂಖ್ಯೆ 6

ಧನು: ವೃತ್ತಿರಂಗದಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವೊಂದು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಾಲಗಾರರ ಚಿಂತೆ ಕಾಡಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬಂದೀತು. ಅನಿರೀಕ್ಷಿತವಾಗಿ ಹಳೆಯ ಸಂಬಂಧಿಕರನ್ನು ಭೇಟಿ ಮಾಡಲಿದ್ದೀರಿ. ಶುಭಸಂಖ್ಯೆ 3

ಮಕರ: ಯಾವುದೇ ವಿಚಾರ ಅಥವಾ ವ್ಯಕ್ತಿಗಳನ್ನು ಮನಸ್ಸಿಗೆ ಅತಿಯಾಗಿ ಹಚ್ಚಿಕೊಂಡು ಕೊರಗುವುದು ಬೇಡ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ ಸಂಪಾದಿಸುವ ಯೋಗ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ. ಶುಭಸಂಖ್ಯೆ 8

ಕುಂಭ: ವೃತ್ತಿರಂಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ನಿರಾಸೆಯಾದೀತು. ಆದರೆ ಭರವಸೆ ಕಳೆದುಕೊಳ್ಳಬೇಡಿ. ದಾಯಾದಿ ಕಲಹಗಳಿಗೆ ಹಿರಿಯರಿಂದ ಪರಿಹಾರ ಸಿಗಲಿದೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಶುಭಸಂಖ್ಯೆ 4

ಮೀನ: ಕೆಲವೊಂದು ವಿಚಾರಗಳಲ್ಲಿ ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಮನೆಗೆ ಬಂಧು ಮಿತ್ರರ ಆಗಮನವಾಗಲಿದ್ದು, ಖರ್ಚು ವೆಚ್ಚಗಳಾದೀತು. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ. ಶುಭಸಂಖ್ಯೆ 5

Basavaraj guruji

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Published On - 7:13 am, Sat, 13 March 21

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?