Health Tips: ಅಜೀರ್ಣ ಸಮಸ್ಯೆಗಳಿಗೆ ನಿಜವಾದ ಕಾರಣವೇನು? ಯಾವ ರೀತಿ ತಡೆಗಟ್ಟಬಹುದು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 02, 2024 | 3:33 PM

ಅಜೀರ್ಣತೆ, ಗ್ಯಾಸ್, ಎದೆಯುರಿ ಸಮಸ್ಯೆಗಳಿಗೆ ಮುಖ್ಯ ಕಾರಣವೇನು ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ನಮ್ಮ ಅನಿಯಮಿತ ಆಹಾರ ಪದ್ಧತಿಯೇ ಇವುಗಳಿಗೆ ಕಾರಣವಾಗಿದೆ. ಕಟ್ಟುನಿಟ್ಟಾದ ನಿಯಮಗಳಿಗೆ ವಿರುದ್ಧವಾಗಿ ತಿನ್ನುವುದು ಈ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ನೀವು ಎಣ್ಣೆ- ಮಸಾಲೆಯುಕ್ತ ಆಹಾರ, ಫಾಸ್ಟ್ ಫುಡ್ ಮತ್ತು ತಂಪು ಪಾನೀಯಗಳನ್ನು ಸೇವನೆ ಮಾಡಿದರೆ, ಜೀರ್ಣಕಾರಿ ಸಮಸ್ಯೆ ಅಷ್ಟು ಸುಲಭವಾಗಿ ಕಡಿಮೆಯಾಗುವುದಿಲ್ಲ ಬದಲಾಗಿ ಹೆಚ್ಚುತ್ತಾ ಹೋಗುತ್ತದೆ. ಅಜೀರ್ಣವನ್ನು ಕಡಿಮೆ ಮಾಡಿಕೊಳ್ಳಲು, ನೀವು ನಿಮ್ಮ ಆಹಾರ ಪದ್ಧತಿಯ ಜೊತೆಗೆ, ಜೀವನಶೈಲಿಯನ್ನು ಸಹ ಬದಲಾಯಿಸಿಕೊಳ್ಳಬೇಕು. ಅಜೀರ್ಣ ಸಮಸ್ಯೆಯನ್ನು ತಡೆಗಟ್ಟಲು ಕೆಲವು ಆಯುರ್ವೇದ ಸಲಹೆಗಳು ಇಲ್ಲಿವೆ. ನೀವು ಇವುಗಳನ್ನು ಅನುಸರಿಸಿ ಪರಿಹಾರ ಪಡೆದುಕೊಳ್ಳಿ.

Health Tips: ಅಜೀರ್ಣ ಸಮಸ್ಯೆಗಳಿಗೆ ನಿಜವಾದ ಕಾರಣವೇನು? ಯಾವ ರೀತಿ ತಡೆಗಟ್ಟಬಹುದು
ಸಾಂದರ್ಭಿಕ ಚಿತ್ರ
Follow us on

ಹೊಟ್ಟೆ ಸರಿಯಾಗಿ ಇಲ್ಲದಿದ್ದರೆ, ಮನಸ್ಥಿತಿಯೂ ಸರಿ ಇರುವುದಿಲ್ಲ. ಜಠರಗರುಳಿನ ಅಸ್ವಸ್ಥತೆಗಳು ಹೆಚ್ಚಾಗಿ ಹೊಟ್ಟೆ ನೋವು, ಅಜೀರ್ಣ ಮತ್ತು ಮಲಬದ್ಧತೆಗೆ ಕಾರಣವಾಗುತ್ತವೆ. ಹಾಗಾದರೆ ಅಜೀರ್ಣತೆ, ಗ್ಯಾಸ್, ಎದೆಯುರಿ ಸಮಸ್ಯೆಗಳಿಗೆ ಮುಖ್ಯ ಕಾರಣವೇನು ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ನಮ್ಮ ಅನಿಯಮಿತ ಆಹಾರ ಪದ್ಧತಿಯೇ ಇವುಗಳಿಗೆ ಕಾರಣವಾಗಿದೆ. ಕಟ್ಟುನಿಟ್ಟಾದ ನಿಯಮಗಳಿಗೆ ವಿರುದ್ಧವಾಗಿ ತಿನ್ನುವುದು ಈ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ನೀವು ಎಣ್ಣೆ- ಮಸಾಲೆಯುಕ್ತ ಆಹಾರ, ಫಾಸ್ಟ್ ಫುಡ್ ಮತ್ತು ತಂಪು ಪಾನೀಯಗಳನ್ನು ಸೇವನೆ ಮಾಡಿದರೆ, ಜೀರ್ಣಕಾರಿ ಸಮಸ್ಯೆ ಅಷ್ಟು ಸುಲಭವಾಗಿ ಕಡಿಮೆಯಾಗುವುದಿಲ್ಲ ಬದಲಾಗಿ ಹೆಚ್ಚುತ್ತಾ ಹೋಗುತ್ತದೆ. ಅಜೀರ್ಣವನ್ನು ಕಡಿಮೆ ಮಾಡಿಕೊಳ್ಳಲು, ನೀವು ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಬೇಕು. ಆದರೆ ಕೆಲವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡಿದ ನಂತರವೂ ಅನೇಕ ರೀತಿಯ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಾರೆ. ಆದ್ದರಿಂದ ಆಹಾರದ ಜೊತೆಗೆ, ಜೀವನಶೈಲಿಯನ್ನು ಸಹ ಬದಲಾಯಿಸಿಕೊಳ್ಳಬೇಕು. ಅಜೀರ್ಣ ಸಮಸ್ಯೆಯನ್ನು ತಡೆಗಟ್ಟಲು ಕೆಲವು ಆಯುರ್ವೇದ ಸಲಹೆಗಳು ಇಲ್ಲಿವೆ. ನೀವು ಇವುಗಳನ್ನು ಅನುಸರಿಸಿ ಪರಿಹಾರ ಪಡೆದುಕೊಳ್ಳಿ.

ಮಧ್ಯಾಹ್ನದ ನಂತರ ಫಾಸ್ಟ್ ಫುಡ್ ತಿನ್ನಬೇಡಿ

ಕೆಲವೊಮ್ಮೆ ನಿಮ್ಮ ಮುಂದೆ ರುಚಿಕರವಾದ, ಫಾಸ್ಟ್ ಫುಡ್ ಇದ್ದರೆ ಅದನ್ನು ತಿನ್ನದಿರಲು ಸಾಧ್ಯವಾಗುವುದಿಲ್ಲ. ಅದು ಪಿಜ್ಜಾ ಆಗಿರಲಿ ಅಥವಾ ಬಿರಿಯಾನಿಯೇ ಆಗಿರಲಿ ಇಂತಹ ಆಹಾರಗಳನ್ನು ಮಧ್ಯಾಹ್ನದ ಊಟದ ನಂತರ ತೆಗೆದುಕೊಳ್ಳಬಾರದು. ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ಇಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹಾಗಾಗಿ ಕೊಬ್ಬು ಹೆಚ್ಚಾಗುತ್ತದೆ. ಹಾಗಾಗಿ ಇಂತಹ ಆಹಾರಗಳನ್ನು ಸೇವನೆ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ನೀವು ಈ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸುಮಾರು ಅರ್ಧದಷ್ಟು ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಬಹುದು. ಜೊತೆಗೆ ನಿಮ್ಮ ತೂಕವೂ ಕೂಡ ನಿಯಂತ್ರಣದಲ್ಲಿರುತ್ತದೆ.

ಪ್ರತಿದಿನ ತಪ್ಪದೆ ನಡೆಯಿರಿ

ಸೋಮಾರಿತನವಿದ್ದಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಮಧ್ಯಾಹ್ನ ಅಥವಾ ರಾತ್ರಿ ಆಹಾರ ಸೇವನೆ ಮಾಡಿ ಮಲಗುವುದು ಉತ್ತಮ ಅಭ್ಯಾಸವಲ್ಲ. ಬದಲಿಗೆ, ಊಟದ ನಂತರ 30 ನಿಮಿಷಗಳ ಕಾಲ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಈ ರೀತಿ ಮಾಡಿದರೆ, ಆಹಾರ ಬೇಗನೆ ಜೀರ್ಣವಾಗುತ್ತದೆ. ಇದರಿಂದ ಅನೇಕ ರೋಗಗಳು ಬರುವುದನ್ನು ಕೂಡ ತಡೆಗಟ್ಟಬಹುದು.

ಇದನ್ನೂ ಓದಿ: ಮಹಿಳೆಯರೇ ತುಪ್ಪದಲ್ಲಿ ಹುರಿದ ಖರ್ಜೂರ ಸೇವನೆ ಮಾಡಿ, ನಿಮ್ಮ ದೇಹದಲ್ಲಾಗುವ ಬದಲಾವಣೆ ನೋಡಿ

ಸಾಕಷ್ಟು ನಿದ್ರೆ ಮಾಡಿ

ಪ್ರತಿನಿತ್ಯವೂ ನಿದ್ರೆ ಸರಿಯಾಗಿ ಮಾಡದಿದ್ದರೆ, ಗ್ಯಾಸ್ ಮತ್ತು ಎದೆಯುರಿ ಸಮಸ್ಯೆಗಳು ಹೆಚ್ಚಾಗಬಹುದು. ಇದಲ್ಲದೆ, ಮಧುಮೇಹ, ಬೊಜ್ಜು ಮತ್ತು ಖಿನ್ನತೆಯ ಅಪಾಯವು ಹೆಚ್ಚಾಗುತ್ತದೆ. ರಾತ್ರಿ ಸಮಯದಲ್ಲಿ ಕನಿಷ್ಠ 7- 8 ಗಂಟೆಗಳ ನಿದ್ರೆ ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ