ಬೆಂಗಳೂರು, ಡಿಸೆಂಬರ್ 11: ಕರ್ನಾಟಕದಲ್ಲಿ ಈ ವರ್ಷ ತೀವ್ರ ಅತಿಸಾರ ಕಾಯಿಲೆ (Acute diarrhoeal disease)ಯಿಂದ 1.32 ಲಕ್ಷ ಜನರು ಬಳಲುತ್ತಿದ್ದಾರೆ. ಮೇ ಮತ್ತು ಜೂನ್‌ನಲ್ಲಿ ಗರಿಷ್ಠ ಮಟ್ಟವನ್ನು ಗಮನಿಸಿದರೆ, ಕಲುಷಿತ ನೀರಿನಿಂದ (Contaminated water) ಜನರು ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ವೈದ್ಯರು (Doctors) ಅಭಿಪ್ರಾಯಪಟ್ಟಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ.ಪರ್ವೇಶ್ ಕುಮಾರ್ ಜೈನ್ ಮಾತನಾಡಿ, ಬೇಸಿಗೆ ಮತ್ತು ಮಳೆಗಾಲದಲ್ಲಿ ಹೆಚ್ಚಿನ ಎಸಿಡಿ ಪ್ರಕರಣಗಳು ಕಂಡುಬರುತ್ತವೆ. ಏಕೆಂದರೆ ಮಳೆಗಾಲದಲ್ಲಿ ನೀರು ಮತ್ತು ಆಹಾರವು ಹೆಚ್ಚಾಗಿ ಕಲುಷಿತಗೊಳ್ಳುತ್ತದೆ. ಬೇಸಿಗೆಯಲ್ಲಿ ಸುಲಭವಾಗಿ ಹಳಸಿ ಹೋಗುತ್ತದೆ. ಅಂತಹ ಆಹಾರ ಮತ್ತು ನೀರಿನ ಸೇವನೆಯು ಅತಿಸಾರದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಎಂದು ಹೇಳಿದರು.
ಆದಾಗ್ಯೂ, ಈ ರೋಗವು ಮಾರಣಾಂತಿಕವಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಂ-ಸೀಮಿತವಾಗಿರುತ್ತದೆ. ಶೇ 90 ರಷ್ಟು ಪ್ರಕರಣಗಳನ್ನು ಸಾಮಾನ್ಯ ವೈದ್ಯರ ಮಟ್ಟದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಕೆಲವು ತೀವ್ರತರವಾದ ಪ್ರಕರಣಗಳಿಗೆ ಮಾತ್ರ ತಜ್ಞರ ಚಿಕಿತ್ಸೆ ಅಗತ್ಯವಿರುತ್ತದೆ ಎಂದರು.
ಇದನ್ನೂ ಓದಿ: ಅತಿಸಾರವನ್ನು ತಡೆಯುವ ಸುಲಭ ವಿಧಾನಗಳು ಇಲ್ಲಿವೆ
ರಾಜ್ಯ ಕಣ್ಗಾವಲು ಘಟಕವು ನವೆಂಬರ್ 27 ರಿಂದ ಡಿಸೆಂಬರ್ 3 ರವರೆಗೆ ಬಿಡುಗಡೆ ಮಾಡಿದ ಇತ್ತೀಚಿನ ಸಾಪ್ತಾಹಿಕ ಸಾಂಕ್ರಾಮಿಕ ರೋಗಗಳ ವರದಿಯು ಕರ್ನಾಟಕದಾದ್ಯಂತ 2,667 ಪ್ರಕರಣಗಳು ವರದಿಯಾಗಿವೆ. ಮಳೆಗಾಲದಲ್ಲಿ ಪ್ರವಾಹ ಮತ್ತು ಮಳೆ ನೀರಿನಿಂದ ತುಂಬಿ ಹರಿಯುವ ಚರಂಡಿಗಳು ಉಕ್ಕಿ ಹರಿಯುತ್ತವೆ. ಇಂತಹ ಸಂದರ್ಭಗಳಲ್ಲಿ, ಅಂತರ್ಜಲವು ಕೂಡ ಕಲುಷಿತಗೊಳ್ಳುತ್ತದೆ. ಕಲುಷಿತಗೊಂಡ ನೀರು ಮತ್ತು ಈ ನೀರಿನಿಂದ ಬಳೆದ ಆಹಾರ ಸೇವನೆಯಿಂದ ಟೈಫಾಯಿಡ್ ಅಥವಾ ಅತಿಸಾರದಂತಹ ಸೋಂಕು ಉಲ್ಬಣಗೊಳ್ಳುತ್ತದೆ.
ಬೆಂಗಳೂರಿನಂತಹ ನಗರದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ, ಹೆಚ್ಚಿನ ಜನಸಂಖ್ಯೆಯ ಜನರು ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಟ್ಯಾಂಕರ್ ನೀರಿನ ಮೂಲ ಮತ್ತು ಅವಧಿಯ ಬಗ್ಗೆ ಜನರಿಗೆ ತಿಳಿದಿಲ್ಲದ ಕಾರಣ ಅತಿಸಾರ ಉಂಟಾಗುತ್ತಿದೆ ಎಂದು ವೈದ್ಯರು ನೀರಿನ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.
ಉಬ್ಬಿದ ಹೊಟ್ಟೆ, ಸೆಳೆತ, ತೆಳುವಾದ ಅಥವಾ ನೀರಿನಂಶದ ಮಲ, ವಾಕರಿಕೆ, ವಾಂತಿ, ಮಲದ ಮೂಲಕ ರಕ್ತ ಹೊರಬರುವುದು. ತೂಕ ಇಳಿಕೆ ಮತ್ತು ಜ್ವರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Mon, 11 December 23