ಅತಿಸಾರವನ್ನು ತಡೆಯುವ ಸುಲಭ ವಿಧಾನಗಳು ಇಲ್ಲಿವೆ

Loose Motion Home Remedies: ಅತಿಸಾರ ಅಥವಾ ಭೇದಿ ಉಂಟಾದಾಗ ತೀವ್ರವಾದ ಸುಸ್ತು, ಹೊಟ್ಟೆನೋವು, ವಾಂತಿ ಬಂದಂತಾಗುವುದು, ನಿರ್ಜಲೀಕರಣ ಹೀಗೆ ನಾನಾ ಸಮಸ್ಯೆಗಳಾಗುತ್ತವೆ. ಹೀಗಾಗಿ, ಕಲವು ಮನೆಮದ್ದುಗಳನ್ನು ಬಳಸುವ ಮೂಲಕ ಅತಿಸಾರವನ್ನು ನಿಯಂತ್ರಿಸಬಹುದು.

ಅತಿಸಾರವನ್ನು ತಡೆಯುವ ಸುಲಭ ವಿಧಾನಗಳು ಇಲ್ಲಿವೆ
ಅತಿಸಾರ
Follow us
|

Updated on: Sep 25, 2023 | 7:05 PM

ಅತಿಸಾರ ಅಥವಾ ಭೇದಿ ಪ್ರತಿಯೊಬ್ಬರನ್ನೂ ಆಗಾಗ ಕಾಡುವ ಆರೋಗ್ಯ ಸಮಸ್ಯೆ. ಒಂದೇ ದಿನದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಡಿಲವಾಗಿ ಮಲವಿಸರ್ಜನೆ ಆದರೆ ಅದನ್ನು ಅತಿಸಾರ ಎಂದು ಪರಿಗಣಿಸಲಾಗುತ್ತದೆ. ಈ ಭೇದಿ ಸಮಸ್ಯೆ ಸಾಮಾನ್ಯವಾಗಿ ಒಂದದೆರಡು ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ವಾಸಿಯಾಗುತ್ತದೆ. ಆಹಾರದ ವ್ಯತ್ಯಾಸದಿಂದ ಭೇದಿ ಉಂಟಾಗುವ ಸಾಧ್ಯತೆಗಳು ಹೆಚ್ಚು. 2 ದಿನವಾದರೂ ಈ ಸಮಸ್ಯೆ ಬಗೆಹರಿಯದಿದ್ದರೆ ವೈದ್ಯರನ್ನು ಕಾಣಬೇಕು. ಆದರೂ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಅತಿಸಾರವನ್ನು ನಿಯಂತ್ರಿಸಬಹುದು.

ಅತಿಸಾರಕ್ಕೆ ಕಾರಣಗಳು:

– ಜ್ವರ, ನೊರೊವೈರಸ್ ಅಥವಾ ರೋಟವೈರಸ್​ನಂತಹ ವೈರಸ್​ಗಳು.

– ಬ್ಯಾಕ್ಟೀರಿಯಾ ಅಥವಾ ಕಲುಷಿತವಾಗಿರುವ ಆಹಾರ, ನೀರು.

– ಮೆಗ್ನೀಸಿಯಮ್ ಹೊಂದಿರುವ ಪ್ರತಿಜೀವಕಗಳು, ಕ್ಯಾನ್ಸರ್ ಔಷಧಿಗಳು ಮತ್ತು ಆಂಟಾಸಿಡ್​ಗಳಂತಹ ಔಷಧಗಳು.

– ಕ್ರೋನ್ಸ್ ಕಾಯಿಲೆಯಂತಹ ಹೊಟ್ಟೆ, ಸಣ್ಣ ಕರುಳು ಅಥವಾ ದೊಡ್ಡ ಕರುಳಿನ ರೋಗಗಳು.

– ಆಹಾರ ಅಸಹಿಷ್ಣುತೆಗಳು.

– ಆಹಾರದ ಕಳಪೆ ಹೀರಿಕೊಳ್ಳುವಿಕೆ.

– ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಪಡಿಸುವ ಆಹಾರವನ್ನು ತಿನ್ನುವುದು.

ಇದನ್ನೂ ಓದಿ: ಫಂಗಲ್ ಇನ್​ಫೆಕ್ಷನ್ ಹೇಗೆ ಹರಡುತ್ತದೆ? ಇದನ್ನು ನಿಯಂತ್ರಿಸುವುದು ಹೇಗೆ?

ಅತಿಸಾರಕ್ಕೆ ಕೆಲವು ಮನೆಮದ್ದುಗಳು ಹೀಗಿವೆ:

1. ಸೇಬು, ತುಪ್ಪ, ಏಲಕ್ಕಿ ಮತ್ತು ಜಾಯಿಕಾಯಿ:

ತುಪ್ಪ, ಏಲಕ್ಕಿ ಮತ್ತು ಜಾಯಿಕಾಯಿಯೊಂದಿಗೆ ಸೇಬನ್ನು ಬೇಯಿಸಿ ಮತ್ತು ಈ ಮಿಶ್ರಣವನ್ನು ಸೇವಿಸಿ.

2. ಬಾಳೆಹಣ್ಣು, ತುಪ್ಪ, ಏಲಕ್ಕಿ ಮತ್ತು ಜಾಯಿಕಾಯಿ:

ಒಂದು ಅಥವಾ 2 ಬಾಳೆಹಣ್ಣನ್ನು ತುಪ್ಪದೊಂದಿಗೆ ಬೆರೆಸಿ, 1 ಚಿಟಿಕೆ ಏಲಕ್ಕಿ ಮತ್ತು ಜಾಯಿಕಾಯಿಯನ್ನು ಬೆರೆಸಿಕೊಂಡು ತಿನ್ನಿ.

3. ಅನ್ನ, ಮೊಸರು ಮತ್ತು ತುಪ್ಪ:

ಬಿಸಿ ಅನ್ನವನ್ನು ಮೊಸರಿನೊಂದಿಗೆ ಅಥವಾ ತುಪ್ಪದೊಂದಿಗೆ ತಿನ್ನುವುದರಿಂದ ಭೇದಿಯನ್ನು ನಿಯಂತ್ರಿಸಬಹುದು.

4. ಮೊಸರು, ಶುಂಠಿ ಮತ್ತು ನೀರು:

ತುರಿದ ಹಸಿ ಶುಂಠಿಯೊಂದಿಗೆ ನೀರು ಮತ್ತು ಮೊಸರನ್ನು ಮಿಶ್ರಣ ಮಾಡುವುದರಿಂದ ಭೇದಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: Lychee Side Effects: ಅತಿಯಾಗಿ ಲಿಚಿ ಹಣ್ಣು ತಿಂದರೆ ಏನಾಗುತ್ತೆ?

5. ಶುಂಠಿ, ಸಕ್ಕರೆ ಮತ್ತು ಬೆಚ್ಚಗಿನ ನೀರು:

ಶುಂಠಿಯ ಪುಡಿ ಮತ್ತು ಸಕ್ಕರೆಯನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ಭೇದಿಯನ್ನು ತಡೆಗಟ್ಟಲು ಸಹಾಯಕ.

6. ತುಪ್ಪ, ಜಾಯಿಕಾಯಿ, ಶುಂಠಿ ಮತ್ತು ಸಕ್ಕರೆ:

ತುಪ್ಪ, ಜಾಯಿಕಾಯಿ, ಶುಂಠಿ ಪುಡಿ ಮತ್ತು ಸಕ್ಕರೆಯ ಮಿಶ್ರಣವನ್ನು ದಿನಕ್ಕೆ 2ರಿಂದ 3 ಬಾರಿ 2-3 ದಿನಗಳವರೆಗೆ ಸೇವಿಸಬಹುದು.

7. ಸೋಂಪು ಮತ್ತು ಶುಂಠಿ ಪುಡಿ:

ಸೋಂಪಿನ ಪೌಡರ್ ಮತ್ತು ಶುಂಠಿ ಪುಡಿಯ ಮಿಶ್ರಣವನ್ನು ದಿನಕ್ಕೆ 2ರಿಂದ 3 ಬಾರಿ ಜಗಿಯುವುದು.

8. ಕಪ್ಪು ಚಹಾ, ನಿಂಬೆ ರಸ ಮತ್ತು ಏಲಕ್ಕಿ ಅಥವಾ ಜಾಯಿಕಾಯಿ:

1 ಚಿಟಿಕೆ ನಿಂಬೆ ರಸ ಮತ್ತು 1 ಚಿಟಿಕೆ ಏಲಕ್ಕಿ ಅಥವಾ ಜಾಯಿಕಾಯಿಯೊಂದಿಗೆ ಒಂದು ಕಪ್ ಬಿಸಿಯಾದ ಕಪ್ಪು ಚಹಾವನ್ನು ಕುಡಿಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ